/newsfirstlive-kannada/media/media_files/2025/10/23/kavya-2-2025-10-23-16-06-20.jpg)
ಕಾವ್ಯಾ -ಅಶ್ವಿನಿಗೌಡ Photograph: (ಕಲರ್ಸ್ ಕನ್ನಡ)
ಅಶ್ವಿನಿಗೌಡ ಹಾಗೂ ಕಾವ್ಯ ಮಧ್ಯೆ ಮನೆ ಕೆಲಸದ ವಿಚಾರಕ್ಕೆ ಮತ್ತೆ ಬಿಗ್​ ಬಾಸ್ ಮನೆಯೊಳಗೆ ಗಲಾಟೆ ನಡೆದಿದೆ. ಕಲರ್ಸ್​ ಕನ್ನಡ ಬಿಗ್​ ಬಾಸ್​ ಕನ್ನಡ ಸೀಸನ್​ 12 ಮತ್ತೊಂದು ಪ್ರೋಮೊ ರಿಲೀಸ್ ಆಗಿದ್ದು ಪ್ರೇಕ್ಷಕರ ಕ್ಯೂರಾಸಿಟಿ ಇನ್ನಷ್ಟು ಹೆಚ್ಚಿಸಿದೆ.
ದೊಡ್ಮನೆಲ್ಲಿ ಏನಾಯ್ತು..?
ಕನ್ನಡದ ಬಿಗ್​ಬಾಸ್​ ದಿನೇ ದಿನೇ ರಣರಂಗವಾಗಿ ಏರ್ಪಡುತ್ತಿದೆ. ಮೊನ್ನೆ ರಾಶಿಕಾ ಹಾಗೂ ರಕ್ಷಿತಾ ಮಧ್ಯೆ ನಾಮಿನೇಷನ್ ಗಲಾಟೆ ನಡೆದಿದೆ. ಇದೀಗ ಬಿಗ್​ಬಾಸ್​ ಮನೆಯಲ್ಲಿ ಸದಾ ಸುದ್ದಿಯಲ್ಲಿರುವ ಅಶ್ವಿನಿಗೌಡ ಹಾಗೂ ಕಾವ್ಯ ಮಧ್ಯೆ ದೊಡ್ಡ ರಣರಂಗ ನಡೆದಿದೆ.
/filters:format(webp)/newsfirstlive-kannada/media/media_files/2025/10/23/kavya_bbk12-2025-10-23-16-18-34.jpg)
ಮನೆಯ ಕೆಲಸ ಡಿವೈಡ್​ ಮಾಡೋ ವಿಚಾರಕ್ಕೆ ಗಲಾಟೆ ನಡೆದಿದೆ. ಕಾವ್ಯ, ಗಿಲ್ಲಿ ಜೊತೆಗೆ ಕೆಲಸ ಮಾಡ್ತೀನಿ ಅಂದಿದ್ದಾರೆ. ಆವಾಗ ಅಡಿಗೆ ಕೆಲಸ ಮಾಡಿ ಗಿಲ್ಲಿ ನಟನ ಜೊತೆಗೆ ವಾಶ್​ರೂಮ್​ ಕ್ಲೀನ್​ ಮಾಡ್ತಿನೀ ಅಂದ್ರೆ ಹೇಗೆ ಆಗುತ್ತೆ ಅಂತಾ ಅಶ್ವಿನಿ ವಾಗ್ವಾದ ನಡೆಸಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಕಾವ್ಯ ಬೇರೆಯವರ ವಿಚಾರಕ್ಕೆ ನೀವು ಬರಬೇಡಿ ಎಂದು ಪ್ರತಿವಾದಿಸಿದ್ದಾರೆ.
ಇದಕ್ಕೆ ಅಶ್ವಿನಿ ಹೇಯ್​ ಅಂತಾ ಎಲ್ಲಾ ಕೈ ತೋರಿಸ್ಬೇಡ ಅಂತಾ ಗಲಾಟೆ ನಡೆದಿದ್ದು, ಅಶ್ವಿನಿ ಗೌಡ ಮತ್ತು ಕಾವ್ಯ ಇಬ್ಬರೂ ಕೈ ಕೈ ಮಿಲಾಯಿಸೋವರೆಗೆ ಹೋಗಿದ್ದರು. ಆದರೆ ಮಿಲಾಯಿಸಿಲ್ಲ. ಪ್ರೊಮೋದಲ್ಲಿ ಪ್ರೇಕ್ಷಕರಿಗೆ ಇಂದಿನ ಎಪಿಸೋಡಿನ ಬಗ್ಗೆ ಸಖತ್​ ಕುತೂಹಲ ಮೂಡಿಸಿದಂತೂ ನಿಜ. ನಾಲ್ಕನೇ ವಾರ ದೊಡ್ಮನೆ ಕಾವೇರಿದೆ. ಅಶ್ವಿನಿ vs ಕಾವ್ಯ ಈ ಇಬ್ಬರ ಈ ಹೀಟ್​ ಆಫ್ ದ ಮೂಮೆಂಟ್​ ಕೈಕೈ ಮಿಲಾಯಿಸೋ ಹಂತಕ್ಕೆ ಹೋಗಿದ್ದು ಮುಂದೆ ಏನಾಗಿದೆ ಎಂದು ತಿಳಿಯಲು ಎಪಿಸೋಡ್ ನೋಡಲೇಬೇಕು.
ಇದನ್ನೂ ಓದಿ: ಕಾಪಾಡಿ ಕಾಪಾಡಿ ಎಂದು ಕೂಗಿದ್ಯಾಕೆ ಕಾವ್ಯಾ..! ಅಸಲಿಗೆ ಆಗಿದ್ಹೇನು ?
ಕೈ ಕೈ ಮಿಲಾಯಿಸಿದ್ರಾ ಅಶ್ವಿನಿ ಗೌಡ ಮತ್ತು ಕಾವ್ಯ?
— Colors Kannada (@ColorsKannada) October 23, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/yqkxsWTXTD
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us