/newsfirstlive-kannada/media/media_files/2025/11/04/dhanush_bbk12-2025-11-04-12-42-01.jpg)
ಬಿಗ್‌ಬಾಸ್ ಸೀಸನ್- 12ರಲ್ಲಿ ಟಾಸ್ಕ್ ವಿಚಾರ ಬಂದಾಗ ಧನುಷ್ ಟಫ್ ಕಂಟೆಸ್ಟೆಂಟ್. ಯಾವ ಟಾಸ್ಕ್ ಆದರೂ ತಮ್ಮ 1೦೦% ಕೊಡುವ ಪ್ರಯತ್ನ ಮಾಡುತ್ತಾರೆ. ಇದೀಗ ಅವರಿಗೆ ಕ್ಯಾಪ್ಟನ್ಸಿಯೂ ಸಿಕ್ಕಿದ್ದು, ಮೊದಲ ಟಾಸ್ಕ್‌ನಲ್ಲೇ ಸೋಲೊಪ್ಪಿಕೊಂಡರಾ ಎನ್ನುವ ಅನುಮಾನ ಕಾಡುತ್ತಿದೆ?.
ಬಿಗ್‌ಬಾಸ್ ಮನೆಯಲ್ಲಿರೋ ಸ್ಪರ್ಧಿಗಳ ಬಗ್ಗೆ ನೆಗೆಟಿವ್ ಅಂಶಗಳನ್ನು ಹೇಳುವುದು ಸುಲಭವಾದರೂ ಕೆಲವು ಸ್ಪರ್ಧಿಗಳು ಇದಕ್ಕೆ ವಿರುದ್ಧ ಅನ್ನುವ ರೀತಿಯಲ್ಲಿದ್ದಾರೆ. ಅವರಲ್ಲಿ ಧನುಷ್ ಮೊದಲ ಸ್ಥಾನದಲ್ಲಿ ಬರುತ್ತಾರೆ. ಮನೆಯಲ್ಲಿ ಯಾರೊಂದಿಗೂ ಹೆಚ್ಚು ಬೆರೆಯದೇ ಇದ್ದರೂ ಆಟದ ವಿಚಾರ ಬಂದಾಗ ಮಾತ್ರ ಇವರು ಎಲ್ಲರಿಗೂ ಟಫ್ ಕಾಂಪಿಟೀಟರ್ ಆಗಿ ನಿಲ್ಲುತ್ತಾರೆ. ಇದೀಗ ಧನುಗೆ ಮನೆಯ ಕ್ಯಾಪ್ಟನ್ಸಿಯ ಚುಕ್ಕಾಣಿಯೂ ಸಿಕ್ಕಿದೆ.
ಇದನ್ನೂ ಓದಿ: ಬ್ರಿಡ್ಜ್​ ಮೇಲೆ ಟ್ರಕ್​- ಕಾರಿನ ನಡುವೆ ಭೀಕರ ಡಿಕ್ಕಿ.. ಜೀವ ಕಳೆದುಕೊಂಡ 6 ಪ್ರಯಾಣಿಕರು
/filters:format(webp)/newsfirstlive-kannada/media/media_files/2025/11/04/bbk12_dhanush-2025-11-04-12-42-13.jpg)
ಕ್ಯಾಪ್ಟನ್ ಆಗಿ ಮನೆಯವರೆಲ್ಲರನ್ನೂ ಸಂಭಾಳಿಸಿಕೊಂಡು ಹೋಗುವುದು ಕ್ಯಾಪ್ಟನ್‌ನ ಕರ್ತವ್ಯ ಆದ್ರೆ ಧನು ಮೊದಲ ಬಾರಿ ಈ ಜವಾಬ್ದಾರಿಯಲ್ಲಿ ಸೋತರಾ? ಬಿಗ್‌ಬಾಸ್ ಮನೆಯಲ್ಲಿ ಈ ವಾರ ಪೂರ್ತಿ ಟಾಸ್ಕ್‌ಗಳಿಲ್ಲ. ಎಲ್ಲ ಸ್ಪರ್ಧಿಗಳೂ ನಾಮಿನೇಟೆಡ್ ಆಗಿದ್ದಾರೆ. ಇದೀಗ ಸ್ಪರ್ಧಿಗಳು ತಮ್ಮನ್ನು ನಾಮಿನೇಷನ್‌ನಿಂದ ರಕ್ಷಿಸಿಕೊಳ್ಳೋಕೆ ಮನೆಯವರ ಸಹಾಯ ಪಡೆಯುವ ಅವಕಾಶ ನೀಡಲಾಗಿದೆ.
ಇಬ್ಬರು ಸ್ಪರ್ಧಿಗಳು ಅವರಿಬ್ಬರಿಗೂ ಮನೆಯವರಿಂದ ಪತ್ರ ಬಂದಿರುತ್ತದೆ. ಅದನ್ನು ಬಾಟಲಿಯೊಳಕ್ಕೆ ಹಾಕಿ ಇಡಲಾಗಿರುತ್ತದೆ. ಕ್ಯಾಪ್ಟನ್ ಧನುಷ್ ಇಲ್ಲೇ ಇಕ್ಕಟ್ಟಿಗೆ ಸಿಲುಕಿದ್ದು, ತಮ್ಮ ಹೆಸರಿಗೆ ಬಂದ ಪತ್ರವನ್ನು ತೆಗೆದುಕೊಂಡರೆ ತಮಗೆ ಇಮ್ಯುನಿಟಿ ಬರುತ್ತದೆ. ಯಾರ ಪತ್ರವನ್ನು ಸ್ವಿಮ್ಮಿಂಗ್ ಪೂಲ್‌ಗೆ ಹಾಕುತ್ತಾರೋ ಅವರು ನಾಮಿನೇಟ್ ಆಗಿಯೇ ಮುಂದುವರಿಯುತ್ತಾರೆ. ಧನುಷ್ ಈಗ ಯಾವುದನ್ನು ಆಯ್ಕೆ ಮಾಡುತ್ತಾರೆ. ಅಭಿಷೇಕ್‌ನ ಪತ್ರವನ್ನು ಹಾಕಿ ಕೆಟ್ಟ ಕ್ಯಾಪ್ಟನ್ ಅನಿಸಿಕೊಳ್ತಾರಾ? ಅಥವಾ ತಮ್ಮ ಪತ್ರವನ್ನೇ ನೀರಿಗೆ ಹಾಕಿ ಬೆಸ್ಟ್ ಕ್ಯಾಪ್ಟನ್ ಅನಿಸಿಕೊಳ್ತಾರಾ? ನೋಡಿ ಇವತ್ತಿನ ಬಿಗ್‌ಬಾಸ್‌ನಲ್ಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us