ಮತ್ತೆ ಬರ್ತಿದ್ದಾರೆ ಬ್ರೋ ಗೌಡ.. ತೆರೆ ಮೇಲೆ ಮಿಸ್ ಮಾಡ್ಕೊಂಡಿದ್ದ ಫ್ಯಾನ್ಸ್​ಗೆ ಗುಡ್​ನ್ಯೂಸ್​..!

ಅಮ್ಮ ಮತ್ತು ಹೆಂಡತಿಯ ನಡುವೆ ಸ್ಯಾಂಡ್‌ವಿಚ್‌ ಆಗಿ ಜೀವನನೇ ಬೇಡ ಅನ್ನೋ ಕ್ಯಾರೆಕ್ಟರ್‌ನಲ್ಲಿ ಮಿಂಚಿದ್ದ ಬ್ರೌ ಗೌಡ ಅಲಿಯಾಸ್ ಶಮಂತ್‌ ಈಗ ಏನ್ಮಾಡ್ತಿದ್ದಾರೆ ಗೊತ್ತಾ..?

author-image
Ganesh Kerekuli
bro gowda
Advertisment

ಬ್ರೋ ಗೌಡ  ಗೊತ್ತಲ್ವಾ? ಇವ್ರ ನಿಜ ನಾಮಧೇಯ ಶಮಂತ್‌. ಇವ್ರ ಬಿಡಿ ಸಖತ್ತಾಗಿ ಮಿಂಚಿ ಬಿಟ್ಟರು. ಬಿಗ್‌ಬಾಸ್ ಆದ್ಮೇಲೆ ಲಕ್ಷ್ಮೀ ಬಾರಮ್ಮಾ ಸೀರಿಯಲ್ ಮೂಲಕ ಸಖತ್ ಪಾಪ್ಯುಲರ್ ಆಗ್ಬಿಟ್ರು. ಆ ಸೀರಿಯಲ್ ವೈಂಡಪ್ ಆದ್ಮೇಲೆ ಬ್ರೋ ಗೌಡ ಈಗ ಮತ್ತೆ ಕಲರ್ಸ್‌ ಕುಟುಂಬಕ್ಕೆ ಬರ್ತಿದ್ದಾರೆ. 

ಲಕ್ಷ್ಮೀ ಬಾರಮ್ಮ ಸೀರಿಯಲ್ ವೈಂಡಪ್ ಆದ್ಮೇಲೆ ತೆಲುಗು ಸೀರಿಯಲ್‌ನಲ್ಲಿ ಆ್ಯಕ್ಟಿಂಗ್ ಮಾಡಿದ್ದರು. ಆ ಧಾರವಾಹಿ ವೈಂಡಪ್ ಆಗೋ ಟೈಮ್‌ನಲ್ಲಿಯೇ ಒಂದು ಸಿನಿಮಾಗೇ ಕಮಿಟ್ ಆಗಿದ್ದರು. ಈಗ ನಮಗೆ ಸಿಕ್ಕಿರೋ ಮಾಹಿತಿ ಪ್ರಕಾರ ಶಮಂತ್‌ ಮತ್ತೆ ಕನ್ನಡ ಕಿರುತೆರೆಗೆ ಬರ್ತಿದ್ದಾರೆ. ಅದು ಕಲರ್ಸ್ ಚಾನಲ್‌ ಮೂಲಕವೇ.

ಶಮಂತ್‌ ಸದ್ಯ ಹೊಸ ಧಾರವಾಹಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದು ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿದೆ ಅನ್ನೋದೇ ಇಂಟರೆಸ್ಟಿಂಗ್ ವಿಚಾರ. ಈ ಸೀರಿಯಲ್‌ನ ಹೀರೋಯಿನ್ ಯಾರು? ಕಥೆ ಏನು? ಪ್ರೊಡಕ್ಷನ್ ಯಾರು? ಯಾಱರು ಆ್ಯಕ್ಟಿಂಗ್ ಮಾಡ್ತಿದ್ದಾರೆ? ಯಾವಾಗ ಲಾಂಚ್ ಆಗ್ಲಿದೆ ಅನ್ನೋದು ಶೀಘ್ರದಲ್ಲೇ ರಿವೀಲ್ ಆಗಲಿದೆ. 

ಇದನ್ನೂ ಓದಿ: ಆಸ್ತಿಗಳ ಎ ಖಾತಾ ಎಂದರೇನು? ಬಿ ಖಾತಾ ಎಂದರೇನು? ಖಾತಾ ಪಡೆಯುವ ಪ್ರಕ್ರಿಯೆ ಹೇಗಿರುತ್ತೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Shamant Bro Gowda
Advertisment