/newsfirstlive-kannada/media/media_files/2025/10/25/asha_jois-2025-10-25-13-35-03.jpg)
ಬೆಂಗಳೂರು: ಕನ್ನಡದ ಅನೇಕ ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿರುವ ಶೃಂಗೇರಿ ಶಾರದಾ ಪೀಠದ ನಟಿ ಆಶಾ ಜೋಯಿಸ್ ವಿರುದ್ಧ ಬ್ಲಾಕ್ ಮೇಲ್ ಆರೋಪ ಕೇಳಿ ಬಂದಿದೆ. ಪಾರ್ವತಿ (61) ಎಂಬುವರು ತಿಲಕನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಶೃಂಗೇರಿ ಶಾರದಾ ಪೀಠದ ಜೋಯಿಸ್ ಕುಟುಂಬದ ಸದಸ್ಯೆ ಹಾಗೂ ಮಿಸ್ ಇಂಡಿಯಾ ಪ್ಲಾನೆಟ್ 2016ರಲ್ಲಿ ಸ್ಪರ್ಧಿಯಾಗಿದ್ದ ನಟಿ ಆಶಾ ಜೋಯಿಸ್ ವಿರುದ್ಧ ಪಾರ್ವತಿ ಅವರು ಪ್ರಕರಣ ದಾಖಲು ಮಾಡಿದ್ದಾರೆ. ಆಶಾ ಜೋಯಿಸ್ ಅವರು ಕನ್ನಡದ ಅನೇಕ ಸೀರಿಯಲ್​ಗಳಲ್ಲಿ ಪೋಷಕ ಪಾತ್ರಗಳನ್ನು ಮಾಡಿದ್ದಾರೆ.
ಆಶಾ ಜೋಯಿಸ್, ಪಾರ್ವತಿ ಪರಿಚಯ.. ಬ್ಲ್ಯಾಕ್​ಮೇಲ್​​ಗೆ ಕಾರಣ?
61 ವರ್ಷದ ಪಾರ್ವತಿಗೆ ಮೂರು ವರ್ಷದ ಹಿಂದೆ ಆಶಾ ಜೋಯಿಸ್ ಪರಿಚಯವಾಗಿದ್ದರು. ತಾನು ಶೃಂಗೇರಿ ಮಠದ ಜೋಯಿಸ್ ಕುಟುಂಬದವಳು ಹಾಗೂ ಸೀರಿಯಲ್ ನಟಿ ಎಂದು ಹೇಳಿ ಆಶಾ ಹೇಳಿಕೊಂಡಿದ್ದಳು. ಪಾರ್ವತಿ ಹಲವು ವರ್ಷಗಳ ಹಿಂದೆ ತಾನು ಕೆಲಸ ಮಾಡುತ್ತಿದ್ದ ಕಂಪನಿ ಮಾಲೀಕರನ್ನೇ ಮದುವೆಯಾಗಿದ್ದರು.
/filters:format(webp)/newsfirstlive-kannada/media/media_files/2025/10/25/asha_jois_1-2025-10-25-13-35-28.jpg)
ಈ ವಿಚಾರ ತಿಳಿದುಕೊಂಡ ಆಶಾ ಜೋಯಿಸ್ ಪತಿಗೆ ಬ್ಲ್ಯಾಕ್​ಮೇಲ್ ಮಾಡಲು ಬಲವಂತ ಮಾಡಿದ್ದಾರೆ. ಸ್ನೇಹಿತೆಯ ಖಾಸಗಿ ವೀಡಿಯೋ, ಫೋಟೋಗಳನ್ನು ಕದ್ದು ಇತರರ ಜೊತೆ ಹಂಚಿ ಬ್ಲ್ಯಾಕ್​ಮೇಲ್ ಮಾಡಿದ್ದಾರೆ. ಅಲ್ಲದೇ 2 ಕೋಟಿ ರೂಪಾಯಿಗೆ ಬ್ಲ್ಯಾಕ್​​ಮೇಲ್ ಮಾಡಲು ಬಲವಂತದ ಪ್ರಚೋದನೆ ನೀಡಿರುವ ಆರೋಪ ಮಾಡಲಾಗಿದೆ.
ಆಶಾ ಜೋಯಿಸ್ ಬಲವಂತಕ್ಕೆ ಪಾರ್ವತಿ ಒಪ್ಪದೆ ನಿರಾಕರಿಸಿದ್ದಳು. ಇದೇ ದ್ವೇಷಕ್ಕೆ ಆಕೆಯ ಖಾಸಗಿ ವಿಡಿಯೋಗಳು, ವಾಯ್ಸ್ ರೆಕಾರ್ಡ್ ಹಾಗೂ ಪ್ರೈವೇಟ್ ಫೋಟೋಗಳನ್ನ ನಟಿ ಕದ್ದಿದ್ದಾರೆ. ಬಳಿಕ ಅವುಗಳನ್ನು ಪಾರ್ವತಿ ಅವರಿಗೆ ಪರಿಚಯ ಇರುವ ವ್ಯಕ್ತಿಗಳಿಗೆ ಕಳಿಸಿದ್ದಳಂತೆ. ಈ ಹಿನ್ನೆಲೆಯಲ್ಲಿ ತನ್ನ ಘನತೆಗೆ ಕುಂದುಂಟಾಗಿದೆ ಹಾಗೂ ತನ್ನ ಖಾಸಗಿ ಡೇಟಾವನ್ನ ಕದ್ದಿದ್ದಾರೆಂದು ಆರೋಪಿಸಿ ಪಾರ್ವತಿ ತಿಲಕನಗರ ಪೊಲೀಸ್ ಠಾಣೆಯಲ್ಲಿ ಆಶಾ ಜೋಯಿಸ್​ ವಿರುದ್ಧ ಎಫ್​​ಐಆರ್ ದಾಖಲು ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us