7 ವಾರಗಳ ಕಾಲ ಬಿಗ್​ಬಾಸ್ ಮನೆಯಲ್ಲಿ ವೀಕ್ಷಕರ ರಂಜಿಸುವಲ್ಲಿ ಯಶಸ್ವಿಯಾಗಿದ್ದ ಕಾಕ್ರೋಚ್ ಸುಧೀ, ಆಟ ಮುಗಿಸಿ ಹೊರ ಬಂದಿದ್ದಾರೆ. ಬೆನ್ನಲ್ಲೇ ನ್ಯೂಸ್​ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಬಿಗ್​ಬಾಸ್ ಮನೆಯ ಅನುಭವಗಳನ್ನು ಹಂಚಿಕೊಂಡರು.
ಮಾಳು ಅವರಿಂದ ನೀವು ಆಚೆ ಬಂದ್ರಾ..?
ಈ ಪ್ರಶ್ನೆಗೆ ಸುಧಿ ಅವರ ಉತ್ತರ ಹೀಗಿತ್ತು: ಆ ರೀತಿ ಏನೂ ಇಲ್ಲ. ಪಾಪ! ಅದು ಆಟ. ಅಲ್ಲಿನ ಪರಿಸ್ಥಿತಿ, ಮನಸ್ಥಿತಿ ಹಾಗೆ ಮಾಡಿರುತ್ತದೆ. ನಾನು ಯಾವಾಗಲೂ ಏನು ಹೇಳುತ್ತಿದ್ದೆ ಅಂದರೆ, ನೀವು ಯಾವಾಗಲೂ ಕಾಣುತ್ತಿಲ್ಲ. ಕಾಣುತ್ತಿಲ್ಲ ಅಂತಿದ್ದೆ. ಅಂದರೆ ಅವರು ಮಾತನ್ನಾಡೋದು ಸ್ವಲ್ಪ ಕಡಿಮೆ. ಅದೇ ಕಾರಣಕ್ಕೆ ನಾನು ಆತನಿಗೆ ಬೇಜಾರು ಆಗುವ ರೀತಿಯಲ್ಲಿ ಮಾತನ್ನಾಡುತ್ತಿರಲಿಲ್ಲ. ಅವರು ಸುಧಾರಿಸಿಕೊಳ್ಳಲಿ ಎಂದು ಹೇಳ್ತಿದೆ. ಆತ ತುಂಬಾ ಎಮೋಷನಲ್ ಹುಡುಗ. ನಾನು ಹೊರಗಡೆ ಬಂದ ಮೇಲೆ ನನ್ನಿಂದ ಹೀಗೆ ಆಗೊಯ್ತು ಅಂತ ಕಣ್ಣೀರು ಇಟ್ಟಿರಬಹುದು. ಆದರೆ ನಾನು ಹೊರಗಡೆ ಬಂದಿರೋದು ಖಂಡಿತ ಆತನಿಂದ ಅಲ್ಲ ಎಂದಿದ್ದಾರೆ.
ಇದನ್ನೂ ಓದಿ: ಮತ್ತೆ ಅಶ್ವಿನಿ ಕೆಣಕಿದ ಗಿಲ್ಲಿ.. ಮುಂದೆ ಏನಾಯ್ತು..? VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us