/newsfirstlive-kannada/media/media_files/2025/10/08/bbk12_rakshita-2025-10-08-18-11-01.jpg)
ಮನೆಗೆ ರೀ ಎಂಟ್ರಿ ಕೊಟ್ಟು ಇನ್ನು ಒಂದು ವಾರವೂ ಆಗಿಲ್ಲ ಅಷ್ಟರಲ್ಲೇ ರಕ್ಷಿತಾ ಶೆಟ್ಟಿ ತಮ್ಮ ಹವಾ ಶುರು ಹಚ್ಚಿಕೊಂಡಿದ್ದಾರೆ. ಅಸುರಾಧಿಪತಿಯ ಆರ್ಭಟಕ್ಕೂ ಬಗ್ಗದೆ ಅವರಿಗೆ ಟಕ್ಕರ್ ಕೊಟ್ಟಿದ್ದಾರೆ.
ಬಿಗ್‌ಬಾಸ್ ಮನೆಗೆ ಬಂದ ದಿನವೇ ಎಲಿಮಿನೇಷನ್ ಆಗಿ ಸುದ್ದಿಯಾಗಿದ್ದ ರಕ್ಷಿತಾ ಕಳೆದ ವಾರ ಮತ್ತೆ ಮನೆಗೆ ರೀ ಎಂಟ್ರಿ ಪಡೆದಿದ್ದಾರೆ. ಆಗಲೇ ಮನೆಯಲ್ಲಿ ಅಸುರಾಧಿಪತಿ ಕಾಕ್ರೋಚ್ ಸುಧಿಯ ಆರ್ಭಟವೂ ಹೆಚ್ಚಾಗಿದ್ದು, ತಮ್ಮದೇ ಸರ್ವಾಧಿಕಾರ ಎಂದು ಮೆರೆಯುತ್ತಿದ್ದ ಸುಧಿಗೆ ರಕ್ಷಿತಾ ಸಖತ್ ಟಕ್ಕರ್ ಕೊಟ್ಟಿದ್ದಾರೆ.
ಇದನ್ನೂ ಓದಿ:ಬೆಂಗಳೂರು ವಿವಿ ಘಟಿಕೋತ್ಸವ.. 3 ಗೌರವ ಡಾಕ್ಟರೇಟ್, 218 ಗೋಲ್ಡ್​ ಮೆಡಲ್ ಪ್ರದಾನ
ಸುಖಾಸುಮ್ಮನೆ ತಮ್ಮನ್ನು ನಾಮಿನೇಟ್ ಮಾಡಿದ್ದಾರೆ ಎಂದು ಕುಪಿತಗೊಂಡಿರುವ ರಕ್ಷಿತಾ ಸುಧಿಯ ಸರ್ವಾಧಿಕಾರವನ್ನೂ ಲೆಕ್ಕಿಸದೆ ಅವರಿಗೆ ತಿರುಗಿ ಬಿದ್ದಿದ್ದಾರೆ. ಅವರಿಗಾದ ಅನ್ಯಾಯಕ್ಕೆ ತಿರುಗೇಟು ನೀಡೋಕೆ ಮುಂದಾಗಿರುವ ರಕ್ಷಿತಾ ಹನ್ನೆರಡು ಜನರ ಊಟವನ್ನೂ ಹಾಳು ಮಾಡಿದ್ದಾರೆ. ನನ್ನ ಹೊಟ್ಟೆಯ ಬಗ್ಗೆ ಚಿಂತೆಯೇ ಮಾಡದವರ ಬಗ್ಗೆ ನಾನ್ಯಾಕೆ ಚಿಂತಿಸಬೇಕು ಅವರು ಮಾಡಿದ್ದನ್ನು ಎಲ್ಲರೂ ಅನುಭವಿಸಿ ಎಂದಿದ್ದಾರೆ.
ಅಲ್ಲಿವರೆಗೂ ಹುಲಿಯಂತೆ ಆರ್ಭಟಿಸುತ್ತಿದ್ದ ಸುಧಿ, ರಕ್ಷಿತಾ ಹವಾದ ಮುಂದೆ ಗಪ್‌ಚುಪ್ ಅನ್ನೋಕೂ ಹಿಂದೇಟು ಹಾಕಿದ್ದಾರೆ. ಮಂಜು ಭಾಷಿಣೆಯಂತೂ ಊಟದ ಜೊತೆ ಆಟವಾಡಿದ ರಕ್ಷಿತಾ ಮೇಲೆ ಕುಪಿತರಾಗಿದ್ದು ತವಾದಲ್ಲಿದ್ದ ಊಟವನ್ನು ಹೀಗೆ ಎಸೆದ್ರೆ ಹೇಗಿರುತ್ತೆ ಎಂದು ರಕ್ಷಿತಾ ಮೇಲೆಯೇ ಒಗೆದಿದ್ದಾರೆ. ರಕ್ಷಿತಾ ಕೋಪ ಇನ್ಯಾವ ಮಟ್ಟಕ್ಕೆ ಹೋಗುತ್ತೆ. ಮನೆಯಲ್ಲಿ ಏನೇನು ಬುಡಮೇಲು ಆಗುತ್ತೆ ಅನ್ನೋದನ್ನ ನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ