/newsfirstlive-kannada/media/media_files/2025/10/04/bigg-boss-1-2025-10-04-09-06-44.jpg)
ಬಿಗ್​ಬಾಸ್​ನಲ್ಲಿ ನಾಮಿನೇಷನ್ ಪ್ರಕ್ರಿಯೆ ಮುಗಿದ್ದು, ಈ ವಾರ ಮನೆಯಿಂದ ಯಾರು ಹೋಗ್ತಾರೆ ಎಂಬ ಕ್ಯೂರಿಯಾಸಿಟಿ ಹೆಚ್ಚಾಗಿದೆ. ಇಂದು ರಾತ್ರಿ ಕಿಚ್ಚನ ಮೊದಲ ಪಂಚಾಯ್ತಿ ನಡೆಯಲಿದ್ದು, ವೀಕ್ಷಕರು ಯಾರು ಮನೆಯಿಂದ ಆಚೆ ಹೋಗ್ತಾರೆ? ಯಾರೆಲ್ಲ ಸೇವ್ ಆಗ್ತಾರೆ ಎಂಬ ಚರ್ಚೆ ಶುರು ಮಾಡಿದ್ದಾರೆ.
ಯಾರೆಲ್ಲ ನಾಮಿನೇಟ್​..?
ಸಿಂಗಲ್ ಆಗಿ ಬಿಗ್​ಬಾಸ್ ಮನೆಗೆ ಎಂಟ್ರಿ ನೀಡಿದ್ದ ಧನುಷ್ ಗೌಡ, ಮಲ್ಲಮ್ಮ ಹಾಗೂ ಜಂಟಿಯಾಗಿ ಪ್ರವೇಶ ಮಾಡಿರುವ ಅಭಿಷೇಕ್-ಅಶ್ವಿನಿ ಎಸ್​.ಎನ್, ಗಿಲ್ಲಿ ನಟ-ಕಾವ್ಯ, ಅಮಿತ್-ಕರಿಬಸಪ್ಪ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.
ಕಿಚ್ಚನಿಗಾಗಿ ವೀಕ್ಷಕರು ಎಕ್ಸೈಟ್..!
ಬಿಗ್​ಬಾಸ್ ಸೀಸನ್ 12 ಸೆಪ್ಟೆಂಬರ್ 28 ರಂದು ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿದೆ. 19 ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡಿದ್ದು, ಜನರನ್ನು ರಂಜಿಸಲು ಪ್ರಯತ್ನ ಪಡ್ತಿದ್ದಾರೆ. ಶುರುವಾಗಿ ಒಂದು ವಾರ ಕಳೆದಿರುವ ರಿಯಾಲಿಟಿ ಶೋಗೆ ಇವತ್ತು ಮತ್ತೆ ಕಿಚ್ಚನ ಕಳೆ ಬರಲಿದೆ. ಇಂದು ರಾತ್ರಿ 9 ಗಂಟೆಯಿಂದ ಕಲರ್ಸ್ ಕನ್ನಡದಲ್ಲಿ ಸೀಸನ್ 12ರ ಮೊದಲ ಪಂಚಾಯ್ತಿ ನಡೆಯಲಿದೆ. ಮನೆಯಲ್ಲಿ, ಗೇಮ್​​ನಲ್ಲಿ ಆಗಿರುವ ಸಣ್ಣ ಪುಟ್ಟ ತಪ್ಪುಗಳನ್ನ ಗಮನಕ್ಕೆ ತಂದು ಸ್ಪರ್ಧಿಗಳಿಗೆ ಕಿವಿ ಮಾತು ಹೇಳಲಿದ್ದಾರೆ. ಹದ್ದು ಮೀರಿ ವರ್ತಿಸಿದ ಕೆಲವು ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡರೂ ಅಚ್ಚರಿ ಇಲ್ಲ.
ಇದನ್ನೂ ಓದಿ:BBK12; ನಾಮಿನೇಷನ್ ಅಂದರೇ ಏನು.. ಗಿಲ್ಲಿ ನಟನಿಗೆ ಬಿಗ್ ಶಾಕ್ ಕೊಟ್ಟ ಮಲ್ಲಮ್ಮ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ