/newsfirstlive-kannada/media/media_files/2026/01/05/amur-falcon-2026-01-05-20-49-41.jpg)
ಪುರಾಣಗಳಲ್ಲಿ, ಜಾನಪದಗಳಲ್ಲಿ ಬರುವ ಅದೆಷ್ಟೋ ಪ್ರೇಮ ಕತೆಗಳಿಗೆ ಹಕ್ಕಿಗಳು ‘ಪ್ರೀತಿಯ ಸೇತುವೆ’ಯಾಗಿದ್ದನ್ನ ಕೇಳಿದ್ದೇವೆ. ಅದೆಷ್ಟೋ ಪತ್ರ ವ್ಯವಹಾರಗಳಿಗೆ ಸ್ಫೂರ್ತಿಯಾದ ಕತೆಗಳೂ ನಮ್ಮ ಮುಂದಿವೆ. ಅದು ಕಾಲ್ಪನಿಕವಾಗಿದ್ದರೂ ಈ ಪಕ್ಷಿಗಳ ಸಾಹಸದ ಪ್ರಸಂಗಗಳು ಹುಬ್ಬೇರಿಸುವಂತೆ ಇವೆ. ಈಗ ವಿಷಯ ಅದಲ್ಲ, ಇವತ್ತು ರಾಷ್ಟ್ರೀಯ ಪಕ್ಷಿ ದಿನ. ಇದರ ವಿಶೇಷವಾಗಿ, ಭಾರತೀಯ ವಿಜ್ಞಾನಿಗಳು ಅಚ್ಚರಿಯ ಮಾಹಿತಿಯೊಂದನ್ನ ಹಂಚಿಕೊಂಡಿದ್ದಾರೆ! ಅಮುರ್ ಫಾಲ್ಕನ್ ಎಂಬ ಮೂರು ಹಕ್ಕಿಗಳ ಮೇಲೆ ಕಣ್ಣಿಟ್ಟಿದ್ದ ವಿಜ್ಞಾನಿಗಳು, ಕೊನೆಯಲ್ಲಿ ಅಚ್ಚರಿಯ ವಿಷಯವನ್ನ ಕಂಡುಕೊಂಡಿದ್ದಾರೆ.
ವಿಷಯ ಏನು..?
ಮೊಟ್ಟೆ ಇಡೋ, ಮರಿ ಮಾಡೋ ಪ್ರಾಯ.. ಈ ವಿಶೇಷ ದಿನಗಳಲ್ಲಿ ಕೆಲವು ಪ್ರಾಣಿ, ಪಕ್ಷಿಗಳು ನವ ಜೋಡಿಗಳು ಹನಿಮೂನ್‌ಗೆ ಹೋಗುವಂತೆ ವಲಸೆ ಹೋಗುತ್ತವೆ. ಕೆಲವೊಮ್ಮೆ ಋತುಗಳ ಅನುಸಾರವಾಗಿಯೂ ಪಕ್ಷಿಗಳು ಒಂದು ಕಡೆಯಿಂದ ಇನ್ನೊಂದು ಕಡೆ ಪ್ರಯಾಣ ಮಾಡುತ್ತವೆ. ಅದು ಬರೀ ಒಂದು ನಾಡಿನಿಂದ ಇನ್ನೊಂದು ನಾಡಿಗೆ ಅಲ್ಲ. ಒಂದು ಕಾಡಿನಿಂದ ಮತ್ತೊಂದು ಕಾಡಿಗೂ ಅಲ್ಲ. ಒಂದು ಖಂಡದಿಂದ, ಇನ್ನೊಂದು ಖಂಡಗಳಿಗೆ ಪ್ರಯಾಣ ಬೆಳಸುತ್ತವೆ ಅಂದರೆ ನೀವು ನಂಬಲೇ ಬೇಕು. ಅಂತೆಯೇ ನಮ್ಮ ನಮ್ಮ ವಿಜ್ಞಾನಿಗಳು, ಚಿಕ್ಕದಾದ ಮೂರು ಫಾಲ್ಕನ್‌ಗಳನ್ನ ಹಾರಿಬಿಟ್ಟು ಅವುಗಳ ಮೇಲೆ ಕಣ್ಣಿಟ್ಟಿದ್ದರು. ಅಚ್ಚರಿಯ ಸಂಗತಿ ಅಂದರೆ, ಕೇವಲ ಐದು ದಿನಗಳಲ್ಲಿ ಬರೋಬ್ಬರಿ 5000 ಕಿಲೋ ಮೀಟರ್​ ದೂರ ಹಾರಿ ಹೋಗಿವೆ.
ಇದನ್ನೂ ಓದಿ: ಖರ್ಚಿಗೆ ಅಮ್ಮ ಹಣ ಕೊಡಲಿಲ್ಲ ಅಂತ ಬೆಂಕಿ ಹಚ್ಚಿಕೊಂಡ ಮಗ..!
/filters:format(webp)/newsfirstlive-kannada/media/media_files/2026/01/05/amur-falcon-4-2026-01-05-20-51-52.jpg)
ಸುಮಾರು 150 ರಿಂದ 200 ಕಿಲೋ ಗ್ರಾಂ ತೂಕದ ಮೂರು ಹಕ್ಕಿಗಳನ್ನು ಭಾರತದಿಂದ ಹಾರಿ ಬಿಡಲಾಗಿತ್ತು. ಅವು ಕೇವಲ ಐದು ದಿನಗಳಲ್ಲಿ 5000 ಕಿಲೋ ಮೀಟರ್ ದೂರ ಪ್ರಯಾಣಿಸಿವೆ. ಅವುಗಳ ಜರ್ನಿ ಹೇಗಿತ್ತು ಅಂದರೆ, ಭಾರತದ ಭೂಮಿಯನ್ನ ದಾಟಿ, ಅರೇಬಿಯನ್ ಸಮುದ್ರವನ್ನೂ ದಾಟಿ, ಆಫ್ರಿಕಾದ ಚಳಿಗಾಲದ ತಾಣವನ್ನು ಕ್ರಮಿಸಿವೆ.
ವಿಜ್ಞಾನಿಗಳಿಗಳು ಮಾಡಿದ್ದು ಏನು..?
ವರದಿಗಳ ಪ್ರಕಾರ ಫಾಲ್ಕನ್‌ಗಳು 2025ರ ಅಂತ್ಯದ ವೇಳೆಗೆ ಆಫ್ರಿಕಾಗೆ ಹಾರಿ ಹೋಗಿವೆ. ಅವುಗಳ ಸಂರಕ್ಷಣಾಕಾರರು ಫಾಲ್ಕಾನ್‌ಗಳ ಚಲನ, ವಲನಗಳ ಮೇಲೆ ನಿಗಾ ಇಡಲು ಉಪಗ್ರಹಗಳನ್ನು ಬಳಕೆ ಮಾಡಿದ್ದಾರೆ. ಒಂದು ದೇಶದಿಂದ ಇನ್ನೊಂದು ದೇಶ, ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ಹೋಗುವ ಪ್ರತಿಯೊಂದು ಮುಮೆಂಟ್ ಕೂಡ ಟ್ರ್ಯಾಕಿಂಗ್ ಮಾಡಿದ್ದಾರೆ. ಅಂತಿಮವಾಗಿ ಭಾರತದ ಈಶಾನ್ಯ ರಾಜ್ಯಗಳ ಕಾಡುಗಳಿಂದ ಆ ಪಕ್ಷಿಗಳು ಸುರಕ್ಷಿತವಾಗಿ ಆಫ್ರಿಕಾದ ಭೂಭಾಗವನ್ನು ತಲುಪಿವೆ.
ಇದನ್ನೂ ಓದಿ: ಕೇಂದ್ರದ ಬಜೆಟ್ ನಲ್ಲಿ ಮಹಿಳೆಯರಿಗೆ ಹಣಕಾಸಿನ ಶಕ್ತಿ ನೀಡುವ ಯೋಜನೆಗಳ ಘೋಷಣೆ ಸಾಧ್ಯತೆ
/filters:format(webp)/newsfirstlive-kannada/media/media_files/2026/01/05/amur-falcon-5-2026-01-05-20-52-18.jpg)
ನೀರಿಗೆ ಬಿದ್ದರೆ ಕತೆ ಅಷ್ಟೇ
ಉಪಗ್ರಹದ ದತ್ತಾಂಶಗಳ ಪ್ರಕಾರ 5,000-6,000 ಕಿಮೀ ದೂರ ಕ್ರಮಿಸಬಲ್ಲವು ಎಂದು ಹೇಳುತ್ತದೆ. ಹೆಚ್ಚಾಗಿ ಅಮುರ್ ಫಾಲ್ಕನ್​ನಂತಹ ವಲಸೆ ಹಕ್ಕಿಗಳು ಅರೇಬಿಯನ್ ಸಮುದ್ರ ಮತ್ತು ಪಶ್ಚಿಮ ಹಿಂದೂ ಮಹಾಸಾಗರದ ಮೇಲೆ ಸುದೀರ್ಘ ಪ್ರಯಾಣವನ್ನು ನಡೆಸುತ್ತವೆ. ಭಾರವಾದ ಗಾಳಿಯ ನಡುವೆ ಸಾಗುವಾಗ ಭಾರತದ ಭೂಪ್ರದೇಶವನ್ನು ದಾಟುತ್ತಿದ್ದಂತೆ ಈ ಹಕ್ಕಿಗಳ ಮುಂದೆ ವಿಶಾಲವಾದ ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರ ಎದುರಾಗುತ್ತವೆ. ಮಹಾಸಾಗರದ ಮೇಲೆ ಬೀಸುವ ಬಲವಾದ ಹಿಮ್ಮುಖ ಮಾನ್ಸೂನ್ ಗಾಳಿಗಳು ಈ ಹಕ್ಕಿಗಳಿಗೆ ಹಿಂದಿನಿಂದ ದೂಡುವ ಶಕ್ತಿಯನ್ನು ನೀಡುತ್ತವೆ. ಇದರಿಂದ ಹಕ್ಕಿಗಳು ತಮ್ಮ ರೆಕ್ಕೆ ಬಡಿಯಲು ಸಹಕಾರಿಯಾಗಿದೆ. ಅಮುರ್ ಫಾಲ್ಕನ್‌ಗಳು ನೆಲದ ಮೇಲೆ ವಾಸಿಸುವ ಬೇಟೆಗಾರರ ಹಕ್ಕಿಗಳು. ಇವುಗಳಿಗೆ ನೀರಿನ ಮೇಲೆ ಇಳಿಯಲು ಸಾಧ್ಯವಿಲ್ಲ. ಒಂದು ವೇಳೆ ಅವು ಸಮುದ್ರದ ಮೇಲೆ ಹಾರುವಾಗ ಕೆಳಗೆ ಬಿದ್ದರೆ ಸಾವು ಖಚಿತ. ಹಾಗಾಗಿ ಗಾಳಿಯು ತಮಗೆ ಪೂರಕವಾಗಿ ಬೀಸುವ ನಿಖರ ಸಮಯವನ್ನು ನೋಡಿ ಇವು ಪ್ರಯಾಣ ಆರಂಭಿಸುತ್ತವೆ ಎಂದು ಸ್ಯಾಟಲೈಟ್ ಟ್ರ್ಯಾಕಿಂಗ್ ಅಧ್ಯಯನಗಳು ತಿಳಿಸಿವೆ.
/filters:format(webp)/newsfirstlive-kannada/media/media_files/2026/01/05/amur-falcon-3-2026-01-05-20-52-36.jpg)
ಅಮುರ್ ಫಾಲ್ಕನ್‌ಗಳು ಪ್ರಕೃತಿಯ ಅದ್ಭುತ ವಲಸೆಗಾರ ಹಕ್ಕಿಗಳು. ಇವುಗಳು ಪ್ರತಿ ವರ್ಷವೂ ಒಂದು ನಿಶ್ಚಿತ ವೇಳಾಪಟ್ಟಿಯನ್ನು ಅನುಸರಿಸುತ್ತವೆ. ಸಾಮಾನ್ಯವಾಗಿ, ಇವು ಆಫ್ರಿಕಾದಲ್ಲಿ ಚಳಿಗಾಲವನ್ನು ಕಳೆದು ವಸಂತಕಾಲದ ಆರಂಭದಲ್ಲಿ ಮತ್ತೆ ಉತ್ತರ ದಿಕ್ಕಿನತ್ತ ಪ್ರಯಾಣವನ್ನು ಬೆಳೆಸುತ್ತವೆ. ಪ್ರತಿ ವರ್ಷ ಮೇ-ಜೂನ್ ತಿಂಗಳ ಹೊತ್ತಿಗೆ ಇವು ಚೀನಾ ಮತ್ತು ರಷ್ಯಾ ಪ್ರದೇಶಗಳು ಸೇರಿದಂತೆ ಈಶಾನ್ಯ ಏಷ್ಯಾದ ತಮ್ಮ ಮೂಲ ನೆಲೆಗಳನ್ನು ತಲುಪುತ್ತವೆ. ಅಲ್ಲಿ ಈ ಹಕ್ಕಿಗಳು ಸಂತಾನೋತ್ಪತ್ತಿ ನಡೆಸಬಲ್ಲವು. ಈ ನಿರಂತರ ವಲಸೆ ಪ್ರಕ್ರಿಯೆಯು ಪ್ರಕೃತಿಯ ಒಂದು ಅದ್ಭುತ ಚಕ್ರವಾಗಿದೆ.
ಅದ್ಭುತ ಶಕ್ತಿ.. ಗಾಳಿ ಹೇಗೆ ಸಹಾಯ ಮಾಡುತ್ತದೆ?
ವಿಜ್ಞಾನಿಗಳ ಅಧ್ಯಯನ ಪ್ರಕಾರ.. ಈ ಫಾಲ್ಕಾನ್‌ಗಳು ತಮಗೆ ಪೃಕೃತಿದತ್ತವಾಗಿ ಸಿಕ್ಕ ಸ್ವಂತ ಶಕ್ತಿ, ಚಲನೆ ಮತ್ತು ಬಲದ ಮೇಲೆ ದೀರ್ಘವಾಗಿ ಹಾರಾಟ ನಡೆಸುತ್ತವೆ. ಈ ಪಕ್ಷಿಗಳು ನೈಸರ್ಗಿಕ ಗ್ಲೈಡರ್‌ಗಳಂತೆ ಬಲವಾದ ಗಾಳಿಯ ಮೇಲೆ ಹಾರುವ ಮೂಲಕ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸುತ್ತವೆ. ಕಾಲೋಚಿತ ಮಾನ್ಸೂನ್ ಗಾಳಿ ಮತ್ತು ಅರೇಬಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರದ ಮೇಲೆ ಬಲವಾದ, ನಿರಂತರ ಗಾಳಿ ಇರುತ್ತದೆ. ಈ ಗಾಳಿ ಪಕ್ಷಿಗಳ ಶಕ್ತಿಯ ವೆಚ್ಚವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಪಕ್ಕಿಗಳು ಹಾರುವಾಗ ಮುಂದೆ ತಳ್ಳುತ್ತದೆ.
ಅವು ಆಫ್ರಿಕಾಗೆ ಹೋಗಿದ್ದು ಯಾಕೆ..?
ಈ ಪಕ್ಷಿಗಳು ಚಳಿಗಾಲವನ್ನು ಆಫ್ರಿಕಾದಲ್ಲಿ ಕಳೆಯುತ್ತವೆ. ಚಳಿಗಾಲದ ಕೊನೆಯಲ್ಲಿ ಮತ್ತು ವಸಂತಕಾಲದ ಆರಂಭದಲ್ಲಿ ಮತ್ತೆ ಉತ್ತರಕ್ಕೆ ಚಲಿಸುತ್ತವೆ. ಪ್ರತಿ ವರ್ಷ ಮೇ-ಜೂನ್‌ನಲ್ಲಿ ಚೀನಾ ಮತ್ತು ರಷ್ಯಾದ ಪ್ರದೇಶಗಳು ಸೇರಿದಂತೆ ಈಶಾನ್ಯ ಏಷ್ಯಾದ ಸಂತಾನೋತ್ಪತ್ತಿ ಸ್ಥಳಗಳನ್ನು ತಲುಪುತ್ತವೆ. ಕೇವಲ ಐದು ದಿನದಲ್ಲಿ 5000 ಕಿಲೋ ಮೀಟರ್ ದೂರ ಪ್ರಯಾಣಿಸೋದು ಸಾಮಾನ್ಯ ಸಂಗತಿ ಅಲ್ಲ. ಅದಕ್ಕೆ ಪ್ರಕೃತಿದತ್ತಾಗಿ ಪಡೆದ ಆಶೀರ್ವಾದ ಬೇಕೇಬೇಕು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us