/newsfirstlive-kannada/media/media_files/2026/01/19/ashwini-gowda-12-2026-01-19-13-08-08.jpg)
ಬಿಗ್‌ಬಾಸ್ ಸೀಸನ್ 12ರ ಸೆಕೆಂಡ್ ರನ್ನರ್ ಅಪ್ ಅಶ್ವಿನಿ ಗೌಡ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಇಷ್ಟು ದಿನಗಳ ಕಾಲ ತಮ್ಮನ್ನ ಬೆಂಬಲಿಸಿದ ಅಭಿಮಾನಿಗಳಿಗೆ, ಸ್ನೇಹಿತರಿಗೆ ಧನ್ಯವಾದ ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಕೃತಜ್ಞತೆ ಸಲ್ಲಿಸಿ ವಿಡಿಯೋ ಅಪ್​ಲೋಡ್ ಮಾಡಿರುವ ಅವರು, ಇಷ್ಟುದಿನ ನನಗೆ ಬೆಂಬಲ ನೀಡಿ, ವೋಟ್ ಮಾಡಿದ ಎಲ್ಲಾ ಕರ್ನಾಟಕದ ಜನತೆಗೆ ಧನ್ಯವಾದಗಳು. ಒಂದಷ್ಟು ಸಂದರ್ಶನದ ಬಳಿಕ ನಿಮ್ಮ ಜೊತೆ ಬರ್ತೀನಿ ಎಂದಿದ್ದಾರೆ.
ಇದೇ ವೇಳೆ ಕಿಚ್ಚ ಸುದೀಪ್ ಅವರಿಗೂ ಧನ್ಯವಾದ ತಿಳಿಸಿದ ಅಶ್ವಿನಿ ಗೌಡ ಅವರು, ಥ್ಯಾಂಕ್ಯೂ ಸುದೀಪ್ ಅಣ್ಣ. ನಾನು ನಿಮಗೆ ಮೊದಲೇ ಹೇಳಿದ ಹಾಗೆ, ಬಿಗ್​ ಬಾಸ್​ ಮನೆಯಲ್ಲಿ ಕಣ್ಣಿಗೆ ಕಾಣುತ್ತಿದ್ದ ದೇವರು. ನಾನು ನಿಮ್ಮನ್ನ ಗುರುಗಳ ಸ್ಥಾನದಲ್ಲಿ ನೋಡುತ್ತೇನೆ. ನೀವು ನನ್ನ ತಪ್ಪುಗಳನ್ನು ತಿದ್ದಿದ್ದರಿಂದ ಫಿನಾಲೆ ವರೆಗೆ ಬರಲು ಸಾಧ್ಯವಾಯಿತು ಎಂದಿದ್ದಾರೆ. '
ಇದನ್ನೂ ಓದಿ:‘ಗಿಲ್ಲಿ ಮೇಲೆ ರಕ್ಷಿತಾಗೆ ಲವ್..?’ ಯಾಕೆ ಇಷ್ಟ ಎಂದು ಹೇಳಿದ ರಕ್ಷಿತಾ ಶೆಟ್ಟಿ..! VIDEO
ನನ್ನ ಜೊತೆ ಟ್ರಾವೆಲ್ ಮಾಡಿದ 23 ಜನ ಸ್ಪರ್ಧಿಗಳಿಗೂ ಧನ್ಯವಾದಗಳು. ನಾನು ಫಿನಾಲೆವರೆಗೆ ಬರಲು ಕಾರಣ ನೀವೂ ಕೂಡ ಹೌದು. ನಾನು ಈಗಾಗಲೇ ಗೆದ್ದಿದ್ದಿನಿ. ನಿಮ್ಮ ಮನಸ್ಸುಗಳನ್ನು ಗೆದ್ದಿದ್ದೇನೆ. ಅದಕ್ಕೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ.
ನಾನು ಈಗಾಗಲೇ ಗೆದ್ದಿದ್ದೀನಿ. ಕಪ್ ಯಾರೇ ಗೆದ್ದರೂ ಖುಷಿ ಇದೆ. ಅದು ಒಬ್ಬರಿಗೆ ಮಾತ್ರ ಸೇರುತ್ತದೆ. ನಾನೂ ಸೋತಿದ್ದೀನಿ ಅಂತ ಖಂಡಿತ ಬೇಜಾರು ಇಲ್ಲ. ಗೆದ್ದಿರುವ ಗಿಲ್ಲಿಗೆ ನಾನು ಇಲ್ಲಿಂದಲೇ ಆಲ್​ ದಿ ಬೆಸ್ಟ್​ ಹೇಳ್ತೀನಿ. ಅಭಿಮಾನಿಗಳನ್ನ ಶೀಘ್ರದಲ್ಲೇ ಭೇಟಿ ಮಾಡ್ತೀನಿ. ಆ ಕಾತುರ ನನಗೂ ಇದೆ ಎಂದಿದ್ದಾರೆ.
ಇದನ್ನೂ ಓದಿ: ಮೊದಲ ಮಹಿಳಾ ರನರ್ ಅಪ್ ನಾನೇ.. ರಕ್ಷಿತಾ ಮೊದಲ ಮಾತು..! VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us