/newsfirstlive-kannada/media/media_files/2026/01/06/gambhir-4-2026-01-06-14-11-07.jpg)
ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಗಾಳಿ ಜೋರಾಗೇ ಬೀಸ್ತಿದೆ. ತೆರೆ ಹಿಂದೆ ಸರ್ಜರಿಗಳು ಸದ್ದಿಲ್ಲದೇ ನಡೀತಿವೆ. ಹಾಲಿ ಕೋಚ್ ಗೌತಮ್ ಗಂಭೀರ್​ಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಟೆಸ್ಟ್ ತಂಡಕ್ಕೆ ಹೊಸ ಕೋಚ್​ ನೇಮಿಸಲು ಬಿಗ್​ಬಾಸ್​ಗಳು ಕಸರತ್ತು ನಡೆಸ್ತಿದ್ದಾರೆ.
ನ್ಯೂಜಿಲೆಂಡ್ ಮತ್ತು ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆಗೆ ಸಾಕ್ಷಿ ಆಗೋ ಸಾಧ್ಯತೆ ಹೆಚ್ಚಿದೆ. ಟೆಸ್ಟ್ ತಂಡದ ಕೋಚ್ ಗೌತಮ್ ಗಂಭೀರ್​​​ರನ್ನ ಎತ್ತಂಗಡಿ ಮಾಡಿಸಲು ಬಿಗ್​ಬಾಸ್​​ಗಳು ಹೈಡ್ರಾಮಾ ನಡೆಸುತ್ತಿದ್ದಾರೆ. 2027ರ ಏಕದಿನ ವಿಶ್ವಕಪ್​ವರೆಗೂ ಗಂಭೀರ್​​​​​​​​​​ ಕಾಂಟ್ರ್ಯಾಕ್ಟ್​ ಇದೆ. ಆದ್ರೆ ಅದಕ್ಕೂ ಮುನ್ನ ಗಂಭೀರ್​ಗೆ ಶಾಕ್ ನೀಡಲು, ಮಂಡಳಿ ತೆರೆ ಹಿಂದೆ ಪ್ಲಾನ್ ನಡೆಸುತ್ತಿದೆ.
ಇದನ್ನೂ ಓದಿ: ಚೀನಾಬ್ ನದಿಯ ನಾಲ್ಕು ಹೈಡ್ರೋಪವರ್ ಪ್ರಾಜೆಕ್ಟ್ ಗಳಿಗೆ ವೇಗ : ಪಾಕಿಸ್ತಾನಕ್ಕೆ ಭಾರತದ ಸ್ಪಷ್ಟ ಸಂದೇಶ
/filters:format(webp)/newsfirstlive-kannada/media/media_files/2025/12/09/gambhir-3-2025-12-09-14-00-04.jpg)
ಸೈಡ್​ಲೈನ್ ಆಗ್ತಿದ್ದಾರಾ ಗಂಭಿರ್?
ಗೌತಮ್ ಗಂಭೀರ್ ಟೀಮ್ ಇಂಡಿಯಾ ಕೋಚ್ ಆದ್ಮೇಲೆ ವೈಟ್​ಬಾಲ್ ಕ್ರಿಕೆಟ್​ನಲ್ಲಿ ಮಾತ್ರ ಸಕ್ಸಸ್ ಕಂಡಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ ಕೋಚ್ ಗಂಭೀರ್​​​​​​​​​​ ಸಾರಥ್ಯದಲ್ಲಿ ಟೀಮ್ ಇಂಡಿಯಾ, ಗೆಲುವಿಗಿಂತ ಹೆಚ್ಚು ಸೋಲನ್ನ ಕಂಡಿದೆ. ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್​​​​ ಟೆಸ್ಟ್ ಸರಣಿಗಳನ್ನ ಗೆದ್ದಿದ್ದು ಬಿಟ್ರೆ, ಉಳಿದ ಸರಣಿಗಳಲ್ಲಿ ಭಾರೀ ಹಿನ್ನಡೆಯಾಗಿದೆ. ನ್ಯೂಜಿಲೆಂಡ್ ವಿರುದ್ಧ ವೈಟ್​ವಾಶ್, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲು, ಇಂಗ್ಲೆಂಡ್​​ ವಿರುದ್ಧ ಡ್ರಾ, ಸೌತ್ ಆಫ್ರಿಕಾ ವಿರುದ್ಧ ಸರಣಿ ಸೋಲು, ಕೋಚ್ ಗಂಭೀರ್​​​​​ ಸಾಧನೆಯಾಗಿದೆ. ಹಾಗಾಗಿ ಗಂಭೀರ್ ಕಾರ್ಯವೈಖರಿ, ಬಿಗ್​ಬಾಸ್​ಗಳಿಗೆ ಸಮಾಧಾನ ತಂದಿಲ್ಲ.
ಇದನ್ನೂ ಓದಿ:BCCI ಮುಂದೆ ಗಿಲ್ ‘ಪಾಲಿಸಿ ಅಸ್ತ್ರ’.. ಬಲಿಷ್ಠ ತಂಡ ಕಟ್ಟಲು ಗಿಲ್ ಹೊಸ ಪ್ರಯೋಗ..!
/filters:format(webp)/newsfirstlive-kannada/media/media_files/2025/11/19/gambhir-and-agarkar-2025-11-19-13-32-58.jpg)
ಟೆಸ್ಟ್ ತಂಡಕ್ಕೆ ಹೊಸ ಕೋಚ್ ನೇಮಿಸಲು ಬಿಸಿಸಿಐ ಮಾಸ್ಟರ್ ಪ್ಲಾನ್ ಮಾಡ್ತಿದೆ. ಗೌತಮ್ ಗಂಭೀರ್​ರನ್ನ ಏಕಾಏಕಿ ತೆಗೆದು ಹಾಕೋದು ಸರಿ ಅಲ್ಲ ಅನ್ನೋದು ಬಿಸಿಸಿಐ ಅಭಿಪ್ರಾಯ. ಯಾಕಂದ್ರೆ 2027ರವರೆಗೂ ಕಾಂಟ್ರ್ಯಾಕ್ಟ್ ಇರೋದ್ರಿಂದ, ದಿಢೀರ್​​ರಂತೆ ಕೊಕ್ ಕೊಡೋದು ಸಾಧ್ಯವಿಲ್ಲ. ಹಾಗಾಗಿ ಮಾಜಿ ಟೆಸ್ಟ್ ಸ್ಪೆಷಲಿಸ್ಟ್ ವಿವಿಎಸ್ ಲಕ್ಷ್ಮಣ್​ಗೆ ಹಂತ ಹಂತವಾಗಿ ಟೆಸ್ಟ್ ತಂಡದ ಜವಾಬ್ದಾರಿ ನೀಡಲು ಬಿಗ್​ಬಾಸ್​​ಗಳು ಬಿಗ್ ಪ್ಲಾನ್ ಮಾಡುತ್ತಿದ್ದಾರೆ.
ಬಿಸಿಸಿಐ ಮೂಲಗಳ ಪ್ರಕಾರ ಹಾಲಿ ಕೋಚ್​ ಗೌತಮ್ ಗಂಭೀರ್​, ODI ಮತ್ತು T20 ತಂಡಗಳ ಜವಾಬ್ದಾರಿ ಮುಂದುವರೆಸಲಿದ್ದಾರೆ. ಟಿ-ಟ್ವೆಂಟಿ ವಿಶ್ವಕಪ್, 2027ರ ಏಕದಿನ ವಿಶ್ವಕಪ್​​​​ ಎಲ್ಲವೂ ಗಂಭೀರ್ ನೋಡಿಕೊಳ್ಳಲಿದ್ದಾರೆ. ಆದ್ರೆ ವಿವಿಎಸ್​​​​​​​​​​ ಲಕ್ಷ್ಮಣ್​​ಗೆ ತಂಡದ ಉಸ್ತುವಾರಿ ನೀಡೋ ಪ್ಲಾನ್ ಹೊಂದಿದ್ದಾರೆ. ಮುಂದಿನ ವರ್ಷ ವರ್ಲ್ಡ್​ ಟೆಸ್ಟ್ ಚಾಂಪಿಯನ್​ಶಿಪ್ ಸೈಕಲ್ ಮುಕ್ತಾಯವಾಗಲಿದೆ. ಅಷ್ಟರೊಳಗೆ ಲಕ್ಷ್ಮಣ್​ಗೆ ತಂಡದ ಪೂರ್ತಿ ಜವಾಬ್ದಾರಿ ವಹಿಸಲು ಬಿಸಿಸಿಐ ಚಿಂತಿಸುತ್ತಿದೆ.
/filters:format(webp)/newsfirstlive-kannada/media/media_files/2025/12/20/gambhir-ajit-2025-12-20-09-07-33.jpg)
ವಿವಿಎಸ್ ಲಕ್ಷ್ಮಣ್, ಟೆಸ್ಟ್ ಸ್ಪೆಷಲಿಸ್ಟ್ ಅಂತಾನೇ ಗುರುತಿಸಿಕೊಂಡಿದ್ದಾರೆ. 16 ವರ್ಷಗಳ ಕಾಲ ಲಕ್ಷ್ಮಣ್​​, ಟೆಸ್ಟ್ ಕ್ರಿಕೆಟ್ ಆಡಿದ್ದಾರೆ. 134 ಟೆಸ್ಟ್ ಪಂದ್ಯಗಳನ್ನ ಆಡಿರುವ ವಿವಿಎಸ್, ಅಪಾರ ಅನುಭವ ಹೊಂದಿದ್ದಾರೆ. ಟೆಸ್ಟ್ ತಂಡ ಹೇಗಿರಬೇಕು..? ಟೆಸ್ಟ್ ಕ್ರಿಕೆಟ್ ಹೇಗೆ ಆಡಬೇಕು..? ವಿದೇಶಗಳಲ್ಲಿ ಟೆಸ್ಟ್ ಗೆಲ್ಲೋದು ಹೇಗೆ..? ಇವೆಲ್ಲವೂ ಲಕ್ಷ್ಮಣ್​​​ಗೆ ಚೆನ್ನಾಗೇ ಗೊತ್ತು. ಹಾಗಾಗಿ ಟೆಸ್ಟ್ ಕ್ರಿಕೆಟ್​ಗೆ ಲಕ್ಷ್ಮಣ್​ರಂತಹ ಅನುಭವಿಗಳ ಮಾರ್ಗದರ್ಶನ ಬೇಕು ಅನ್ನೋದು ಬಿಗ್​ಬಾಸ್​ಗಳ ಆಶಯ. ​​
ಕೋಚ್ ಗೌತಮ್ ಗಂಭೀರ್ ಸ್ವಾಭಾವಿಕವಾಗಿ ಅಗ್ರೆಸಿವ್. ಎಲ್ಲಾ ಸಮಯದಲ್ಲೂ ಗೌತಿ ಅಗ್ರೆಸಿವ್ ಆಗಲು ಇಚ್ಛಿಸುತ್ತಾರೆ. ಅಗ್ರೆಸಿವ್​ನೆಸ್ ಎಲ್ಲಾ ಟೈಮ್​ನಲ್ಲೂ ವರ್ಕ್​ಔಟ್ ಆಗಲ್ಲ. ಟೆಸ್ಟ್ ಕ್ರಿಕೆಟ್​ನಲ್ಲೂ ಗಂಭೀರ್, ಏಕದಿನ-ಟಿ-ಟ್ವೆಂಟಿ ಮಾದರಿಯಂತೆ ಅಗ್ರೆಸಿವ್​ನೆಸ್ ತೋರಿಸುತ್ತಾರೆ. ಇದು ತಂಡಕ್ಕೆ ಲಾಭಕ್ಕಿಂತ ಹೆಚ್ಚು ನಷ್ಟಾನೇ ಆಗ್ತಿದೆ. ಟೆಸ್ಟ್ ಕ್ರಿಕೆಟ್​ನಲ್ಲಿ ಗಂಭೀರ್ ಸ್ಟ್ರಾಟಜಿ ವರ್ಕ್​ಔಟ್ ಆಗ್ತಿಲ್ಲ. ಒಂದೇ ಮಾತಲ್ಲಿ ಹೇಳೋದಾದ್ರೆ, ಗಂಭೀರ್ ಟೆಸ್ಟ್ ತಂಡದ ಕೋಚ್ ಆಗಲು ಸಾಮರ್ಥ್ಯ ಹೊಂದಿಲ್ಲ.
ಮೂರೂ ಫಾರ್ಮೆಟ್​​ಗಳಿಗೂ ಗೌತಮ್ ಗಂಭೀರ್​ರನ್ನೇ ಕೋಚ್ ಮಾಡಿದ್ದು ಬಿಸಿಸಿಐ ಮಾಡಿದ ಮೊದಲನೇ ತಪ್ಪು. ಟೀಮ್ ಇಂಡಿಯಾ ವರ್ಷವಿಡೀ ಕ್ರಿಕೆಟ್ ಆಡೋದ್ರಿಂದ, ಗಂಭೀರ್​​ಗೆ ಕೋಚ್ ಆಗಿ ಮ್ಯಾನೇಜ್ ಮಾಡೋಕೆ ಕಷ್ಟವಾಗ್ತಿದೆ. ಟೀಮ್ ಇಂಡಿಯಾದಲ್ಲಿ SPLIT ಕ್ಯಾಪ್ಟೆನ್ಸಿಯಂತೆ SPLIT ಕೋಚ್ ಮಾಡೋದೇ ಸೂಕ್ತ. ನೀವೇನಂತೀರಾ..?
ಇದನ್ನೂ ಓದಿ: ಫೆಬ್ರವರಿಯಲ್ಲಿ ಧವನ್‌ಗೆ ಎರಡನೇ ಮದುವೆ -ಗಬ್ಬರ್‌ನ ಸೆಕೆಂಡ್ ಇನ್ನಿಂಗ್ಸ್‌ನ ಪಾರ್ಟ್ನರ್ ಯಾರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us