ಬಿಗ್ ಬಾಸ್ ಆಟದಲ್ಲಿ ನಾಲ್ಕನೇ ಸ್ಥಾನ ಪಡೆದ ಸ್ಪರ್ಧಿ ಕಾವ್ಯ ಅವರು ನ್ಯೂಸ್​ಫಸ್ಟ್​ನ ವಿಶೇಷ ಸಂದರ್ಶನದಲ್ಲಿ ಭಾಗಿಯಾದರು. ಈ ವೇಳೆ ರಕ್ಷಿತಾ ಶೆಟ್ಟಿ ಬಗ್ಗೆ ಮಾತನ್ನಾಡಿದರು.
ಯಾರೋ ಒಬ್ಬರು ಸೋಲಬೇಕು ಅನ್ನೋ ಅಭಿಪ್ರಾಯ ನನ್ನದಲ್ಲ. ಯಾರು ಗೆದ್ದಿದ್ದರೆ ಚೆನ್ನಾಗಿರುತ್ತದೆ ಎಂದು ಕೇಳಿದಾಗ ನಾನು ಹೇಳಲೇಬೇಕಾಗಿರುತ್ತದೆ. ಸುದೀಪ್ ಸರ್ ಯಾರು ಡಿಸರ್ವಿಂಗ್ ಇಲ್ಲ ಎಂದು ಕೇಳಿದಾಗ ನಾನು ರಕ್ಷಿತಾ ಹೆಸರನ್ನು ತೆಗೆದುಕೊಂಡಿದ್ದೆ.
ಯಾಕೆ ಅಂದರೆ ಅದು ನನ್ನ ಒಪಿನಿಯನ್. ನಾನು ಅವರನ್ನು ಹೇಗೆ ನೋಡಿದ್ದೀನಿ, ಬಿಗ್ ಬಾಸ್ ಗೇಮ್​ ಅನ್ನು ನಾನು ಹೇಗೆ ಅರ್ಥ ಮಾಡಿಕೊಂಡಿದ್ದೀನಿ ಆ ರೀತಿ ನೋಡಿ ಹೇಳಿದ್ದೀನಿ. ಬಿಗ್ ಬಾಸ್ ಅನ್ನೋದು ವ್ಯಕ್ತಿತ್ವದ ಆಟ.
ರಕ್ಷಿತಾ ಬಿಗ್ ಬಾಸ್ ಮನೆಯಲ್ಲಿ ತುಂಬಾ ಮನರಂಜನೆ ಮಾಡಿದ್ದಾರೆ. ಹಾಗಿದ್ದರೆ ಬಿಗ್ ಬಾಸ್​ನಲ್ಲಿ ಅಷ್ಟೇನಾ? ನಾನು ಅರ್ಥ ಮಾಡಿಕೊಂಡ ರೀತಿಯಲ್ಲಿ ಹೇಳಿದೆ. ಆದರೆ ಜನರ ಅಭಿಪ್ರಾಯವೇ ಬೇರೆ ಆಗಿರುತ್ತದೆ. ಆದರೆ ಜನರ ಅಭಿಪ್ರಾಯವೇ ಬೇರೆ ಇರುತ್ತದೆ. ಅದು ತಪ್ಪು ಅಂತಾ ಹೇಳೋಕೆ ಆಗಲ್ಲ ಎಂದಿದ್ದಾರೆ.
ಇದನ್ನೂ ಓದಿ: ಈ ಕಾರಣಕ್ಕೆ ನನಗೆ ಬಿಗ್ ಬಾಸ್​ ಕಪ್ ಸಿಗಲಿಲ್ಲ -ಅಶ್ವಿನಿ ಗೌಡ ಆಕ್ರೋಶ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us