/newsfirstlive-kannada/media/media_files/2025/11/17/gilli-nata-1-2025-11-17-10-29-49.jpg)
ಬಿಗ್​ಬಾಸ್ (Bigg Boss)​ ಮನೆಯಲ್ಲಿ ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವೆ ಮತ್ತೊಮ್ಮೆ ಜಗಳವಾಗಿದೆ. ಬಿಗ್​ಬಾಸ್ ನೀಡಿದ ಶಿಕ್ಷೆಯಲ್ಲಿ ಅಶ್ವಿನಿ ಗೌಡರನ್ನು ಮತ್ತಷ್ಟು ಉರಿಸಲು ಮುಂದಾಗಿದ್ದ ಗಿಲ್ಲಿ ಮೇಲೆ ಆಕ್ರೋಶ ಹೊರಹಾಕಿದ್ದಾರೆ.
ಆಗಿದ್ದೇನು..?
ಲೀವಿಂಗ್ ಏರಿಯಾದಲ್ಲಿ ಬಿಗ್​ಬಾಸ್​ ಎಲ್ಲಾ ಸ್ಪರ್ಧಿಗಳನ್ನು ಕರೆದು, ಪದೇ ಪದೆ ಬಿಗ್​ಬಾಸ್ ಮನೆಯಲ್ಲಿ ಮೂಲ ನಿಯಮಗಳನ್ನು ಮುರಿಯೋರು ಯಾರು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಬಹುತೇಕ ಸ್ಪರ್ಧಿಗಳು ಅಶ್ವಿನಿ ಗೌಡರ ಹೆಸರು ತೆಗೆದುಕೊಂಡಿದ್ದಾರೆ.
ಅದಕ್ಕೆ ಕಾರಣ ನೀಡಿರುವ ಗಿಲ್ಲಿ, ಬಿಗ್​​ಬಾಸ್ ನನ್ನ ಆಯ್ಕೆ ಕೂಡ ಅಶ್ವಿನಿ ಅವರು. ಅವರಿಗೆ ನಾಮಿನೇಷನ್​ ಮೇಲೂ ಸಿರೀಯಸ್​ನೆಸ್ ಇಲ್ಲ. ರೂಲ್ಸ್ ಮೇಲೂ ಸಿರೀಯಸ್​ನೆಸ್ ಇಲ್ಲ. ಬಿಗ್​ಬಾಸ್ ಅವರಿಗೆ ಕಠಿಣವಾದ ಶಿಕ್ಷೆ ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: BBK12 ಗಿಲ್ಲಿ ಕಿಚ್ಚನ ಇಮಿಟೇಷನ್‌ಗೆ ಎಷ್ಟು ಮಾರ್ಕ್ಸ್?
ಅದರಂತೆ ಬಿಗ್​ಬಾಸ್ ಅಶ್ವಿನಿ ಗೌಡಗೆ ಶಿಕ್ಷೆ ನೀಡಿದ್ದಾರೆ. ಎಲ್ಲಾ ಸ್ಪರ್ಧಿಗಳ ಮುಂದೆ ಹೋಗಿ ಪ್ರತ್ಯೇಕವಾಗಿ ಬಸ್ಕಿ ಹೊಡೆಯುವ ಶಿಕ್ಷೆ ಅದಾಗಿರುತ್ತದೆ. ಅಂತೆಯೇ ಗಾರ್ಡನ್ ಏರಿಯಾದಲ್ಲಿ ಗಿಲ್ಲಿ ಚೇರ್ ಮೇಲೆ ಕೂತಿದ್ದಾಗ ಅಶ್ವಿನಿ ಗೌಡ ಬಸ್ಕಿ ಹೊಡೆಯಲು ಬರುತ್ತಾರೆ. ಆಗ ಗಿಲ್ಲಿ, ಅಶ್ವಿನಿಯನ್ನು ಉರಿಸಲು ಕಾಲ್ಮೇಲೆ ಕಾಲು ಹಾಕಿ ಪೋಸ್ ನೀಡುತ್ತಿರುತ್ತಾರೆ.
ಅದಕ್ಕೆ ಕೋಪಿಸಿಕೊಂಡ ಅಶ್ವಿನಿ, ಇಳ್ಸು ಕಾಲು. ನೀನು ತೀರಾ ಓವರ್ ಆಗಿ ಆಡಲು ಹೋಗಬೇಡ. ಅದಕ್ಕೆ ನಾನು ಹೆಂಗಾದರೂ ಕುಳಿತುಕೊಳ್ಳಬಹುದು ಎಂದು ಗಿಲ್ಲಿ ಡೈಲಾಗ್ ಹೊಡೆದಿದ್ದಾರೆ. ಆಗ ಮತ್ತಷ್ಟು ಸಿಡಿಯುವ ಅಶ್ವಿನಿ, ನಿನ್ನ ದೌಲು, ಧಿಮಿಕಾ ನಿನ್ನ ಹತ್ತಿರವೇ ಇಟ್ಕೋ. ನನ್ನ ಹತ್ತಿರ ಬೇಡ ಎಂದು ಕೈ ತೋರಿಸಿ ಹೇಳಿದ್ದಾರೆ. ಇಬ್ಬರ ನಡುವಿನ ಸಂಭಾಷಣೆ ಇಂದು ರಾತ್ರಿ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.
ಇದನ್ನೂ ಓದಿ: ಬಿಗ್​ಬಾಸ್ ಆಟ ಮುಗಿಸಿ ಹೊರ ಬಂದ ಕಾಕ್ರೋಚ್ ಸುಧೀ..!
https://www.instagram.com/reel/DRJAyd0gZcX/?igsh=MWRzZDAwbmppcGFu
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us