ಮನೆಗೆ ಬಂದಾಯ್ತು ‘ಪವಿತ್ರ ಬಂಧನ’.. ಹೇಗಿದೆ ಸೂರಜ್ ಅಭಿನಯದ ಧಾರಾವಾಹಿ..?

ಬಿಗ್‌ಬಾಸ್‌ನ ಹ್ಯಾಂಡ್ಸಮ್ ಹಂಕ್‌ ಸೂರಜ್‌ ಸಿಂಗ್ ಅಭಿನಯದ ‘ಪವಿತ್ರ ಬಂಧನ’ ಲಾಂಚ್ ಆಗಿದೆ. ಸೀರಿಯಲ್‌ನ ಮೊದಲ ದೃಶ್ಯವೇ ನಯನ ಮನೋಹವರಾದ ರಾಮನಗರದ ಡ್ರೋನ್ ವಿಷ್ಯುವಲ್. ಅಂದದ ರಾಮನಗರವನ್ನ ಚೆಂದವಾಗಿ ತೋರಿಸಿದಷ್ಟೆ ಅಲ್ಲದೇ, ಪವಿತ್ರಾಳ ಬ್ಯಾಕ್‌ಗ್ರೌಂಡ್ ವಾಯ್ಸ್‌ನಿಂದ ಈ ಊರಿನ ಹಿರಿಮೆಯನ್ನ ಹೊಗಳಲಾಗಿದೆ.

author-image
Ganesh Kerekuli
Suraj singh
Advertisment

ಬಿಗ್‌ಬಾಸ್‌ನ ಹ್ಯಾಂಡ್ಸಮ್ ಹಂಕ್‌ ಸೂರಜ್‌ ಸಿಂಗ್ ಅಭಿನಯದ ‘ಪವಿತ್ರ ಬಂಧನ’ ಲಾಂಚ್ ಆಗಿದೆ. ಸೀರಿಯಲ್‌ನ ಮೊದಲ ದೃಶ್ಯವೇ ನಯನ ಮನೋಹವರಾದ ರಾಮನಗರದ ಡ್ರೋನ್ ವಿಷ್ಯುವಲ್. ಅಂದದ ರಾಮನಗರವನ್ನ ಚೆಂದವಾಗಿ ತೋರಿಸಿದಷ್ಟೆ ಅಲ್ಲದೇ, ಪವಿತ್ರಾಳ ಬ್ಯಾಕ್‌ಗ್ರೌಂಡ್ ವಾಯ್ಸ್‌ನಿಂದ ಈ ಊರಿನ ಹಿರಿಮೆಯನ್ನ ಹೊಗಳಲಾಗಿದೆ.

ಹಾಗೆಯೇ ಪವಿತ್ರಾ ತನ್ನ ಕುಟುಂಬವನ್ನ ಪರಿಚಯ ಮಾಡಿಕೊಡ್ತಾಳೆ. ತಂದೆ, ಸಖತ್ ಎನರ್ಜೆಟಿಕ್‌ ತಾತ, ಪ್ರೀತಿಯ ತಮ್ಮ ಹೀಗೇ. ನಂತರ ಎಂಟ್ರಿಯಾಗೋದ ಪವಿತ್ರಾ. ಅದು ಸಖತ್ ಸ್ವಾಗ್‌ ಆಗಿ. ಬಾಳೆಗೊನೆ ಮಾರಾಟ ಮಾಡುವ ಪವಿತ್ರಾ ನಂತರ ತನ್ನ ಪ್ರೀತಿಯ ಕಥೆಯನ್ನ ಹೇಳ್ತಾಳೆ. ತಮ್ಮ ಕಾಲೇಜಿನ ಸೀನಿಯರ್‌ನೊಂದಿಗೆ ಆಗಿರುವ ಪ್ರೀತಿಯನ್ನ ಪ್ರೀತಿಯಿಂದಲೇ ಎಕ್ಸ್‌ಪ್ಲೈನ್ ಮಾಡ್ತಾಳೆ. ಸೀನಿಯರ್‌ ಹೇಳಿರೋದೆಲ್ಲಾ ಸುಳ್ಳು ಅನ್ನೋದು ಈಸಿಯಾಗಿ ಗೊತ್ತಾಗುತ್ತೆ.

ಇದನ್ನೂ ಓದಿ: ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 3.80 ಲಕ್ಷ ರೂಪಾಯಿಗೆ ಏರಿಕೆ, ಚಿನ್ನದ ಬೆಲೆ 10 ಗ್ರಾಂಗೆ 1.65 ಲಕ್ಷ ರೂಪಾಯಿಗೆ ಏರಿಕೆ!

Suraj Singh (4)

ಆ ನಂತರ ಪರಿಚಯವಾಗೋದೇ ದೇಶ್‌ಮುಖ್‌ ಫ್ಯಾಮಿಲಿಯ ಪರಿಚಯ. ಮೊದಲ ಎಪಿಸೋಡ್‌ನ ಬಿಗ್‌ಬಾಸ್ ಸೂರಜ್‌ನ ಎಂಟ್ರಿ ಇಲ್ಲವೇ ಇಲ್ಲ. ಎರಡನೇ ಎಪಿಸೋಡ್‌ವರೆಗೂ ಆ ಕುತೂಹಲವನ್ನ ಕಾಯ್ದುಕೊಂಡು ಬರಲಾಗಿದೆ. ಓವರ್ ಆಲ್ ಆಗಿ ನೋಡೋದಾದ್ರೆ, ಈ ಸೀರಿಯಲ್ ಪ್ರಾಮಿಸಿಂಗ್ ಆಗಿದೆ. ಕಥೆಯಲ್ಲಿ ಸತ್ವವಿದೆ. 

ಇದನ್ನೂ ಓದಿ: ಸಂಜು ಆಟದ ಮೇಲೆ ಅಸಮಾಧಾನ.. ಇವತ್ತಿನ ಪ್ಲೇಯಿಂಗ್ 11 ಹೇಗಿರುತ್ತೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Pavitra Bandhana, Suraj Singh
Advertisment