/newsfirstlive-kannada/media/media_files/2025/10/19/ips_wife-2025-10-19-08-27-54.jpg)
ಬೆಂಗಳೂರು: ಕರ್ನಾಟಕ ಕೇಡರ್​ನ ಐಪಿಎಸ್​ ಅಧಿಕಾರಿ ಶಿವಾಂಶು ರಜಪೂತ್ ಹಾಗೂ ಅವರ ಕುಟುಂಬದ 6 ಜನರ ವಿರುದ್ಧ ವರದಕ್ಷಿಣೆ ಕಿರುಕುಳ, ಕೌಂಟುಂಬಿಕ ಹಿಂಸೆ ಅಡಿ ದೂರು ದಾಖಲು ಆಗಿದೆ. ಉತ್ತರಪ್ರದೇಶದ ನೊಯ್ಡಾ ಪೊಲೀಸ್ ಠಾಣೆಯಲ್ಲಿ ಶಿವಾಂಶು ರಜಪೂತ್ ಹಾಗೂ ಅವರ ಕುಟುಂಬದ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಕೆಜಿಎಫ್​ನ ಎಸ್​ಪಿಯಾಗಿ ಶಿವಾಂಶು ರಜಪೂತ್ ಕಾರ್ಯನಿರ್ವಹಿಸುತ್ತಿದ್ದು ಸದ್ಯ ಇವರ ವಿರುದ್ಧ ಇವರ ಪತ್ನಿ, ವೃತ್ತಿಯಲ್ಲಿ ಡಾಕ್ಟರ್ ಆಗಿರುವ ಕೃತಿ ಸಿಂಗ್​ ಅವರೇ ಕೇಸ್ ದಾಖಲು ಮಾಡಿದ್ದಾರೆ. ಇದು ಅಲ್ಲದೇ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದಾರೆ. ಶಿವಾಂಶು ಹಾಗೂ ಅವರ ತಂದೆ, ತಾಯಿ, ಸಹೋದರ, ಅತ್ತಿಗೆ ಹಾಗೂ ಶಿವಾಂಶು ಅವರ ಇಬ್ಬರು ಸ್ನೇಹಿತರ ವಿರುದ್ಧ ಠಾಣೆಯಲ್ಲಿ ಒಟ್ಟು 41 ಪುಟಗಳಿರುವ ದೂರನ್ನು ನೀಡಿದ್ದಾರೆ.
ಇದನ್ನೂ ಓದಿ:ಇಂದು ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರದಲ್ಲೇ RSS ಪಥ ಸಂಚಲನ.. ಆದ್ರೆ ಅನುಮತಿ?
2021ರಲ್ಲಿ ಮದುವೆ ಆಗಿದ್ದ ಕೃತಿ ಸಿಂಗ್ ಹಾಗೂ ಶಿವಾಂಶು ದಂಪತಿಗೆ ಒಂದೂವರೆ ವರ್ಷದ ಗಂಡು ಮಗು ಇದೆ. ಆದರೆ ವಿವಾಹ ಆದಾಗಿನಿಂದ ಈವರೆಗೂ ವರದಕ್ಷಿಣೆಗಾಗಿ ನನ್ನನ್ನು ಪೀಡಿಸಲಾಗುತ್ತಿದೆ. ಮಾನಸಿಕ ಹಾಗೂ ದೈಹಿಕವಾಗಿ ಇವರು ಕಿರುಕುಳ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆಭರಣ ಹಾಗೂ ಇತರ ಖರ್ಚುಗಳು ಸೇರಿದಂತೆ ಮದುವೆಗೆ 2 ಕೋಟಿ ರೂಪಾಯಿ ಖರ್ಚು ಆಗಿದೆ. ಆದರೂ ನನ್ನ ಅತ್ತೆ-ಮಾವ ನನಗೆ ಇನ್ನಷ್ಟು ವರದಕ್ಷಿಣೆ ತರುವಂತೆ ಹಿಂಸೆ ನೀಡುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ