/newsfirstlive-kannada/media/media_files/2025/10/08/bbk12_sathish-2025-10-08-20-18-19.jpg)
ಬಿಗ್‌ಬಾಸ್ ಮನೆಯಲ್ಲಿರೋ ಸತೀಶ್ ಆಟಕ್ಕೆ ಎಷ್ಟು ಫೇಮಸ್ ಆಗಿದ್ದಾರೋ ಗೊತ್ತಿಲ್ಲ. ಆದರೆ ಅವರ ಮೇಕಪ್‌ನಿಂದಲೇ ಸಾಕಷ್ಟು ಫೇಮಸ್ ಆಗಿರೋ ಅವ್ರಿಗೀಗ ಹೊಸ ಹೆಸರೂ ಸಿಕ್ಕಿದೆ.
ಬಿಗ್‌ಬಾಸ್ ಮನೆಗೆ ಎಂಟ್ರಿ ಆದಾಗಿನಿಂದಲೂ ಸತೀಶ್ ತಮ್ಮ ಮೇಕಪ್‌ನಿಂದ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಮುಖಕ್ಕೆ ಕಣ್ಣಿಗೆ ಮೂಗಿಗೆ ಹೀಗೆ ಬೇರೆ ಬೇರೆ ಕ್ರೀಂಗಳನ್ನು ಹಚ್ಚಿ ಹುಡುಗರೂ ಇಷ್ಟು ಮೇಕಪ್ ಮಾಡ್ತಾರಾ ಅನ್ನೋ ಅನುಮಾನ ಹುಟ್ಟು ಹಾಕಿದ್ದರು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರೋ ಅವರು ತಮ್ಮನ್ನು ತಾವೇ ಸಂತೂರ್ ಡ್ಯಾಡಿ ಎಂದು ಕರೆದುಕೊಂಡಿದ್ದಾರೆ.
ಇದನ್ನೂ ಓದಿ: ಈ ವಿಷ್ಯಕ್ಕಾಗಿ ಮಂಜು ಭಾಷಿಣಿ- ರಾಶಿಕಾ ನಡುವೆ ಜಗಳ.. ಕಾರಣ ಮಾತ್ರ ಕ್ರಾಕೋಚ್ ಸುಧಿ
ಅಸುರಾಧಿಪತಿ ಕಾಕ್ರೋಚ್ ಸುಧಿಯ ಅಧೀನದಲ್ಲಿ ಒಂದು ದಿನ ರಾಕ್ಷಸರ ವಿಚಿತ್ರ ಮೇಕಪ್ ಮಾಡಿಸಿಕೊಂಡು ಜುಟ್ಟು ಕಟ್ಟಿಕೊಂಡು ಕೂತಿದ್ದ ಸತೀಶ್ ಆಗಲೇ ಬೇಸತ್ತಿದ್ದು ಎರಡನೇ ದಿನವೇ ಅಧಿಕಾರ ಧಿಕ್ಕರಿಸಲು ಮುಂದಾಗಿದ್ದಾರೆ. ಈ ರೆಬೆಲ್ ನಿರ್ಧಾರಕ್ಕೆ ಮುಖ್ಯ ಕಾರಣ ಬ್ಯೂಟಿ. ಒಂದು ದಿನ ಜುಟ್ಟು ಕಟ್ಟಿದ್ದರಿಂದಲೇ ತಮ್ಮ ಕೂದಲೆಲ್ಲ ಉದುರಿ ಹೋಗಿದೆ.
ಮುಖಕ್ಕೆ ಏನೋ ಸ್ವಲ್ಪ ಮೇಕಪ್ ಮಾಡಿಕೊಳ್ಳಿ ಎಂದರೆ ಓಕೆ ಕೂದಲೆಲ್ಲ ಕಟ್ಟಬೇಕು ಅಂತೆಲ್ಲ ಅಂದ್ರೆ ನಾನು ಕೇಳಲ್ಲ ಅಂತನ್ನೋಕೆ ಶುರು ಮಾಡಿದ್ದಾರೆ. ಚಂದ್ರಪ್ರಭ ಜೊತೆಗೆ ಈ ಮಾತನ್ನಾಡುತ್ತಾ ನನ್ನನ್ನು ಬೆಂಗಳೂರಿಗರು ಸಂತೂರ್ ಡ್ಯಾಡಿ ಅಂತಾರೆ. ನನ್ನ ಮಗ ಮತ್ತು ನಾನು ಜೊತೆಯಾಗಿ ಹೋದರೆ ನೀವು ಸಂತೂರ್ ಡ್ಯಾಡಿ ತರ ಇದ್ದೀರಿ ಅಂತಾರೆ. ಹೀಗಾಗಿ ಅಸುರನ ಮಾತು ಕೇಳಿ ತಮ್ಮ ಬ್ಯೂಟಿ ಹಾಳು ಮಾಡಿಕೊಳ್ಳೋಕೆ ಚಾನ್ಸೆ ಇಲ್ಲ.. ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ