/newsfirstlive-kannada/media/media_files/2025/10/18/sudeep_bbk-2025-10-18-14-43-48.jpg)
ಬಿಗ್‌ಬಾಸ್ ಸೀಸನ್ 12 ಆರಂಭವಾಗಿ ಇನ್ನೇನು ಮೂರು ವಾರವಷ್ಟೇ ಆಗಿದೆ. ಅಷ್ಟರಲ್ಲೇ ಮೊದಲ ಗ್ರ್ಯಾಂಡ್ ಫಿನಾಲೆ ಸದ್ದು ಮಾಡುತ್ತಿದೆ. ಯಾರು ಸೇಫ್ ಆಗ್ತಾರೆ? ಯಾರು ಹೊರ ಹೋಗುತ್ತಾರೆ ಅನ್ನೋ ಕುತೂಹಲ ಪ್ರೇಕ್ಷಕರಲ್ಲೂ ಮೂಡಿದೆ. ಈ ವಾರ ಬಿಗ್​ ಬಾಸ್​ ಮನೆಯಲ್ಲಿ ಹೆಚ್ಚು ಸದ್ದು ಮಾಡಿದ್ದು ದೆವ್ವಾ!
ಹೌದು, ಇದೇ ದೆವ್ವದ ವಿಚಾರಕ್ಕೆ ಅನೇಕ ವಾಗ್ವಾದಗಳು, ಗಲಾಟೆಗಳು ನಡೆದಿದೆ. ಇಂದಿನ ಮೊದಲ ಗ್ರ್ಯಾಂಡ್​ ಫಿನಾಲೆಯಲ್ಲಿ ಕಿಚ್ಚ ಸುದೀಪ್​ ಯಾರ ದೆವ್ವ ಬಿಡಿಸಲಿದ್ದಾರೆ ಅಂತ ಕಾದು ನೋಡಬೇಕಿದೆ. ಮೊದಲ ಗ್ರ್ಯಾಂಡ್​ ಫಿನಾಲೆಗೆ ಕಿಚ್ಚ ಖಡಕ್​ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ದೆವ್ವದ ಕತೆ ಕಟ್ಟಿದವರಿಗೂ ಸರಿಯಾಗಿ ಕ್ಲಾಸ್​​ ತೆಗೆದುಕೊಳ್ಳಲಿದ್ದಾರೆ.
ಕಿಚ್ಚನ ಎಂಟ್ರಿಯಲ್ಲೇ ಸ್ಪರ್ಧಿಗಳಿಗೆ ಸರಿಯಾಗಿ ಕ್ಲಾಸ್​ ತೆಗೆದುಕೊಳ್ಳುವ ಸುಳಿವು ನೀಡಿದ್ದಾರೆ. ನಾವು ಕೊಟ್ಟ ಮಾತು ತಪ್ಪಲ್ಲ. ತಪ್ಪಾಗಿ ಆಡಿದ ಮಾತಿಗೂ ಬುದ್ದಿ ಕಲಿಸದೇ ಬಿಡಲ್ಲ. ಒಳ್ಳೆ ಕೆಲಸ ಮಾಡ್ದಾಗ ನಾವು ಕೈ ತಟ್ಟಿ ಚಪ್ಪಾಳೆನೂ ಕೊಡ್ತೀವಿ. ಅದರಂತೆ ನಾವು ಎಲ್ಲಿ ಇದ್ದೀವಿ ಅನ್ನೋದನ್ನ ಮರೆದು ಬಾಯಿಗೆ ಬಂದಂಗೆ ಮಾತನಾಡಿದವರಿಗೆ ತಲೆ ಮೇಲೆ ತಟ್ಟಿ ಬುದ್ದಿನೂ ಹೇಳ್ತೀವಿ ಅಂತ ಕಿಚ್ಚ ಖಡಕ್​ ಆಗಿ ಹೇಳಿದ್ದಾರೆ.
ಬಿಗ್​ಬಾಸ್​ ಮನೆಯಲ್ಲಿ ನಿಜವಾದ ದೆವ್ವ ಯಾರು.. ಕಿಚ್ಚ ಚಳಿ ಬಿಡಿಸೋದು ಯಾವ ಸ್ಪರ್ಧಿಗೆ?
ಪ್ರೋಮೋದಲ್ಲಿ ಕಿಚ್ಚನ ಖಡಕ್​ ಮಾತಿಂದ ಫ್ಯಾನ್ಸ್​ ಫಿದಾ ಆಗಿದ್ದಾರೆ. ಜೊತೆಗೆ ಜಾಹ್ನವಿ ಹಾಗೂ ಅಶ್ವಿನಿಗೆ ಕಿಚ್ಚ ಯಾವ ರೀತಿ ಕ್ಲಾಸ್​ ತೆಗೆದುಕೊಳ್ತಾರೆ ಅಂತ ಕುತೂಹಲದಿಂದ ಕಾಯ್ತಿದ್ದಾರೆ. ಮೊದಲ ಗ್ರ್ಯಾಂಡ್​ ಫಿನಾಲೆಯಲ್ಲಿ ಯಾರು ಎಲಿಮಿನೇಟ್​​ ಆಗ್ತಾರೆ ಅನ್ನೋ ಕುತೂಹಲ ಒಂದ್ಕಡೆಯಾದ್ರೆ, ಕಿಚ್ಚ ಯಾರ ದೆವ್ವ ಬಿಡಿಸಲಿದ್ದಾರೆ ಅಂತ ಕಾದು ನೋಡಬೇಕಿದೆ.