Advertisment

ಬ್ರಹ್ಮಗಂಟು ಹೊಸ ಅಧ್ಯಾಯ.. ದಿಯಾ ಪಾಲಕ್ಕಲ್ ಅಲ್ಲಲ್ಲಾ.. ದೀಪಾ ಲುಕ್​ಗೆ ವೀಕ್ಷಕರು ಫಿದಾ!

ಈ ಚಾಲೆಂಜ್​ನ ಸ್ವೀಕರಿಸಿದ ನಟಿಗೆ ಒರಿಜನಲ್​ ಗೆಟಪ್​ನಲ್ಲಿ ಒಂದೇ ಒಂದು ಬಾರಿ ವೀಕ್ಷಕರ ಮುಂದೆ ಕಾಣಿಸಿಕೋಳ್ಬೇಕು ಎಂಬ ಹಂಬಲ ಇತ್ತು. ಈಗ ಆ ಆಸೆ ಈಡೇರಿದೆ. ದೀಪಾ ಮಾಡಲ್​ ಆಗಿ ಬದಲಾಗ್ತಿದ್ದು ಬಾಹ್ಯ ಸೌಂದರ್ಯ ಮುಖ್ಯನಾ, ಇಲ್ಲ ಆಂತರಿಕ ಸೌಂದರ್ಯ ಮುಖ್ಯಾನಾ?.

author-image
Bhimappa
Diya_Palakkal
Advertisment

ಯಾವಾಗಪ್ಪ ದೀಪಾ ಲುಕ್​ ಬದಲಾಗುತ್ತೆ? ಸಾಕಪ್ಪ ಸಾಕು ಈ ಕಪ್ಪು ಬಣ್ಣ ಬಳಿದಿರೋ ಮುಖ ನೋಡೋದು ಎಂದು ಕಾಯುತ್ತಿದ್ದ ವೀಕ್ಷಕರಿಗೆ ಕೊನೆಗೂ ಆ ಸವಿ ಕ್ಷಣ ಸಿಕ್ಕಿದೆ. ಚಾಲೆಂಜ್​ ಸ್ವೀಕರಿಸಿದ ದೀಪಾ ಬದುಕಲ್ಲಿ ಬದಲಾವಣೆಯ ಗಾಳಿ ಬೀಸಿದೆ.

Advertisment

ಹೌದು, ದೀಪಾ ಪಾತ್ರಕ್ಕೆ ಜೀವ ತುಂಬಿರೋ ನಟಿ ದಿಯಾ ಪಾಲಕ್ಕಲ್. ಇವ್ರ ರೂಪ ಹಾಲು ಬಣ್ಣದ್ದು.  ಸಖತ್​ ಮುದ್ದುಗಿಯೂ ಕೂಡ ಇದ್ದಾರೆ. ಆದ್ರೇ ದೀಪಾ ಪಾತ್ರದ ಡಿಮ್ಯಾಂಡ್​ಗೋಸ್ಕರ ಪ್ರತಿ ದಿನ ಗಂಟೆಗಟ್ಟಲೆ ಕಪ್ಪು ಬಣ್ಣದ ಮೇಕಪ್​ ಬಳಿದುಕೊಂಡು, ಹಲ್ಲಿಗೆ ತಂತಿ ಬೀಗಿದುಕೊಂಡು, ದೊಡ್ಡ ಕನ್ನಡಕ ಧರಿಸಿ ಅಸ್ತವ್ಯಸ್ತವಾಗಿ ಸಜ್ಜಾಗುತ್ತಿದ್ದರು. 

ಇದನ್ನೂ ಓದಿ:ಹೃದಯವಂತ ಸೂರ್ಯಕುಮಾರ್​.. ಭಾರತದ ಆರ್ಮಿ, ಪಹಲ್ಗಾಮ್​ ಸಂತ್ರಸ್ತರಿಗೆ ಎಷ್ಟು ಲಕ್ಷ ದೇಣಿಗೆ ಕೊಟ್ರು?

Diya_Palakkal_STYLE

ಯಾವುದೇ ಸಂದರ್ಶನಕ್ಕೆ ಬಂದರೂ, ಶೋಗಳಲ್ಲಿ ಕಾಣಿಸಿಕೊಂಡರೂ ದೀಪಾ ಪಾತ್ರದ ರೂಪದಲ್ಲೇ ಕಾಣಿಸಿಕೊಳ್ಬೇಕ್ಕಿತ್ತು. ಈ ಚಾಲೆಂಜ್​ನ ಸ್ವೀಕರಿಸಿದ ನಟಿಗೆ ಒರಿಜನಲ್​ ಗೆಟಪ್​ನಲ್ಲಿ ಒಂದೇ ಒಂದು ಬಾರಿ ವೀಕ್ಷಕರ ಮುಂದೆ ಕಾಣಿಸಿಕೋಳ್ಬೇಕು ಎಂಬ ಹಂಬಲ ಇತ್ತು. ಈಗ ಆ ಆಸೆ ಈಡೇರಿದೆ. ದೀಪಾ ಮಾಡಲ್​ ಆಗಿ ಬದಲಾಗ್ತಿದ್ದು ಬಾಹ್ಯ ಸೌಂದರ್ಯ ಮುಖ್ಯನಾ, ಇಲ್ಲ ಆಂತರಿಕ ಸೌಂದರ್ಯ ಮುಖ್ಯಾನಾ ಎಂಬುದರ ಮೇಲೆ ಕಥೆ ಸಾಗಲಿದೆ. ಇನ್ಮುಂದೆ ದೀಪಾ ದಿ ಫೇಮಸ್ ಮಾಡಲ್​ ದಿಶಾ ಆಗಿ ರೂಪಾಂತರಗೊಳ್ಳಲಿದ್ದಾರೆ.

Advertisment

ದೀಪಾ ದಿಶಾ ಆಗಿ ಬದಲಾಗಿದ್ದು ಹೇಗೆ? ಮೇಕಪ್​ ತಯಾರಿ ಹೇಗಿತ್ತು ಎನ್ನುವ ಬಗ್ಗೆ ದೀಪಾ ಅರ್ಥಾತ್​ ದಿಯಾ ಪಾಲಕ್ಕಲ್​ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ದಿಯಾ ರಿಯಲ್​ ಆಗಿ ಹೇಗಿದ್ದಾರೋ ಹಾಗೆಯೇ ಇದ್ದು, ಈಗ ತುಸು ಹೆಚ್ಚು ಮೇಕಪ್​ ಜೊತೆ ಕಾಣಿಸಿಕೊಂಡಿದ್ದಾರೆ. ಕಾಸ್ಟ್ಯೂಮ್​ನಲ್ಲೂ ಬದಲಾವಣೆ ಮಾಡಲಾಗಿದೆ.

ಈ ಮಹಾತಿರುವು ಬ್ರಹ್ಮಗಂಟು ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದು, ದೀಪಾ ಲುಕ್​ಗೆ ವೀಕ್ಷಕರು ಭಾರೀ ಮೆಚ್ಚುಗೆ ವ್ಯಕ್ತಪಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

shravani subramanya serial serial actor Ninagagi serial Brahmagantu Serial
Advertisment
Advertisment
Advertisment