ಬಿಗ್‌ಬಾಸ್‌ ಮನೆಯಲ್ಲಿ ಗಿಚ್ಚಿ ಗಿಲಿ ಗಿಲಿ.. ರಿಷಾ vs ಗಿಲ್ಲಿ ನಟನ ನಡುವೆ ಫುಲ್ ಫೈಟ್!

ಅಶ್ವಿನಿ ಗೌಡ ಅಂದ್ರೆ ಕಾಲುಕೆರೆದು ಜಗಳಕ್ಕೆ ಹೋಗೋರು ಅನ್ನೋ ಇಮೇಜ್‌ ಇತ್ತು. ಇದೀಗ ಈ ಇಮೇಜ್‌ಗೆ ರಿಷಾ ಹಾಗೂ ರಾಶಿಕಾ ಕೂಡ ಟಫ್‌ ಕಾಂಪಿಟೇಷನ್‌ ಕೊಡ್ತಿದ್ದಾರೆ. ರಿಷಾ ಅಂತೂ ಇದೀಗ ಗಿಲ್ಲಿ ಜೊತೆಗೇನೆ..

author-image
Bhimappa
BBK12_GILLI
Advertisment

ರಿಷಾ ಬಿಗ್‌ಬಾಸ್‌ ಮನೆಗೆ ಬರುತ್ತಿದ್ದಂತೆ ಗಿಲ್ಲಿಯ ಗಮನವೆಲ್ಲ ಕಾವ್ಯ ಮೇಲಿಂದ ರಿಷಾ ಕಡೆ ವಾಲಿದೆಯಾ ಅನ್ನೋ ಅನುಮಾನ ಮೂಡಿತ್ತು. ಇಬ್ಬರೂ ಅಷ್ಟು ಕ್ಲೋಸ್‌ ಆಗಿ ಕಾಣಿಸಿಕೊಂಡರು. ಇದೀಗ ಇದೇ ಜೋಡಿ ಶತ್ರುಗಳಾಗಿ ಬಿಟ್ಟಿದ್ದಾರೆ.

ಇಲ್ಲಿಯವರೆಗೂ ಅಶ್ವಿನಿ ಗೌಡ ಅಂದ್ರೆ ಕಾಲುಕೆರೆದು ಜಗಳಕ್ಕೆ ಹೋಗೋರು ಅನ್ನೋ ಇಮೇಜ್‌ ಇತ್ತು. ಇದೀಗ ಈ ಇಮೇಜ್‌ಗೆ ರಿಷಾ ಹಾಗೂ ರಾಶಿಕಾ ಕೂಡ ಟಫ್‌ ಕಾಂಪಿಟೇಷನ್‌ ಕೊಡ್ತಿದ್ದಾರೆ. ರಿಷಾ ಅಂತೂ ಇದೀಗ ಗಿಲ್ಲಿ ಜೊತೆಗೇನೆ ಜಗಳಕ್ಕೆ ನಿಂತಿದ್ದು ಕೈ ಎತ್ತಿ ಹೊಡೆಯೋ ಮಟ್ಟಕ್ಕೆ ಗಲಾಟೆ ಹೋಗಿದೆ. 

ರಿಷಾ ಸ್ನಾನಕ್ಕೆ ಹೋಗಿರುವಾಗ ಗಿಲ್ಲಿ ಬಕೆಟ್‌ ಕೊಡುವಂತೆ ಆಗಾಗ ಕೇಳಿಕೊಳ್ಳುತ್ತಾರೆ. ಬಕೆಟ್‌ ಕೊಡದಿದ್ದರೆ ಏನು ಮಾಡಬೇಕೆಂದು ತಿಳಿದಿದೆ ಎಂದೂ ಹೇಳುತ್ತಾರೆ. ಆದರೂ ರಿಷಾ ಯಾವ ರೆಸ್ಪಾನ್ಸ್‌ ನೀಡದೆ ಇದ್ದಾಗ ಕೋಪಗೊಳ್ಳುವ ಗಿಲ್ಲಿ ರೂಮ್​ಗೆ ತೆರಳಿ ರಿಷಾರ ಬಟ್ಟೆಗಳನ್ನು ತಂದು ಬಾತ್‌ರೂಂನ ಮೂಲೆಯಲ್ಲಿ ಹಾಕುತ್ತಾರೆ. 

ಇದನ್ನೂ ಓದಿ: ಫೋಟೋ ಪತ್ತೆ ಮಾಡೋ ಟಾಸ್ಕ್​.. BIGG BOSS ಸ್ಟುಡೆಂಟ್​ ಆಫ್​ ದೀ ವೀಕ್ ಯಾರು..?

BBK12_GILLI_RISHA

ಬಾತ್‌ರೂಂನಿಂದ ಹೊರಕ್ಕೆ ಬರುತ್ತಿದ್ದಂತೇ ತಮ್ಮ ಬಟ್ಟೆ ರಾಶಿ ಕಂಡು ಕೋಪಗೊಳ್ಳುವ ರಿಷಾ ಗಿಲ್ಲಿಗೆ ಚೆನ್ನಾಗಿ ಬಯ್ಯುತ್ತಾರೆ. ಹೊಡೆಯುತ್ತಾರೆ ಕೂಡ. ನಂತರ ರೂಮ್​ ಒಳಕ್ಕೆ ಹೋಗಿ ಗಿಲ್ಲಿಯ ಬಟ್ಟೆಗಳನ್ನೂ ಎಲ್ಲ ಕಡೆ ಹರಡಿ ಹಾಕುತ್ತಾರೆ. ರಿಷಾರ ಆತ್ಮೀಯ ಗೆಳತಿ ಅಶ್ವಿನಿ, ಗಿಲ್ಲಿ  ಮಾಡಿದ ಎಂದು ನೀನೂ ಮಾಡಬೇಡ ಎಂದು ಹೇಳುತ್ತಲೇ ಇದ್ದರೂ ಕೇಳದ ರಿಷಾ ಎಲ್ಲವನ್ನೂ ಹರಡುತ್ತಾಳೆ.

ಇಲ್ಲಿಗೆ ಜಗಳ ನಿಲ್ಲದೆ ರೂಮ್​ಗೆ ಬರೋ ಗಿಲ್ಲಿಯನ್ನು ತಡೆಯಲು ನೂಕಲು ಶುರು ಮಾಡುತ್ತಾಳೆ. ರಕ್ಷಿತಾ ಈ ಸಮಯದಲ್ಲಿ ಮೈಮುಟ್ಟಬೇಡಿ ಎಂದು ಹೇಳುತ್ತಲೇ ಇದ್ದರೂ ಕೇಳದ ರಿಷಾ ಗಿಲ್ಲಿಯನ್ನು ನೂಕುತ್ತಲೇ ಇರುತ್ತಾಳೆ. ಈ ಜಗಳ ಎಲ್ಲಿಗೆ ತಲುಪುತ್ತೆ? ಗಿಲ್ಲಿ ಇದಕ್ಕೆ ಪ್ರತ್ಯುತ್ತರ ಕೊಡೋ ಯತ್ನ ಏನಾದ್ರೂ ಮಾಡ್ತಾರಾ? ಅನ್ನೋದನ್ನ ಇವತ್ತಿನ ಸಂಚಿಕೆಯಲ್ಲಿ ನೋಡಬೇಕು. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Gilli Nata
Advertisment