/newsfirstlive-kannada/media/media_files/2025/09/02/kiccha-sudeep-bigg-boss-2025-09-02-20-20-37.jpg)
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ (Bigg Boss Kannada) ಹೊಸ ಸೀಸನ್ ಸೆಟ್ಟೇರಲು ಸಿದ್ಧವಾಗಿದೆ. ನಿರೀಕ್ಷೆಯಂತೆ ಬಿಗ್ ಬಾಸ್ ಸೀಸನ್-12 ಸೆಪ್ಟೆಂಬರ್ ತಿಂಗಳಲ್ಲೇ ಆರಂಭವಾಗ್ತಿದ್ದು, ಸೆಪ್ಟೆಂಬರ್ 28 ರಂದು ಅದ್ದೂರಿ ಚಾಲನೆ ಸಿಗಲಿದೆ. ಇಂದು ಕಿಚ್ಚ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಬಿಗ್ ಬಾಸ್ ಪ್ರೊಮೋ ಬಿಡುಗಡೆ ಆಗಿದೆ.
ಇದನ್ನೂ ಓದಿ:ಇದೇ ತಿಂಗಳಿಂದ ಬಿಗ್ಬಾಸ್- 12 ಆರಂಭ.. ಬರ್ತ್ಡೇಯಲ್ಲಿ ಕಿಚ್ಚ ಸುದೀಪ್ ಹೇಳಿದ್ದೇನು?
ಪ್ರೋಮೋದಲ್ಲಿ ಕಿಚ್ಚ ಹೇಳಿದ್ದೇನು..?
ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ ಸ್ವಾಗತ ಎನ್ನುತ್ತ ಸುದೀಪ್ ಪ್ರೋಮೋದಲ್ಲಿ ಎಂಟ್ರಿ ನೀಡಿದ್ದಾರೆ. ಸುದೀಪ್ ಹೊಸ ಹೇರ್ ಸ್ಟೈಲ್ನಲ್ಲಿ ಸಖತ್ ಆಗಿ ಕಾಣ್ತಿದ್ದಾರೆ. ಇನ್ನು, ಪ್ರೋಮೋದಲ್ಲಿ ಕರ್ನಾಟಕ, ರಾಜ್ಯಗಳ ಸಾಂಸ್ಕೃತಿಕ ಆಚರಣೆಯ ದೃಶ್ಯ ಇದೆ. ಬಿಗ್ ಬಾಸ್ ಶೋ ನೋಡುತ್ತಾ ಗಾಸಿಪ್ ಮಾಡುವ ಜನ ಸಮೂಹದ ಜೊತೆಗೆ ಸುದೀಪ್ ಧ್ವನಿ ಕೇಳಿಸಿದೆ.
‘ನನ್ನ ಪ್ರೀತಿಯ ಸಮಸ್ತ ಕನ್ನಡ ಕುಟುಂಬಕ್ಕೆ ಸ್ವಾಗತ’ ಎಂದು ಎಂಟ್ರಿ ನೀಡಿದ್ದಾರೆ. ಆಗ ‘ಹೊಸ ಸೆಟ್ ರೆಡಿ.. ಹೊಸ ಕಂಟೆಸ್ಟೆಂಟ್ ರೆಡಿ, ಏಳು ಕೋಟಿ ಕನ್ನಡಿಗರು ಕೂಡ ರೆಡಿ.. ಸರ್ ನೀವು..? ಎಂದು ಹಿನ್ನೆಲೆ ಧ್ವನಿ ಕೇಳಿಸಿದೆ. ಅದಕ್ಕೆ ‘ನಾನು ರೆಡಿ’ ಎಂದು ಸುದೀಪ್ ಥಮ್ಸ್ಅಪ್ ಮಾಡಿದ್ದಾರೆ.
ರಿಯಾಲಿಟಿ ಶೋಗಳ ಬಾಸ್, ರಿಯಲ್ ಎಂಟರ್‌ಟೈನ್‌ಮೆಂಟ್‌ಗೆ ಒಂದೇ ಅಡ್ರೆಸ್ | ಬಿಗ್ ಬಾಸ್ ಕನ್ನಡ ಸೀಸನ್ 12 ಬಿಗ್ ಬಾಸ್ GRAND OPENING |...
Posted by Colors Kannada on Tuesday, September 2, 2025
ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ಗೆ (Kichcha Sudeep) ಇಂದು 52ನೇ ಹುಟ್ಟುಹಬ್ಬದ ಸಂಭ್ರಮ. ಕಿಚ್ಚನ ಹುಟ್ಟು ಹಿನ್ನೆಲೆಯಲ್ಲಿ ಬಿಗ್ಬಾಸ್ ಕಡೆಯಿಂದ ಬಿಗ್ ಅಪ್ಡೇಟ್ಸ್ ಸಿಕ್ಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ