/newsfirstlive-kannada/media/media_files/2025/10/19/big-boss-199-2025-10-19-09-16-42.jpg)
ಬಿಗ್​ಬಾಸ್ ಕನ್ನಡ​ ಸೀಸನ್​ 12 ರ ಮೊದಲ ಗ್ರ್ಯಾಂಡ್​ ಫಿನಾಲೆಯಲ್ಲಿ ಫ್ಯಾನ್ಸ್​ ಅಂದುಕೊಂಡಂತೆ ಆಯಿತು. ದೆವ್ವದ ಕಟ್ಟು ಕತೆ ಕಟ್ಟಿದವರಿಗೆ ಕಿಚ್ಚ ಸಖತ್​ ಕ್ಲಾಸ್​​ ತಗೆದುಕೊಂಡರು. ಅದರಂತೆ ಕೊನೆಯಲ್ಲಿ ಇಬ್ಬರು ಎಲಿಮಿನೇಟ್​​ ಆಗಿದ್ದಾರೆ.
ಬಿಗ್​ಬಾಸ್​​ನಲ್ಲಿ ಈ ವಾರ ದೆವ್ವದ ಕತೆ ಭಾರೀ ಸದ್ದು ಮಾಡಿತ್ತು.ಇದರಿಂದಾಗಿ ಫ್ಯಾನ್ಸ್​ ಕೂಡ ಫುಲ್​ ಗರಂ ಆಗಿದ್ದರು. ರಕ್ಷಿತಾ ಪರವಾಗಿದ್ದ ಫ್ಯಾನ್ಸ್​ ಕಿಚ್ಚ ಸುದೀಪ್​ ಎಂಟ್ರಿಗಾಗಿ ಕಾಯುತ್ತಿದ್ದರು. ಅದರಂತೆ ಖಡಕ್​ ಎಂಟ್ರಿಕೊಟ್ಟ ಬಾದ್​​ಷಾ ಅಶ್ವಿನಿ ಹಾಗೂ ಜಾಹ್ನವಿಗೆ ಕ್ಲಾಸ್​​ ತೆಗೆದುಕೊಂಡರು. ಜೊತೆಗೆ ರಕ್ಷಿತಾ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದಕ್ಕೆ ಕ್ಷಮೆ ಕೇಳಿಸಿದ್ದಾರೆ. ಅಭಿಮಾನಿಗಳು ಅಂದುಕೊಂಡಂತೆ ಕಿಚ್ಚನ ನಿರ್ಧಾರ ಎಲ್ಲರೂ ಮೆಚ್ಚುವಂತೆ ಆಗಿದೆ.
ಯಾರಿಗೆ ಸಿಕ್ತು ಕಿಚ್ಚನ ಚಪ್ಪಳೆ?
ಇಷ್ಟಾದ ಬಳಿಕ ಫ್ಯಾನ್ಸ್​​ ಕಾಯುತ್ತಿದ್ದ ಕಿಚ್ಚನ ಚಪ್ಪಳೆ ಯಾರಿಗೆ ಅನ್ನೋ ಕುತೂಹಲ ಇದ್ದೇ ಇರುತ್ತದೆ. ಅದರಂತೆ ಈ ಭಾರೀ ಗಿಲ್ಲಿಗೆ ಕಿಚ್ಚನ ಚಪ್ಪಳೆ ನೀಡಲಾಯಿತು. ಈ ಬಾರಿ ರಕ್ಷಿತಾ ಶೆಟ್ಟಿ ಅವರಿಗೆ ಅಶ್ವಿನಿ ಗೌಡ ಹಾಗೂ ಜಾನ್ವಿ ಸಾಕಷ್ಟು ಱಗ್​ ಮಾಡಿದ್ದಾರೆ. ಈ ರೀತಿ ಱಗ್​ ಮಾಡೋದು ಸರಿ ಅಲ್ಲ ಅಂತ ಯಾರೊಬ್ಬರೂ ಕೂಡ ಮುಂದೆ ಬಂದು ಹೇಳಿಲ್ಲ. ಆದರೆ ಗಿಲ್ಲಿ ಪ್ರತಿ ಹಂತದಲ್ಲೂ ರಕ್ಷಿತಾ ಅವರನ್ನ ಸಪೋರ್ಟ್​ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಈ ಸಲದ ಕಿಚ್ಚನ ಚಪ್ಪಾಳೆ ಗಿಲ್ಲಿಗೆ ಸಿಕ್ಕಿದೆ.
ಈ ವಾರ ಯಾರು ಎಲಿಮಿನೇಟ್​​ ಆದರು?
ಬಿಗ್​ಬಾಸ್​​ ಸೀಸನ್​ ಮೊದಲ ಗ್ರ್ಯಾಂಡ್​​ ಫಿನಾಲೆಯಲ್ಲಿ ಯಾರು ಎಲಿಮಿನೇಟ್​​ ಆಗ್ತಾರೆ ಅನ್ನೋ ಟೈಮ್​ ಬಂದೇ ಬಿಟ್ಟಿತು. ಕಿಚ್ಚನ ಕ್ಲಾಸ್​​ ಬಳಿಕ ಅಭಿಮಾನಿಗಳು ಕಾಯೋದು ಯಾರಿಗೆ ಈ ವಾರದ ಕಿಚ್ಚನ ಚಪ್ಪಾಳೆ ಅಂತ. ಅದರಂತೆ ಈ ವಾರ ಗಿಲ್ಲಿಗೆ ಕಿಚ್ಚನ ಚಪ್ಪಾಳೆ ಸಿಕ್ತು. ನಂತರ ಫ್ಯಾನ್ಸ್​ ಗಮನ ಹರಿಸೋದೆ ಎಲಿಮಿನೇಷನ್​ ಕಡೆಗೆ. ಈ ವಾರ ಧ್ರುವಂತ್​, ಧನುಷ್, ಮಲ್ಲಮ್ಮ, ಅಭಿಷೇಕ್​, ಜಾಹ್ನವಿ, ಗಿಲ್ಲಿ ನಟ, ಕಾವ್ಯ, ಸ್ಪಂದನ, ರಕ್ಷಿತಾ, ಅಶ್ವಿನಿ, ಚಂದ್ರಪ್ರಭಾ ಹಾಗೂ ಮಂಜು ಭಾಷಿಣಿ ನಾಮಿನೇಟ್​​ ಆಗಿದ್ದರು.
ಇದರ ಪೈಕಿ ಕೊನೆಯಲ್ಲಿ ಅಶ್ವಿನಿ, ಮಂಜು ಭಾಷಿಣಿ, ಅಭಿಷೇಕ್ ಮೇಲೆ ಎಲಿಮಿನೇಷನ್​ ತೂಗುಗತ್ತಿ ಇತ್ತು. ಸದ್ಯ ಇದರಲ್ಲಿ ಅಭಿಷೇಕ್​ ಸೇಫ್​ ಆಗಿದ್ದು, ಈ ವಾರ ಅಶ್ವಿನಿ ಹಾಗೂ ಮಂಜು ಭಾಷಿಣಿ ಬಿಗ್​ಬಾಸ್​​ ಮನೆಯಿಂದ ಹೊರ ಬಂದಿದ್ದಾರೆ. ಇಂದಿನ ಬಿಗ್​ಬಾಸ್​​ ಕಾರ್ಯಕ್ರಮದಲ್ಲಿ ಸತೀಶ್​​ ಸೇರಿದಂತೆ ಅಶ್ವಿನಿ ಹಾಗೂ ಮಂಜು ಭಾಷಿಣಿ ವೇದಿಕೆ ಮೇಲೆ ಬರಲಿದ್ದಾರೆ. ನಿನ್ನೆಯೇ ಎಲಿಮಿನೇಷನ್​ ಆಗಿದ್ರಿಂದ ಇಂದಿನ ಬಿಗ್​ಬಾಸ್​​ ಕಾರ್ಯಕ್ರಮ ಏನ್​ ಆಗಬಹುದು ಅಂತ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.