/newsfirstlive-kannada/media/media_files/2025/10/08/nf_dhanya_reddy_gold-2025-10-08-17-45-28.jpg)
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 60ನೇ ವಾರ್ಷಿಕ ಘಟಿಕೋತ್ಸವದ ಕಾರ್ಯಕ್ರಮದಲ್ಲಿ ರ್ಯಾಂಕ್ ಪಡೆದ ಪದವಿ ವಿದ್ಯಾರ್ಥಿಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಚಿನ್ನದ ಪದಕ ಹಾಗೂ ಪ್ರಶಸ್ತಿ ಪ್ರದಾನ ಮಾಡಿದರು. ಇದೇ ವೇಳೆ ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಅವರು ಸೇರಿ ಮೂವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ರಾಜ್ಯಪಾಲರು ಆಯಾಯ ವಿಷಯದಲ್ಲಿ ರ್ಯಾಂಕ್ ಪಡೆದಿರುವ ವಿದ್ಯಾರ್ಥಿಗಳಿಗೆ ಗೋಲ್ಡ್ ಮೆಡಲ್ ಹಾಗೂ ಪ್ರಶಸ್ತಿ ನೀಡಿದರು. ಒಟ್ಟು 218 ವಿದ್ಯಾರ್ಥಿಗಳು ಈ ಗೌರವಕ್ಕೆ ಪಾತ್ರರಾದರು. ನ್ಯೂಸ್​ಫಸ್ಟ್ ಪ್ರೈಮ್ ವೆಬ್​ನಲ್ಲಿ ಕಾರ್ಯನಿರ್ವಹಿಸುವ ಧ್ಯನ್ಯ ರೆಡ್ಡಿ ಅವರಿಗೂ ಗೋಲ್ಡ್ ಮೆಡಲ್ ಪ್ರದಾನ ಮಾಡಲಾಯಿತು. ಬಿಎ ಪ್ರಥಮ ಶ್ರೇಣಿಯಲ್ಲಿ ಇಂಗ್ಲಿಷ್​​ನಲ್ಲಿ ಎಸ್ ಧನ್ಯ ರೆಡ್ಡಿ ಅವರು ಮೊದಲ ಸ್ಥಾನ ಪಡೆದಿದ್ದಾರೆ. ಧನ್ಯ ರೆಡ್ಡಿಗೆ ಮೇರಿ ಕೋದಂಡರಾವ್ ಬಹುಮಾನವನ್ನು ರಾಜ್ಯಪಾಲರು ವಿತರಣೆ ಮಾಡಿದರು.
ಇದನ್ನೂ ಓದಿ:BIGG BOSS ಕಂಟೆಸ್ಟೆಂಟ್ಸ್​ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ಇಬ್ಬರೂ ಅತ್ತೆ- ಸೊಸೆ ಗೊತ್ತಾ..?
/filters:format(webp)/newsfirstlive-kannada/media/media_files/2025/10/08/nf_dhanya_reddy-2025-10-08-17-45-37.jpg)
ಬೆಂಗಳೂರು ವಿಶ್ವವಿದ್ಯಾಲಯದ 60ನೇ ವಾರ್ಷಿಕ ಘಟಿಕೋತ್ಸವದ ಕಾರ್ಯಕ್ರಮದಲ್ಲಿ ಆಯಾಯ ವಿಷಯದಲ್ಲಿ ಯುನಿವರ್ಸಿಟಿಗೆ ಮೊದಲ ರ್ಯಾಂಕ್ ಪಡೆದಂತಹ 218 ವಿದ್ಯಾರ್ಥಿಗಳಿಗೆ ಗೋಲ್ಡ್ ಮೆಡಲ್ ಹಾಗೂ ಪ್ರಶಸ್ತಿಗಳನ್ನು ರಾಜ್ಯಪಾಲರು ನೀಡಿದರು. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್, ಕುಲಪತಿ ಡಾ. ಜಯಕರ ಎಸ್.ಎಂ, ಮುಖ್ಯ ಅತಿಥಿ ಡಾ ಪ್ರಹ್ಲಾದ್ ರಾಮರಾವ್ ಸೇರಿ ಸಿಂಡಿಕೇಟ್ ಸದಸ್ಯರು ಭಾಗಿಯಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us