/newsfirstlive-kannada/media/post_attachments/wp-content/uploads/2024/07/Bumrah_Rohit.jpg)
2027ರ ವಿಶ್ವಕಪ್​ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಆಡ್ತಾರಾ? ಇಲ್ವಾ? ಅನ್ನೋದು ವಿಶ್ವಮಟ್ಟದಲ್ಲಿ ತೀವ್ರ ಚರ್ಚೆಯಾಗಿರೋ ವಿಚಾರ. ಮತ್ತೊಬ್ಬ ದಿಗ್ಗಜನ ವಿಶ್ವಕಪ್​ ಭವಿಷ್ಯ ಅಂತಂತ್ರಕ್ಕೆ ಸಿಲುಕಿರೋದು ಸುದ್ದಿನೇ ಆಗಿಲ್ಲ. ಜಸ್​​ಪ್ರಿತ್ ಬೂಮ್ರಾನೇ 2027ರ ವಿಶ್ವಕಪ್​ ಆಡೋದು ಅನುಮಾನವಾಗಿದೆ. ಬೂಮ್ರಾನ ವಿಶ್ವಕಪ್​ನಿಂದ ಸೈಡ್​ಲೈನ್ ಮಾಡೋ ಸೈಲೆಂಟಾಗೇ ಸ್ಕೀಮ್​ ರೆಡಿಯಾಗಿದೆ.
ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಗೆ ಟೀಮ್​ ಇಂಡಿಯಾ ಅನೌನ್ಸ್​ ಆಗಿದೆ. ಏಕದಿನ ತಂಡದಿಂದ ವೇಗಿ ಜಸ್ಪ್ರೀತ್ ಬೂಮ್ರಾ ಹೊರಬಿದ್ದಿದ್ದಾರೆ. ಇದಕ್ಕೆ ಸೆಲೆಕ್ಷನ್​ ಕಮಿಟಿ ವರ್ಕ್​ಲೋಡ್ ಮ್ಯಾನೇಜ್​ಮೆಂಟ್​ ಆನ್ಸರ್​ ಕೊಟ್ಟಿದೆ. ಆ ಉತ್ತರ ಯಾಕೋ ಮ್ಯಾಚ್​ ಆಗ್ತಾ ಇಲ್ಲ. ಯಾಕಂದ್ರೆ ಟೀಮ್​ ಇಂಡಿಯಾದ ಪ್ರೀಮಿಯಂ ವೇಗಿ ಬೂಮ್ರಾ ಏಕದಿನ ತಂಡದಿಂದ ಮರೆಯಾಗಿ 2 ವರ್ಷಗಳಾಯ್ತು.
ನವೆಂಬರ್ 19, 2023.. ಜಸ್ಪ್ರೀತ್ ಬೂಮ್ರಾ ಕೊನೆಯ ಏಕದಿನ ಪಂದ್ಯವಾಡಿದ ದಿನ. ಅಂದು ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಫೈನಲ್ ಪಂದ್ಯ ಆಡಿದ್ದ ಬೂಮ್ರಾ, ನಂತರ ಏಕದಿನ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡೇ ಇಲ್ಲ. ಟೀಮ್ ಮ್ಯಾನೇಜ್ಮೆಂಟ್, ಸೆಲೆಕ್ಟರ್ಸ್​ ಪ್ಲಾನ್ ಏನು ಅನ್ನೋದು ಯಾರಿಗೂ ಗೊತ್ತಿಲ್ಲದೆ ನಿಗೂಢವಾಗಿದೆ.
ಇದನ್ನೂ ಓದಿ:ಯಾವ ಕ್ರಿಕೆಟರ್​ ಬಳಿಯೂ ಇಲ್ಲ, ಇಷ್ಟು ದುಬಾರಿ ಕಾರು.. ಅಭಿಷೇಕ್ ಶರ್ಮಾ ಕಾರುಬಾರು!
/filters:format(webp)/newsfirstlive-kannada/media/media_files/2025/12/19/jasprit-bumrah-2025-12-19-13-20-58.jpg)
ನ್ಯೂಜಿಲೆಂಡ್​ ಏಕದಿನ ಸರಣಿಯಿಂದ ಬೂಮ್ರಾಗೆ ‘ರೆಸ್ಟ್’.!
ನ್ಯೂಜಿಲೆಂಡ್​ ವಿರುದ್ಧದ ಸರಣಿಗೆ ಟೀಮ್​ ಇಂಡಿಯಾ ಪ್ರಕಟವಾಗಿದೆ. 15 ಬಲಿಷ್ಠ ತಂಡವನ್ನ ಪ್ರಕಟಿಸಿರೋ ಸೆಲೆಕ್ಷನ್​ ಕಮಿಟಿ ವೇಗಿ ಬೂಮ್ರಾನ ಡ್ರಾಪ್​ ಮಾಡಿದೆ. ಇದಕ್ಕೆ ವರ್ಕ್​ಲೋಡ್​ ಮ್ಯಾನೇಜ್​ಮೆಂಟ್​ ಎಂಬ ರೆಡಿಮೇಡ್​ ಆನ್ಸರ್​ ಸೆಲೆಕ್ಷನ್​ ಕಮಿಟಿಯಿಂದ ಬಂದಿದೆ. ಆದ್ರೆ, ಇದನ್ನ ಒಪ್ಪೋದು ಸದ್ಯಕ್ಕೆ ಸ್ವಲ್ಪ ಕಷ್ಟಕರವಾಗಿದೆ. ಟೆಸ್ಟ್, ಟಿ-20 ಫಾರ್ಮೆಟ್ ಆಡ್ತಿರುವ ಬೂಮ್ರಾ, 2 ವರ್ಷದಿಂದ ಓಡಿಐ ಕ್ರಿಕೆಟ್ ಯಾಕೆ ಆಡ್ತಿಲ್ಲ ಅನ್ನೋದು, ಸದ್ಯ ಕ್ರಿಕೆಟ್ ಅಭಿಮಾನಿಗಳ ಪ್ರಶ್ನೆಯಾಗಿದೆ.
773 ದಿನಗಳಿಂದ ಬೂಮ್ರಾ ಏಕದಿನ ತಂಡದಿಂದ ಔಟ್
ತಂಡದ ಫ್ರಂಟ್​ಲೈನ್ ಬೌಲರ್, ಮ್ಯಾಚ್ ವಿನ್ನರ್, ಗೇಮ್ ಚೇಂಜರ್​ ಬೂಮ್ರಾರನ್ನ ಒಂದೆರಡು ಸರಣಿಯಿಂದ ಹೊರಗಿಟ್ರೆ, ವಿಶ್ರಾಂತಿ ನೀಡಿರಬಹುದು ಅಥವಾ ವರ್ಕ್​ಲೋಡ್ ಮ್ಯಾನೇಜ್ ಮಾಡ್ತಿರಬಹುದು ಅಂತ ಅಂದುಕೊಳ್ಳಬಹುದು. ಆದ್ರೆ ಪ್ರಮುಖ ಸರಣಿಗಳಿಂದಲೇ ಬೂಮ್ರಾರನ್ನ ಹೊರಗಿಟ್ರೆ ಹೇಗೆ? ಕಳೆದ 773 ದಿನಗಳಿಂದ ಬೂಮ್ರಾ ಒಂದೇ ಒಂದು ಏಕದಿನ ಪಂದ್ಯ ಆಡಿಲ್ಲ ಅಂದ್ರೆ ನಂಬ್ತೀರಾ..? ಕೇಳೋಕೆ ಇದು ಕಹಿ ಆದ್ರೂ, ಇದು ನೂರಕ್ಕೆ ನೂರರಷ್ಟು ಸತ್ಯ.
ಇದನ್ನೂ ಓದಿ:ನ್ಯೂಜಿಲೆಂಡ್ ವಿರುದ್ಧ ಏಕದಿನ ಸೀರಿಸ್.. ಪಂತ್‌ನ ಡ್ರಾಪ್ ಮಾಡಿರುವ ಸಿಕ್ರೇಟ್ ರಿವೀಲ್..!
/filters:format(webp)/newsfirstlive-kannada/media/media_files/2025/09/18/jasprit-bumrah-2025-09-18-09-17-35.jpg)
5 ಸರಣಿ, ಚಾಂಪಿಯನ್ಸ್ ಟ್ರೋಫಿ.. ಬೂಮ್ರಾ ನಾಪತ್ತೆ..!
ಕೊಲಂಬೋದಲ್ಲಿ ಶ್ರೀಲಂಕಾ ವಿರುದ್ಧ ನಡೆದ 3 ಪಂದ್ಯಗಳ ಏಕದಿನ ಸರಣಿ, ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಸರಣಿ, ದುಬೈನಲ್ಲಿ ನಡೆದ ಮಹತ್ವದ ಚಾಂಪಿಯನ್ಸ್​ ಟ್ರೋಫಿ, ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಸರಣಿ ಮತ್ತು ಕಳೆದ ತಿಂಗಳು ನಡೆದ ಸೌತ್​ ಆಫ್ರಿಕಾ ಸರಣಿಯಿಂದಲೂ ಬೂಮ್ರಾ ದೂರ ಉಳಿದಿದ್ರು. ಇದೀಗ ನ್ಯೂಜಿಲೆಂಡ್​ ವಿರುದ್ಧದ ಸರಣಿಯಿಂದಲೂ ಹೊರಗಿಡಲಾಗಿದೆ. ಪ್ರಮುಖ ಸರಣಿಗಳಿಂದ ಬೂಮ್ರಾನ ಹೊರಗಿಟ್ಟಿರೋದು ಹಲವು ಪ್ರಶ್ನೆಗಳನ್ನ ಹುಟ್ಟಿಸಿದೆ.
ಟೀಮ್ ಇಂಡಿಯಾದಲ್ಲಿ ಮೊಹಮ್ಮದ್ ಸಿರಾಜ್, ಆರ್ಷ್​ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾರಂತಹ ವೇಗಿಗಳಿದ್ದಾರೆ. ಜೊತೆಗೆ ನಿತೀಶ್​ ರೆಡ್ಡಿ, ಶಿವಂ ದುಬೆ, ಹಾರ್ದಿಕ್​ ಪಾಂಡ್ಯರಂತಹ ಮೀಡಿಯಮ್ ಪೇಸ್ ಆಲ್​ರೌಂಡರ್​ಗಳಿದ್ದಾರೆ. ಇವರೆಲ್ಲರೂ ಕಳೆದ 2 ವರ್ಷಗಳಿಂದ ಒಡಿಐ ಸೆಟ್​ಅಪ್​ನ ಭಾಗವಾಗಿದ್ದಾರೆ. ಆದ್ರೆ, 2027ರಲ್ಲಿ ಏಕದಿನ ವಿಶ್ವಕಪ್​ ಇದೆ ಅನ್ನೋದ್ರ ಹೊರತಾಗಿಯೂ ಬೂಮ್ರಾನ ಪದೇ ಪದೇ ಡ್ರಾಪ್​ ಮಾಡಲಾಗ್ತಿದೆ. ಇದ್ರಿಂದ, ಟೀಮ್ ಇಂಡಿಯಾಕ್ಕೆ ಜಸ್ಪ್ರೀತ್ ಬೂಮ್ರಾ ಸೇವೆ ಅವಶ್ಯಕತೆ ಇಲ್ವಾ..? ವಿಶ್ವಕಪ್​ ಆಡಲ್ವಾ.? ಅನ್ನೋ ಪ್ರಶ್ನೆ ಹುಟ್ಟಿದೆ.
ಇದನ್ನೂ ಓದಿ: ಫೆಬ್ರವರಿಯಲ್ಲಿ ಧವನ್‌ಗೆ ಎರಡನೇ ಮದುವೆ -ಗಬ್ಬರ್‌ನ ಸೆಕೆಂಡ್ ಇನ್ನಿಂಗ್ಸ್‌ನ ಪಾರ್ಟ್ನರ್ ಯಾರು?
/filters:format(webp)/newsfirstlive-kannada/media/post_attachments/wp-content/uploads/2023/08/BUMRAH.jpg)
ಏಕದಿನ ವಿಶ್ವಕಪ್​​ಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಅದಕ್ಕೂ ಮುನ್ನ ಟೀಮ್ ಇಂಡಿಯಾ ಆಡೋದು ಕೆಲವೇ ಕೆಲವು ಪಂದ್ಯಗಳನ್ನ ಮಾತ್ರ. ಕೋರ್​ ಟೀಮ್ ರೆಡಿ ಮಾಡಬೇಕು ಅಂದ್ರೆ, ಬೂಮ್ರಾರಂತಹ ಕೀ ಪ್ಲೇಯರ್ಸ್ ತಂಡದಲ್ಲಿ ಇರಲೇಬೇಕಲ್ವಾ.? ಬೂಮ್ರಾ ತಂಡದಲ್ಲಿಲ್ಲ. ಬೂಮ್ರಾ ಒನ್​ ಡೇ ಕ್ರಿಕೆಟ್​ ಆಡವಷ್ಟು ಫಿಟ್​ ಇಲ್ವಾ.? ಅಥವಾ ವಿಶ್ವಕಪ್​ ಪ್ಲಾನ್​ನಲ್ಲೇ ಇಲ್ವಾ.? ಸೆಲೆಕ್ಟರ್ಸ್​ ಅಂಡ್ ಮ್ಯಾನೇಜ್​ಮೆಂಟ್​ ಉತ್ತರ ಕೊಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us