ವಿಶಿಷ್ಟ ರೀತಿಯಲ್ಲಿ ಶಿಕ್ಷಕ ದಿನಾಚರಣೆಗೆ ವಿಶ್ ಮಾಡಿದ ಕಲರ್ಸ್ ಕನ್ನಡ.. ವೀಕ್ಷಕರಿಗೆ ಏನ್ ಹೇಳಿದೆ?

ವಿದ್ಯಾರ್ಥಿಗಳ ಜೀವನದಲ್ಲಿ ಹೇಗೆ ಒಬ್ಬ ಶಿಕ್ಷಕ ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ಮಾಡಿ, ಕೈ ಹಿಡಿದು ನಡೆಸುತ್ತಾರೋ, ಅದೇ ರೀತಿಯಲ್ಲಿ ವೀಕ್ಷಕರು ಕಲರ್ಸ್ ಕನ್ನಡವನ್ನ ಕೈ ಹಿಡಿದು ನಡೆಸುತ್ತ ತಮ್ಮ ಪ್ರೀತಿ ಕಾಳಜಿಯನ್ನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದೆ.

author-image
Bhimappa
colors_kannada
Advertisment

ಬೆಂಗಳೂರು: ಕಲರ್ಸ್ ಕನ್ನಡ ಸಾಮಾಜಿಕ ಜಾಲತಾಣದಲ್ಲಿ ತನ್ನ ವೀಕ್ಷಕರಿಗೆ ವಿಶಿಷ್ಟ ರೀತಿಯಲ್ಲಿ ಶಿಕ್ಷಕ ದಿನಾಚರಣೆಯ ವಿಶ್ ಮಾಡಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಹೇಗೆ ಒಬ್ಬ ಶಿಕ್ಷಕ ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ಮಾಡಿ, ಕೈ ಹಿಡಿದು ನಡೆಸುತ್ತಾರೋ, ಅದೇ ರೀತಿಯಲ್ಲಿ ವೀಕ್ಷಕರು ಕಲರ್ಸ್ ಕನ್ನಡವನ್ನ ಕೈ ಹಿಡಿದು ನಡೆಸುತ್ತ ತಮ್ಮ ಪ್ರೀತಿ ಕಾಳಜಿಯನ್ನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದೆ. 

ಕಲರ್ಸ್ ಕನ್ನಡದ ಶೋಗಳು, ಧಾರಾವಾಹಿಗಳ ಕೆಲವೊಂದು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಮಾಡಿದಾಗ ವೀಕ್ಷಕರು ಕಾಮೆಂಟ್​ ಮಾಡುತ್ತಾರೆ. ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನ ಕೊಟ್ಟು, ಕಮೆಂಟ್‌ಗಳ ಮೂಲಕ ಮಾರ್ಗದರ್ಶನ ಮಾಡುತ್ತಿರುವ ಕನ್ನಡಿಗರ ವಿಶಾಲ ಹೃದಯವನ್ನ ಪ್ರತಿ ದಿನದಂತೆ ಶಿಕ್ಷಕ ದಿನಾಚರಣೆಯಂದೂ ವಿಶೇಷವಾಗಿ ಕಲರ್ಸ್​ ಕನ್ನಡ  ನೆನಪಿಸಿಕೊಂಡಿದೆ. 

ಇದನ್ನೂ ಓದಿ:2026 IPL ಮ್ಯಾಚ್ ನೋಡುವವರಿಗೆ ಬಿಗ್ ಶಾಕ್.. ಟಿಕೆಟ್​ಗಳ ಮೇಲೆ ಭಾರೀ ಜಿಎಸ್​ಟಿ!

colors_kannada_1

ನಮ್ಮ ವೀಕ್ಷಕರೇ ನಮ್ಮ ಶಿಕ್ಷಕರು ಎನ್ನುವುದರ ಜೊತೆಗೆ, ಪಾಠದಂತಿರುವ ಕೆಲವು ಉತ್ತಮ ಕಮೆಂಟ್‌ಗಳನ್ನ ಆಯಾ ಧಾರಾವಾಹಿಯ ಜೊತೆಗೆ ಸೇರಿಸಿ ವಾಹಿನಿ ಪೋಸ್ಟ್ ಮಾಡಿದೆ. ವೀಕ್ಷಕರು ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಿಗೆ ಕತೆಗಳ ಕುರಿತು, ಪಾತ್ರಗಳ ಕುರಿತು ಕೊಟ್ಟಿರುವ ಸಲಹೆಗಳನ್ನ, ಮಾಡಿರುವ ಕಮೆಂಟ್‌ಗಳನ್ನ ಸಕಾರಾತ್ಮಕವಾಗಿ ಕಲರ್ಸ್​ ಕನ್ನಡ ಪರಿಗಣಿಸಿ ಎತ್ತಿಹಿಡಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Kannada News
Advertisment