Advertisment

ಬಿಗ್​ಬಾಸ್​ ಮನೆಯಲ್ಲಿ ‘S’ ಪದ ಬಳಕೆ.. ಕಂಟೆಸ್ಟೆಂಟ್​ ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

ಬಿಗ್​ಬಾಸ್​ ಕನ್ನಡ ಸೀಸನ್​ 12ಗೆ ಸಂಕಷ್ಟದ ಮೇಲೆ ಮತ್ತೊಂದು ಸಂಕಷ್ಟ ಎದುರಾಗಿದೆ.ಮನೆಯಲ್ಲಿ ಕಂಟೆಸ್ಟೆಂಟ್ ರಕ್ಷಿತಾ ಬಗ್ಗೆ ‘S’ ಕ್ಯಾಟಗರಿ ಎಂದು ಪದಬಳಕೆ ಮಾಡಿದಕ್ಕೆ ಅಶ್ವಿನಿ ಗೌಡ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

author-image
Ganesh Kerekuli
bb clash
Advertisment

‘S’ ಕ್ಯಾಟಗರಿ ಪದಬಳಕೆ  ಅಶ್ವಿನಿ ಗೌಡ ವಿರುದ್ಧ ದೂರು..!

ಕಳೆದ ವಾರ ಬಿಗ್​ಬಾಸ್​ ಮನೆಯಲ್ಲಿ ಮಾಡಿದ ಗೆಜ್ಜೆ ಸೌಂಡು ಇಡೀ ಕರ್ನಾಟಕದಲ್ಲಿ ಸದ್ದು ಮಾಡಿತ್ತು. ಅಶ್ವಿನಿ ಗೌಡ ಹಾಗೂ ಜಾಹ್ನವಿ ಮಾತನಾಡುವ ಸಂದರ್ಭದಲ್ಲಿ ಕಂಟೆಸ್ಟೆಂಟ್ ರಕ್ಷಿತಾ ಎಸ್​ ಕ್ಯಾಟಗರಿ ಸೇರಿರೊದು ಎಂದು ಪದಬಳಕೆ ಮಾಡಿದ್ದರು. ಇದೀಗ ಇದ್ರಿಂದ ಸಿಡಿದೆದ್ದ ಹಿರಿಯ ವಕೀಲ ಪ್ರಶಾಂತ್ ಮೆತಲ್ ಎಂಬುವವರಿಂದ ಅಶ್ವಿನಿ ಗೌಡ ವಿರುದ್ಧ ಜಾತಿ ನಿಂದನೆ, ವ್ಯಕ್ತಿ ನಿಂದನೆ ಆರೋಪದಡಿ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. 

Advertisment

ಈ ಬಾರಿ ಬಿಗ್​ಬಾಸ್​ಗೆ ಕಂಟಕದ ಮೇಲೆ ಕಂಟಕ ಎದುರಾಗುತ್ತಿದೆ. ಕಳೆದವಾರ ಬಿಗ್ ಬಾಸ್ ಮನೆಗೆ ಮಾಲಿನ್ಯ ನಿಯಂತ್ರಣ ಮಂಡಲಿಯಿಂದ ಬಿಸಿ ಮುಟ್ಟಿತ್ತು. ಇದ್ರಿಂದ ಬಿಗ್​ಬಾಸ್ ಮನೆಗೆ ಬೀಗ ಹಾಕಲಾಗಿತ್ತು. ಇದೀಗ ಅಶ್ವಿನಿ ಗೌಡ ಪದಬಳಕೆಯಿಂದ ಬಿಗ್​ಬಾಸ್​ ಮನೆ ಮತ್ತೊಂದು ವಿವಾದಕ್ಕೆ ಸಿಲುಕಿದಂತೆ ಆಗಿದೆ.

Ashwini Gowda (3)

ಕಳೆದವಾರ ಬಿಗ್ ಬಾಸ್ ಮನೆಯಲ್ಲಿ ಕನ್ನಡ ಹೋರಾಟಗಾರ್ತಿ ಮತ್ತು ನಟಿ ಅಶ್ವಿನಿ ಗೌಡ ಮತ್ತು ರಕ್ಷಿತಾ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ರಕ್ಷಿತಾಳಿಗೆ ‘ಎಸ್​’ ಕ್ಯಾಟಗರಿ ಅನ್ನೊ ಪದ ಬಳಕೆ ಮಾಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್ ಕ್ಯಾಟಗರಿ ಅಂತ ಪದ ಬಳಕೆ, ಜಾತಿ ನಿಂದನೆ ಮತ್ತು ವ್ಯಕ್ತಿ ನಿಂದನೆಯಾಗಲಿದೆ.

ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ಸ್ಪರ್ಧಿ ಅಶ್ವಿನಿಗೌಡ, ಕಲರ್ಸ್ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್, ಕ್ಲಸ್ಟರ್ ಹೆಡ್ ಸುಷ್ಮಾ, ಮತ್ತು ಡೈರೆಕ್ಟರ್ ಪ್ರಕಾಶ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಹಿರಿಯ ವಕೀಲ ಪ್ರಶಾಂತ್ ಮೆತಲ್ ದೂರು ದಾಖಲಿಸಿದ್ದಾರೆ.

Advertisment

ಇದನ್ನೂ ಓದಿ: BIGG BOSS 12; ಸ್ಪರ್ಧಿಗಳಿಗೆ ಸೂಪರ್​ ಹೀರೋ ಆದ ಕ್ರಶ್​ ಮೆಟರಿಯಲ್​ ಸೂರಜ್​ ಸಿಂಗ್​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIG BOSS 12 SEASON Ashwini Gowda
Advertisment
Advertisment
Advertisment