/newsfirstlive-kannada/media/media_files/2025/11/01/sudeep-2025-11-01-11-36-38.jpg)
ಕಳೆದ ವಾರದ ಬಿಗ್‌ಬಾಸ್ ಕಾಲೇಜ್ ಕ್ಯಾಂಪಸ್‌ನಲ್ಲಿ ಫುಲ್ ಫನ್ ಇತ್ತು. ಟಾಸ್ಕ್‌ಗಳು, ಎಂಟರ್‌ಟೈನ್ಮೆಂಟ್ ಯಾವುದಕ್ಕೂ ಕಡಿಮೆ ಇರಲಿಲ್ಲ. ಇದರ ಜೊತೆಗೆ ಗಲಾಟೆಗಳು ಜಟಾಪಟಿ ಯಾವುದೂ ಕಡಿಮೆ ಇರಲಿಲ್ಲ. ಹಾಗಾದ್ರೆ ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಕ್ಲಾಸ್ ಯಾರಿಗೆ?.
ಬಿಗ್‌ಬಾಸ್‌ನಲ್ಲಿ ವಾರದ ಉಳಿದ ದಿನಗಳೇ ಬೇರೆ, ಕಿಚ್ಚ ಸುದೀಪ್‌ರ ಎಪಿಸೋಡ್‌ನಲ್ಲಿ ಇರೋ ಮಜಾನೇ ಬೇರೆ. ಇಡೀ ವಾರ ಆಗಿದ್ದನ್ನು ಸುದೀಪ್ ನೀಟ್ ಆಗಿ ಅನಲೈಸ್ ಮಾಡ್ತಾರೆ. ತಪ್ಪಾಗಿದ್ದಾಗ ಬೆನ್ನಿಗೆ ಪೆಟ್ಟು ಬೀಳುತ್ತೆ, ಸರಿ ಇದ್ದಾಗ ಕಿಚ್ಚನ ಚಪ್ಪಾಳೆಯೂ ಸಿಗುತ್ತೆ. ಹೀಗಾಗಿ ಇವತ್ತಿನ ಎಪಿಸೋಡ್ ತುಂಬಾ ಕ್ಯೂರಿಯಾಸಿಟಿ ಮೂಡಿಸಿದೆ.
ಬಿಗ್‌ಬಾಸ್‌ನ ಹಿಂದಿನ ವಾರಗಳಿಗೆ ಹೋಲಿಕೆ ಮಾಡಿದ್ರೆ ಈ ವಾರ ತುಂಬಾ ಡಿಫ್ರೆಂಟ್ ಆಗಿತ್ತು. ಬಿಬಿ ಕಾಲೇಜ್ ಕ್ಯಾಂಪಸ್ ಅನ್ನೋ ಹೊಸ ಕಾನ್ಸೆಪ್ಟ್‌ನೊಂದಿಗೆ ಆರಂಭವಾದ ಈ ವಾರದ ಟಾಸ್ಕ್‌ಗಳೂ ಮಜವಾಗಿದ್ದವು. ಎಂಟರ್‌ಟೈನ್‌ಮೆಂಟ್‌ಗೂ ಕೊರತೆಯೇ ಇರಲಿಲ್ಲ.
ಇದನ್ನೂ ಓದಿ: BBK12; ನೀನು ದೊಡ್ಡ ಡ್ರಮ್​.. ಕಾವ್ಯಗಾಗಿ ಗಿಲ್ಲಿ ನಟ- ರಿಷಾ ಮಧ್ಯೆ ಮಾತಿನ ಮಲ್ಲಯುದ್ಧ..!
/filters:format(webp)/newsfirstlive-kannada/media/media_files/2025/10/27/bbk12_college-2025-10-27-14-41-29.jpg)
ಇಷ್ಟೇ ಆಗಿದ್ರೆ ಈ ಬಾರಿ ಸುದೀಪ್‌ರ ಪಂಚಾಯ್ತಿಯಲ್ಲಿ ಹೊಗಳಿಕೆಯನ್ನೇ ಎಕ್ಸ್‌ಪೆಕ್ಟ್ ಮಾಡಬಹುದಿತ್ತೇನೋ. ಆದ್ರೆ ಹಾಗಿಲ್ಲವಲ್ಲ, ಬಿಗ್‌ಬಾಸ್ ಮನೆ ರಣಕ್ಷೇತ್ರವೂ ಆಗಿತ್ತು, ರಾಶಿಕಾ ಕ್ಯಾಪ್ಟನ್ ವಿರುದ್ಧವೇ ಸಿಡಿದು ನಿಂತಿದ್ರು, ಕಾವ್ಯ- ಅಶ್ವಿನಿ ನಡುವೆ ಮಾತಿನ ಚಕಮಕಿ ನಡೆದು ನಿನ್ನ ಯೋಗ್ಯತೆ ತೋರಿಸು ಅನ್ನೋ ಮಟ್ಟಕ್ಕೂ ಮಾತುಕತೆ ಹೋಗಿತ್ತು. ರಕ್ಷಿತಾ ವಿರುದ್ಧವೂ ರಾಶಿಕಾ, ರಿಷಾ, ಅಶ್ವಿನಿ ಒಂದಾಗಿ ಅಟ್ಯಾಕ್ ಮಾಡಿದರು.
ಇವೆಲ್ಲವುಗಳ ನಡುವೆ ನಾಮಿನೇಷನ್ ಅನ್ನೋ ತೂಗುಗತ್ತಿಯೂ ತೂಗುತ್ತಿದ್ದು, ಈ ವಾರ ಮನೆಯಿಂದ ಹೊರ ಹೋಗುವವರು ಯಾರು ಅನ್ನೋ ಪ್ರಶ್ನೆಯೂ ಇದೆ. ಇವೆಲ್ಲದಿಕ್ಕೂ ಉತ್ತರ ನೀಡುವವರು ಕಿಚ್ಚ ಸುದೀಪ್. ಕಿಚ್ಚನ ಪಂಚಾಯ್ತಿಯಲ್ಲಿ ಏನೇನು ಚರ್ಚೆಯಾಯ್ತು? ಯಾರೆಲ್ಲ ಹೊರಹೋಗ್ತಾರೆ? ನೋಡಿ ಇವತ್ತಿನ ಬಿಗ್‌ಬಾಸ್‌ನಲ್ಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us