Advertisment

ಊಟಕ್ಕಾಗಿ ಬಿಕ್ಕಿ ಬಿಕ್ಕಿ ಅತ್ತ ರಿಷಾಗೌಡ.. ದೊಡ್ಮನೆಯಲ್ಲಿ ಅಸಲಿಗೆ ಆಗಿದ್ದೇನು?

ಬಿಗ್​ಬಾಸ್​ ಮನೆಯಲ್ಲಿ ದಿನಕ್ಕೆ ಒಬ್ಬರು ಕಣ್ಣೀರು ಹಾಕುತ್ತಿದ್ದಾರೆ. ಇದೀಗ ಟಾಸ್ಕ್​ ವೇಳೆ ಊಟಕ್ಕಾಗಿ ರಿಷಾ ಗೌಡ ಗಳಗಳನೇ ಅತ್ತಿದ್ದಾರೆ. ರಿಷಾ ಬಿಗ್​ಬಾಸ್​ ನೀಡಿದ ಟಾಸ್ಕ್​ನಲ್ಲಿ ನಾಣ್ಯ ಉಳಿಸಿಕೊಳ್ಳುವ ಬೆಡ್ ರೂಮ್​ ಏರಿಯಾದಲ್ಲಿ ಇರುತ್ತಾರೆ. ಆ ವೇಳೆ ಹಸಿವಿನಿಂದ ಕಣ್ಣೀರಾಕಿದ್ದಾರೆ.

author-image
Ganesh Kerekuli
risha

ರಿಷಾ ಗೌಡ Photograph: (ಕಲರ್ಸ್​ ಕನ್ನಡ)

Advertisment

ಕಣ್ಣೀರಾಕಿದ್ಯಾಕೆ ರಿಷಾ ಗೌಡ..!

ಈ ವಾರ ದೊಡ್ಮನೆ ಫಿಸಿಕಲ್​ ಟಾಸ್ಕ್​ನಿಂದ ರಂಗೇರಿದೆ. ಬಿಗ್​ಬಾಸ್​ ಕ್ಯಾಪ್ಟನ್​ಸಿ ಆಯ್ಕೆಗಾಗಿ ಟಾಸ್ಕ್​ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದಿರುವ ರಿಷಾ ಗೌಡ ಹಸಿವಿನಿಂದ ಕಣ್ಣೀರಾಕಿದ್ದಾರೆ.

Advertisment

ನಿನ್ನೆ ಬಿಗ್​ಬಾಸ್​ ಎಪಿಸೋಡಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ನಾಣ್ಯಗಳ ಸಂಗ್ರಹ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ಎಲ್ಲ ಸದಸ್ಯರನ್ನು ಮೂರು ತಂಡಗಳಾಗಿ ಮಾಡಲಾಗಿತ್ತು. ಗಾರ್ಡನ್ ಏರಿಯಾದಲ್ಲಿ ಮೇಲಿನಿಂದ ನಾಣ್ಯಗಳನ್ನು ಎಸೆಯಲಾಗುತ್ತದೆ. ಅದರಲ್ಲಿನ ಒಬ್ಬರ ಮೇಲೆ ಬಿದ್ದು ನಾಣ್ಯ ಕಸಿದುಕೊಂಡಿದ್ದಾರೆ ವೀಕ್ಷಕರಿಗೆ ಎಂಟರ್​ಟೈಮೆಂಟ್​ ಕೊಟ್ಟಿದ್ದಾರೆ. ಈ ಟಾಸ್ಕ್​ನಲ್ಲಿ ಅತಿಹೆಚ್ಚು ನಾಣ್ಯಗಳನ್ನು ಸಂಗ್ರಹಿಸಿ ಇಟ್ಟುಕೊಂಡವರು ವಿನ್ನರ್ ಆಗುತ್ತಾರೆ. 

ಇದನ್ನೂ ಓದಿ:ಟೀಮ್ ಇಂಡಿಯಾಗೆ ಶಾಕ್​ ಮೇಲೆ ಶಾಕ್.. ಗಿಲ್​ ಔಟ್​ ಆದ ಬೆನ್ನಲ್ಲೇ​ ಕೊಹ್ಲಿ ಮತ್ತೊಮ್ಮೆ ಡಕೌಟ್​!

TASK
ಟಾಸ್ಕ್​

ಹಾಗಾಗಿ ರಿಷಾ ಗೌಡ ತಮ್ಮ ತಂಡದ ಗೆಲುವಿಗಾಗಿ ನಾಣ್ಯ ಉಳಿಸಿಕೊಳ್ಳಲೂ ಬೆಡ್​ ರೂಮ್ ಏರಿಯಾದಲ್ಲಿ ಇರುತ್ತಾರೆ. ಎದ್ದು ಹೋದ್ರೆ ಉಳಿದವರು ನಾಣ್ಯ ಕದಿಯಲು ಪ್ಲಾನ್​ ಮಾಡ್ತಾರೆ. ಹಾಗಾಗಿ ರಿಷಾ ಬೆಡ್​ ರೂಮ್ ಏರಿಯಾದಲ್ಲಿ ಇರ್ತಾರೆ. ಇದೇ ಸಮಯದಲ್ಲಿ ರಿಷಾಗೆ ಹಸಿವಾಗುತ್ತಿದೆ ಅಂದಿದ್ದಕ್ಕೆ ಅವರ ಟೀಮ್​ನವರು ಊಟ ಬೆಡ್​ ರೂಮ್​ಗೆ ಕೊಡಬಹುದಾ ಅಂತಾ ಕೇಳ್ತಾರೆ. ಅದಕ್ಕೆ ನೋ ಬೆಡ್​ ರೋಮ್​ಗೆ ಊಟ ತಗೊಂಡು ಹೋಗುವ ಹಾಗಿಲ್ಲ. ಊಟ ಬೇಕಿದ್ದರೇ ಡೈನಿಂಗ್​ ಟೇಬಲ್​ಗೆ ಬಂದು ಮಾಡಲಿ ಅಂತಾರೆ. ಅಶ್ವಿನಿಗೌಡ ಮಾತು ಕೇಳಿ ರಿಷಾ ಗೌಡ ಹಸಿವಿನಿಂದ ಕಣ್ಣೀರಾಕಿದ್ದಾರೆ. 

Advertisment

ಇದನ್ನೂ ಓದಿ: ಗಿಲ್​ಗೆ ಒಲಿಯದ ಆರಂಭದ ಅದೃಷ್ಟ; ಮತ್ತೆ ಟೀಮ್ ಇಂಡಿಯಾ ಫಸ್ಟ್​ ಬ್ಯಾಟಿಂಗ್​, ಪ್ಲೇಯಿಂಗ್- 11?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

BIG BOSS 12 SEASON Risha Gowda
Advertisment
Advertisment
Advertisment