/newsfirstlive-kannada/media/media_files/2025/12/29/bigg-boss-kannada-1-2025-12-29-15-04-52.jpg)
ಬಿಗ್​ ಬಾಸ್​ನಿಂದ ಈ ವಾರ ಮಾಳು ನಿಪನಾಳ ಹೊರಬಂದಿದ್ದಾರೆ. ಆದರೆ ಅವರ ಎಲಿಮಿನೇಷನ್ ಬಗ್ಗೆ ಅಸಮಾಧಾನಗೊಂಡಂತೆ ಕಾಣ್ತಿದೆ. ನಾನು ಇನ್ನೂ ಒಂದಷ್ಟು ದಿನ ಅಲ್ಲಿ ಇರಬೇಕಿತ್ತು. ನನ್ನ ಪ್ರಕಾರ, ನಾನೇ ಗೆಲ್ಲುತ್ತಿದ್ದೆ ಎಂದಿದ್ದಾರೆ. ಮಾಳು ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮಾಧ್ಯಮವೊಂದಕ್ಕೆ ಮಾತನ್ನಾಡಿರುವ ಮಾಳು.. ಬಿಗ್​ ಬಾಸ್​ನಲ್ಲಿ ಯಾರೇ ವಿನ್ ಆದರೂ ಸರಿ ಇಲ್ಲ. ಯಾರೇ ವಿನ್ ಆದರೂ ನಾನು ಈಜಿಯಾಗಿ ಒಪ್ಪಿಕೊಳ್ಳುವುದಿಲ್ಲ. ನನ್ನ ಜನ ನೋಡ್ತು ಅಂದ್ರೆ ನಾನೂ ಇನ್ನೂ ಒಂದಿಷ್ಟು ಕಾಲ ಅಲ್ಲೇ ಉಳಿಯಬೇಕಿತ್ತು. ಅದು ನನ್ನ ಪ್ರಕಾರ ಮತ್ತು ನನ್ನ ಜನಗಳನ್ನ ನೋಡಿದ್ರೆ.
ಇದನ್ನೂ ಓದಿ: ಅಚ್ಚರಿ ಹೆಸರು..! ಸೂರಜ್​​ಗೆ ಯಾರು ಬಿಗ್​ಬಾಸ್ ಗೆಲ್ಲಬೇಕಂತೆ ಗೊತ್ತಾ..?
ನಾನು ಬಿಗ್​ ಬಾಸ್ ಮನೆಯಲ್ಲಿ ತಪ್ಪು ಮಾಡಿದ್ನೋ, ಸರಿ ಮಾಡಿದ್ನೋ ಅದು ಸೆಕೆಂಡರಿ. ನನ್ನ ಜನ ನೋಡ್ತು ಅಂದರೆ, ನನ್ನನ್ನ ಅವ್ರು ಪ್ರೀತ್ಸೋದು ನೋಡ್ತು ಅಂದ್ರೆ, ನನ್ನ ಸಲುವಾಗಿ ಅವರು ಗೋಳಾಡೋದು, ತೂರಾಡೋದು ನೋಡ್ತೀನಿ ಅಂದ್ರೆ.. ನಾನು ಇನ್ನೂವರೆಗೂ ಅವರೆಲ್ಲ ಈಜಿಯಾಗಿ ವಿನ್ ಆಗಿದ್ದಾರೆ ಅಂತ ನಾನು ಒಪ್ಕೊಳ್ಳೋದೇ ಇಲ್ಲ.
ಯಾಕೆಂದರೆ ನಾನು ಅವರ ಜೋಡಿ ಫೈಟೂ ಮಾಡ್ತೀನಿ. ಗೇಮ್ ಆಡ್ತೀನಿ. ಯಾರೇ ನಿಂತರೂ ಅವರ ಜೊತೆ ನಿಂತು ಫೈಟ್ ಮಾಡಿ ಗೆಲ್ತೀನಿ ಅನ್ನೋದು ಗೊತ್ತು. ಆ ಬಗ್ಗೆ ನನಗೆ ಹಠವೂ ಇತ್ತು, ಚಲವೂ ಇತ್ತು, ಬಲವೂ ಇತ್ತು. ಯಾರೆ ವಿನ್ ಆದರೂ ನಾನು ಒಪ್ಪಿಕೊಳ್ಳೋದಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಎರಡೂವರೆ ಲಕ್ಷ ರೂ.ದಾಟಿದ ಬೆಳ್ಳಿ ದರ! : ಇಂದು ಚಿನ್ನ, ಬೆಳ್ಳಿ ಬೆಲೆ ಎಷ್ಟು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us