/newsfirstlive-kannada/media/media_files/2025/12/06/rajat-and-rashika-2025-12-06-09-45-51.jpg)
ಬಿಗ್​ ಬಾಸ್ ರಿಯಾಲಿಟಿ ( Bigg Boss) ಶೋನಲ್ಲಿ ಇವತ್ತು ‘ವಾರದ ಕತೆ ಕಿಚ್ಚನ ಜೊತೆ’ ಎಪಿಸೋಡ್​ ಪ್ರಸಾರವಾಗಲಿದೆ. ಇವತ್ತಿನ ಸಂಚಿಕೆಯಲ್ಲಿ ಸುದೀಪ್, ಯಾವೆಲ್ಲ ವಿಚಾರಗಳನ್ನು ಚರ್ಚೆಗೆ ತೆಗೆದುಕೊಳ್ಳಲಿದ್ದಾರೆ? ಯಾರಿಗೆ ಕ್ಲಾಸ್​ ಆಗಲಿದೆ? ಯಾರ ತಪ್ಪನ್ನು ಎತ್ತಿ ಹಿಡಿಯಲಿದೆ ಎಂಬ ಕ್ಯೂರಿಯಾಸಿಟಿ ವೀಕ್ಷಕರದ್ದಾಗಿದೆ.
ಕಿಚ್ಚು ‘ತೆವಲು’ ಪದ
ಇಂದು ಬೆಳ್ಳಂಬೆಳಗ್ಗೆ ಕಲರ್ಸ್ ಕನ್ನಡ ಪ್ರೊಮೋ ಒಂದನ್ನ ಶೇರ್ ಮಾಡಿದೆ. ರಘು ಅವರು ಅಡುಗೆ ವಿಚಾರದಲ್ಲಿ ಕೋಪದಲ್ಲಿ ತೆವಲು ಎಂಬ ಪದವನ್ನು ಬಳಸಿದ್ದಾರೆ. ಅದಕ್ಕೆ ರಘು ಮೇಲೆ ಅಶ್ವಿನಿ ಗೌಡ ಗರಂ ಆಗಿದ್ದಾರೆ. ಇದೇ ವಿಚಾರ ದೊಡ್ಡ ಗಲಾಟೆಗೆ ತಿರುಗಿದೆ. ರಘು ವಿರುದ್ಧ ಮನೆಯ ಕೆಲವು ಸ್ಪರ್ಧಿಗಳು ಮುಗಿಬಿದ್ದಿದ್ದು, ರಜತ್ ರಘು ಸಹಾಯಕ್ಕೆ ಬಂದಿದ್ದಾರೆ.
ಇದನ್ನೂ ಓದಿ:ಗಿಲ್ಲಿ ಪರವಾಗಿ ಹೊಸ AI ಸಾಂಗ್ ರಿಲೀಸ್..! VIDEO
ಇನ್ನು, ಈ ವಾರದ ಉತ್ತಮ ಚೈತ್ರಾ ಕುಂದಾಪುರ ಅವರು ಪಡೆದುಕೊಂಡರೆ, ಎರಡನೇ ಬಾರಿಗೆ ಕಳಪೆ ಪಟ್ಟ ಪಡೆದು ಗಿಲ್ಲಿ ಜೈಲುಪಾಲಾಗಿದ್ದಾರೆ. ಹಾಗೆಯೇ ಮುಂದಿನ ವಾರ ಮನೆಗೆ ಜೋಡಿ ಕ್ಯಾಪ್ಟನ್ಸಿ ಇರಲಿದೆ. ಸ್ಪರ್ಧಿಗಳ ನಡುವಿನ ಟಾಸ್ಕ್​ನಲ್ಲಿ, ನಡವಳಿಕೆಯಲ್ಲಿ, ಆಟದಲ್ಲಿನ ಸರಿ-ತಪ್ಪುಗಳ ಲೆಕ್ಕಾಚಾರವನ್ನು ಒರೆಗೆ ಹಚ್ಚಲಿರುವ ಸುದೀಪ್ ಎಪಿಸೋಡ್​ಗಾಗಿ ವೀಕ್ಷಕರು ಎಕ್ಸೈಟ್ ಆಗಿದ್ದಾರೆ.
ಮನೆಗೆ ಹೋಗೋರು ಯಾರು..?
ಈ ವಾರ ಮನೆಯಿಂದ ಹೊರ ಹೋಗಲು 9 ಮಂದಿ ನಾಮಿನೇಟ್ ಆಗಿದ್ದಾರೆ. ಸೂರಜ್ ಸಿಂಗ್, ರಾಶಿಕಾ ಶೆಟ್ಟಿ, ಅಭಿಷೇಕ್, ಗಿಲ್ಲಿ ನಟ, ಸ್ಪಂದನಾ, ರಕ್ಷಿತಾ, ಕಾವ್ಯ, ಧ್ರುವಂತ್, ಮಾಳು ಅವರು ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಅಭಿಷೇಕ್, ಅಶ್ವಿನಿ ಗೌಡ ಹಾಗೂ ವೈಲ್ಡ್​ ಕಾರ್ಡ್ ಮೂಲಕ ಎಂಟ್ರಿ ನೀಡಿರುವ ಚೈತ್ರಾ ಕುಂದಾಪುರ, ರಜತ್ ಕಿಶನ್​​ಗೆ ಎಲಿಮಿನೇಷನ್​​ನಿಂದ ಸೇಪ್ ಆಗಿದ್ದಾರೆ. ಕಳೆದ ವಾರ ಜಾಹ್ನವಿ ಅವರು ಬಿಗ್​ ಬಾಸ್​ನಿಂದ ಔಟ್ ಆಗಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸರಿ-ತಪ್ಪುಗಳ ಲೆಕ್ಕಾಚಾರ!
— Colors Kannada (@ColorsKannada) December 6, 2025
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/6RggUk09jY
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us