/newsfirstlive-kannada/media/media_files/2025/08/15/bigg-boss-kannada-12-logo-2025-08-15-15-45-48.jpg)
ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ವೀಕ್ಷಕರಿಗೆ ಗುಡ್​ನ್ಯೂಸ್​ ಕೊಟ್ಟಿದೆ ಬಿಗ್​ಬಾಸ್ ತಂಡ. ​ಹೌದು, ಬಿಗ್​ಬಾಸ್​ ಸೀಸನ್ 12 ಸದ್ಯದಲ್ಲೇ ಆರಂಭವಾಗುತ್ತಿದೆ. ಇದೀಗ ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಬಿಗ್​ಬಾಸ್​ ಸೀಸನ್ 12ರ ಮೊದಲ ಪ್ರೋಮೋವನ್ನು ರಿಲೀಸ್​ ಮಾಡಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದೇ ಭಾರೀ ಸ್ಫೋಟ; ಜೀವ ಬಿಟ್ಟ ಬಾಲಕ, 9 ಮಂದಿ ಗಂಭೀರ
/newsfirstlive-kannada/media/post_attachments/wp-content/uploads/2025/06/bigg-boss.jpg)
ಕನ್ನಡದ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್​ಬಾಸ್​. ಈಗಾಗಲೇ 11 ಸೀಸನ್​ಗಳು ಯಶಸ್ವಿಯಾಗಿ ಪ್ರಸಾರ ಕಂಡಿವೆ. ಇದೀಗ ಬಿಗ್​ಬಾಸ್​ ಸೀಸನ್​ 12 ಬಂದೇ ಬಿಟ್ಟಿದೆ. ಸೀಸನ್​ 12ರ ಬಗ್ಗೆ ಏನಾದ್ರೂ ಮಾಹಿತಿ ಸಿಗುತ್ತಾ ಅಂತ ಇಷ್ಟು ದಿನ ಕಾಯುತ್ತಿದ್ದ ವೀಕ್ಷಕರಿಗೆ ಅಂತೂ ಇಂತೂ ಬಿಗ್​ ಅಪ್ಡೇಟ್​ ಅನ್ನು ಕೊಟ್ಟಿದೆ ಬಿಗ್​ಬಾಸ್​ ತಂಡ.
/filters:format(webp)/newsfirstlive-kannada/media/media_files/2025/08/15/bbk-12-logo-2025-08-15-15-25-27.jpg)
ಸ್ವಾತಂತ್ರ್ಯ ದಿನಾಚರಣೆಯಂದೇ ಸರ್​ಪ್ರೈಸ್​..
ಅಲ್ಲದೇ ಇಂದು ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ. 79ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಿಗ್​ಬಾಸ್ ಪ್ರೋಮೋ ರಿಲೀಸ್​ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್‌ಪ್ರೈಸ್ ಕೊಟ್ಟಿದೆ. ಇಂದು ರಿಲೀಸ್​ ಆಗಿರೋ ಪ್ರೋಮೋದಲ್ಲಿ ಲೋಗೋ ಲಾಂಚ್ ಆಗಿದ್ದು, ಅದರ ಜೊತೆಗೆ ಕಾದಿದ್ದು ಸಾಕು! ಬಿಗ್ ಬಾಸ್ ಈಸ್ ಬ್ಯಾಕ್! ಆದ್ರೆ... ಈ ಸಲ ಕಿಚ್ಚು ಮಾತ್ರ ಹೆಚ್ಚು! ಎಂದು ಬರೆಯಲಾಗಿದೆ. ಬಿಗ್​ಬಾಸ್​ ಸೀಸನ್ 12 ಆರಂಭ ಯಾವಾಗ ಅನ್ನೋದಕ್ಕೆ ಉತ್ತರ ಸಿಕ್ಕಿಲ್ಲ. ಸದ್ಯದಲ್ಲೇ ಡೇಟ್​ ಕೂಡ ಅನೌನ್ಸ್ ಆಗುತ್ತಾ ಅಂತ ಕಾದು ನೋಡಬೇಕಿದೆ.
ಈ ಬಾರಿಯೂ ಕಿಚ್ಚನೇ ಸಾರಥಿ..
ಕಳೆದ 11ನೇ ಸೀಸನ್ ನಡೆಯುತ್ತಿರುವಾಗಲೇ ಕಿಚ್ಚ ಸುದೀಪ್ ಇದು ನಾನು ನಡೆಸಿಕೊಡುವ ಕೊನೆಯ ಸೀಸನ್ ಅಂತಾ ಅನೌನ್ಸ್ ಮಾಡಿದ್ದರು. ಕಿಚ್ಚನ ಈ ಮಾತು ಬಿಗ್‌ಬಾಸ್ ವೀಕ್ಷಕರಿಗೆ ಶಾಕ್ ನೀಡಿತ್ತು. ಹೀಗಾಗಿ ಕಿಚ್ಚ ಇಲ್ಲದ ಬಿಗ್​ಬಾಸ್ ಅನ್ನು ನಾವುಗಳು ನೋಡೋದಿಲ್ಲ. ಬಿಗ್​ಬಾಸ್​ಗೆ ಕಿಚ್ಚ ಬೇಕೇಬೇಕು ಅಂತ ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಿದ್ದರು. ಅದರ ಮಧ್ಯೆ ಕಿಚ್ಚ ಸುದೀಪ್ ಅವರ ಮನಸ್ಸನ್ನ ವಾಹಿನಿ ಕೆಲವು ಪ್ರಯತ್ನ ಮಾಡಿದ್ದರು. ಇದಾದ ಬಳಿಕ ಬಿಗ್​ಬಾಸ್​ ಸೀಸನ್ 12ಕ್ಕೂ ಕಿಚ್ಚ ಸುದೀಪ್​ ಅವರೇ ನಿರೂಪಣೆ ವಹಿಸಲಿದ್ದಾರೆ. ಈ ಬಗ್ಗೆ ಖುದ್ದು ಬಿಗ್​ಬಾಸ್​ ಟೀಮ್​ ಪ್ರೆಸ್ ಮೀಟ್​ನಲ್ಲಿ ಹಂಚಿಕೊಂಡಿತ್ತು.
ಈ ಬಾರಿಯ ಬಿಗ್​ಬಾಸ್​ಗೆ ಯಾರೆಲ್ಲಾ ಆಗಮನ?
ಇನ್ನೂ, ಈ ಬಾರಿಯ ಬಿಗ್​ಬಾಸ್​ ಸೀಸನ್​ 12ಕ್ಕೆ ಯಾವೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಅಂತ ಶೋ ಓಪನಿಂಗ್​ನಲ್ಲಿ ಗೊತ್ತಾಗಲಿದೆ. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸಂಭಾವ್ಯ ಪಟ್ಟಿಗಳು ವೈರಲ್ ಆಗುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us