/newsfirstlive-kannada/media/media_files/2025/10/23/bbk12_suraj-2025-10-23-11-33-10.jpg)
ಬಿಗ್‌ಬಾಸ್ ನೀಡಿದ ಕ್ಯಾಪ್ಟನ್ಸಿ ಟಾಸ್ಕ್‌ನ ವಿಶೇಷ ಅಧಿಕಾರದಿಂದಾಗಿ ಮನೆಯಲ್ಲಿ ಮಹಾ ಕಾಳಗವೇ ನಡೆದಿದೆ. ಆದ್ರೆ ಸೂರಜ್ ಸಿಂಗ್ ತಮ್ಮ ತಂಡದ ಪರ ನಿಂತು ಎಲ್ಲರ ಮನಗೆದ್ದಿದ್ದಾರೆ. ಈ ನಿರ್ಧಾರದಿಂದ ಮನೆಯ ಸದಸ್ಯರು ರಿಷಾ ಮತ್ತು ರಘು ವಿರುದ್ಧ ತಿರುಗಿ ಬಿದ್ದಿದ್ದಾರೆ.
ಕ್ಯಾಪ್ಟನ್ಸಿ ಟಾಸ್ಕ್ ಮಹಿಮೆ..!
ಇದೆಲ್ಲದರ ಜೊತೆ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಇಬ್ಬರನ್ನು ಹೊರಗಿಡುವ ಅಧಿಕಾರ ಪಡೆದುಕೊಂಡಿದ್ದರು. ಮೂವರು ಚರ್ಚಿಸಿ ಅಶ್ವಿನಿ ಗೌಡ ಮತ್ತು ಕಾಕ್ರೋಚ್ ಸುಧಿ ಅವರನ್ನು ಟಾಸ್ಕ್‌ನಿಂದ ಹೊರಗಿಟ್ಟಿದ್ದಾರೆ. ಈ ಮೂವರೇ ಕ್ಯಾಪ್ಟನ್ಸಿ ಟಾಸ್ಕ್‌ನ ತಂಡಗಳಿಗೆ ಲೀಡರ್ ಆಗಿದ್ದಾರೆ. ಇದೀಗ ಬಿಗ್‌ಬಾಸ್ ನೀಡಿದ ಮತ್ತೊಂದು ಟ್ವಿಸ್ಟ್‌ನಿಂದ ದೊಡ್ಮನೆ ರಣರಂಗವಾಗಿದೆ.
ತಂಡದ ಕ್ಯಾಪ್ಟನ್ ಆಗಿರುವ ಮೂವರಿಗೂ ವಿಶೇಷ ಆಯ್ಕೆಯೊಂದನ್ನು ಬಿಗ್‌ಬಾಸ್ ನೀಡಿದರು. ತಮ್ಮ ಮುಂದಿರುವ ಪವರ್ ಇರೋ ನಾಣ್ಯ ತೆಗೆದುಕೊಂಡ್ರೆ ನೇರವಾಗಿ ಕ್ಯಾಪ್ಟನ್ಸಿ ಆಟಕ್ಕೆ ಆಯ್ಕೆಯಾಗುತ್ತೀರಿ. ಆದ್ರೆ ನಿಮ್ಮ ತಂಡದ ಸದಸ್ಯರೆಲ್ಲರೂ ಆಟದಿಂದ ಹೊರಗುಳಿಯುತ್ತಾರೆ ಎಂದು ಬಿಗ್‌ಬಾಸ್ ಹೇಳುತ್ತಾರೆ. ಮೂವರ ಪೈಕಿ ರಿಷಾ ಮತ್ತು ರಘು ವಿಶೇಷ ಪವರ್ ಇರೋ ನಾಣ್ಯ ಸ್ವೀಕರಿಸುತ್ತಾರೆ. ಆದ್ರೆ ಸೂರಜ್ ಮಾತ್ರ ತಮ್ಮ ತಂಡದೊಂದಿಗೆ ನಿಲ್ಲುತ್ತಾರೆ.
ಇದನ್ನೂ ಓದಿ: ಊಟಕ್ಕಾಗಿ ಬಿಕ್ಕಿ ಬಿಕ್ಕಿ ಅತ್ತ ರಿಷಾಗೌಡ.. ದೊಡ್ಮನೆಯಲ್ಲಿ ಅಸಲಿಗೆ ಆಗಿದ್ದೇನು?
/filters:format(webp)/newsfirstlive-kannada/media/media_files/2025/10/23/bbk12_suraj_new-2025-10-23-11-33-20.jpg)
ಕನ್ಫೆಷನ್ ರೂಮ್‌ನಲ್ಲಿ ನಡೆದ ಈ ಪ್ರಕ್ರಿಯೆಯನ್ನು ಮನೆ ಮಂದಿಯೆಲ್ಲರೂ ಲಿವಿಂಗ್ ರೂಮ್‌ನಲ್ಲಿ ಟಿವಿ ಮೂಲಕ ನೋಡಿದ್ದಾರೆ. ರಿಷಾ ಮತ್ತು ರಘು ನಿರ್ಧಾರಕ್ಕೆ ಇಡೀ ಮನೆ ತಿರುಗಿಬಿದ್ದಿದೆ. ಮೂವರು ಕನ್ಫೆಷನ್ ರೂಮ್‌ನಿಂದ ಹೊರ ಬರುತ್ತಿದ್ದಂತೆ ರಿಷಾ ಮತ್ತು ರಘು ವಿರುದ್ಧ ಅವರ ತಂಡದ ಆಟಗಾರರು ಮುಗಿಬಿದ್ದಿದ್ದಾರೆ.
ರಿಷಾ ಗೌಡ ಹಾಗೂ ರಘು ವಿರುದ್ಧ ಟೀಮ್ ಗೆಲ್ಲಿಸುವುದು ಕ್ಯಾಪ್ಟನ್‌ಗಿರೋ ಜವಾಬ್ದಾರಿ ಅಂತಾ ಎಲ್ಲರೂ ಕಿರುಚಾಡಿ ಜಗಳ ಮಾಡಿದರು.ಆದ್ರೆ ತಮ್ಮನ್ನು ಆಟದಲ್ಲಿ ಉಳಿಸಿಕೊಂಡಿದ್ದ ಸೂರಜ್ ತಂಡದ ಸದಸ್ಯರು ತುಂಬಾ ಖುಷಿಯಾಗಿದ್ದಾರೆ. ಪವರ್ ನಾಣ್ಯ ಬಿಟ್ಟು ಬಂದ ಸೂರಜ್ ಒಬ್ಬ ಫೂಲ್ ಅಂತಾ ರಿಷಾ ಹೇಳಿದ್ದಾರೆ. ಸದ್ಯ ಸೂರಜ್​ ಸಿಂಗ್​ ನಿರ್ಧಾರ ಬಿಗ್​ಬಾಸ್​ ಪ್ರೇಕ್ಷಕರಿಗೂ ಉತ್ತಮ ಎನಿಸಿತು. ಈ ಸಲ ಕಿಚ್ಚನ ಚಪ್ಪಾಳೆ ಸೂರಜ್​ ಸಿಂಗ್​ಗೆ ಬರಲಿ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us