/newsfirstlive-kannada/media/media_files/2026/01/05/bigg-boss-tamil-2026-01-05-18-06-20.jpg)
​ ತಮಿಳು ಬಿಗ್​ಬಾಸ್ ಸೀಸನ್​ 9ರಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಟಿಕೆಟ್​​ ಟು ಫಿನಾಲೆ ಟಾಸ್ಕ್​ ಆಡುವ ಸಂದರ್ಭದಲ್ಲಿ ನಡೆದ ಒಂದು ಘಟನೆಯಿಂದಾಗಿ ಬಿಗ್​ಬಾಸ್​ ತಮಿಳು ನಿರೂಪಕ ವಿಜಯ್ ಸೇತುಪತಿ ಇಬ್ಬರು ಸ್ಪರ್ಧಿಗಳಿಗೆ ರೆಡ್​ ಕಾರ್ಡ್​ ನೀಡಿದ್ದಾರೆ. ವಿಜೆ ಪಾರ್ವತಿ ಮತ್ತು ಕಾಮರುದೀನ್​ಗೆ ರೆಡ್​ ಕಾರ್ಡ್ ನೀಡಿ ವಾರ್ನಿಂಗ್​ ಕೊಡಲಾಗಿದೆ.
ಟಿಕೆಟ್​​ ಟು ಫಿನಾಲೆ ಟಾಸ್ಕ್​ನಲ್ಲಿ ವಿಜೆ ಪಾರ್ವತಿ ಮತ್ತು ಕಾಮರುದೀನ್ ಓರ್ವ ಸ್ಪರ್ಧಿಯನ್ನ ಕಾರಿನಿಂದ ಹೊರಗೆ ತಳ್ಳಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕಾರಿಂದ ಹೊರಗೆ ತಳ್ಳಿದ ರಭಸಕ್ಕೆ ಸ್ಪರ್ಧಿಗೆ ಉಸಿರಾಟದ ಸಮಸ್ಯೆಯಾಗಿತ್ತು. ಬಳಿಕ ಕೂಡಲೇ ಅವರಿಗೆ ಚಿಕಿತ್ಸೆ ಕೊಡಲಾಗಿದೆ. ಇದೇ ವಿಚಾರ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
ಅದರಂತೆ ವೀಕೆಂಡ್​ ಕಾರ್ಯಕ್ರಮದಲ್ಲಿ ತಮಿಳು ಬಿಗ್​ಬಾಸ್​ ನಿರೂಪಕ ವಿಜಯ್ ಸೇತುಪತಿ ಈ ವಿಚಾರದ ಬಗ್ಗೆ ಚರ್ಚೆ ಮಾಡಿದರು. ಜೊತೆಗೆ ಸ್ಪರ್ಧಿಗಳಾದ ಪಾರ್ವತಿ ಮತ್ತು ಕಾಮರುದ್ದೀನ್‌ಗೆ ರೆಡ್​ ಕಾರ್ಡ್ ನೀಡಿ ವಾರ್ನಿಂಗ್​ ಕೂಡ ನೀಡಲಾಯಿತು. ವಿಜಯ್ ಸೇತುಪತಿ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯಿತು.
ಇದನ್ನೂ ಓದಿ: ಕೇಂದ್ರದ ಬಜೆಟ್ ನಲ್ಲಿ ಮಹಿಳೆಯರಿಗೆ ಹಣಕಾಸಿನ ಶಕ್ತಿ ನೀಡುವ ಯೋಜನೆಗಳ ಘೋಷಣೆ ಸಾಧ್ಯತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us