ಸಂಜು ಆಟದ ಮೇಲೆ ಅಸಮಾಧಾನ.. ಇವತ್ತಿನ ಪ್ಲೇಯಿಂಗ್ 11 ಹೇಗಿರುತ್ತೆ..?

ನಾಗ್ಪುರ, ರಾಯ್ಪುರ, ಗುವಾಹಟಿಯಲ್ಲಿ ಸೂಪರ್ ಡೂಪರ್ ಪರ್ಫಾಮೆನ್ಸ್ ನೀಡಿರುವ ಟೀಮ್ ಇಂಡಿಯಾ, ವೈಝಾಗ್​ನಲ್ಲೂ ವಿಜಯೋತ್ಸವ ಆಚರಿಸುವ ವಿಶ್ವಾಸದಲ್ಲಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್. ಸ್ಟ್ರಾಂಗ್ ಆಗಿರುವ ಸೂರ್ಯಕುಮಾರ್ ಯಾದವ್ ಪಡೆ, T20 ಕ್ರಿಕೆಟ್​​​ನಲ್ಲಿ ಡಾಮಿನೇಟ್ ಮಾಡುವ ಲೆಕ್ಕಾಚಾರದಲ್ಲಿದೆ.

author-image
Ganesh Kerekuli
Sanju Samson
Advertisment
  • ವೈಝಾಗ್​ನಲ್ಲೂ ಅಭಿಷೇಕ್ ಆರ್ಭಟ ಮುಂದುವರೆಯುತ್ತಾ..?
  • ಸ್ಯಾಮ್ಸನ್​​ ಫಾರ್ಮ್​​​ ಸಮಸ್ಯೆ, ಮ್ಯಾನೇಜ್ಮೆಂಟ್​ಗೆ ಟೆನ್ಶನ್
  • ಮಿಡಲ್ ಆರ್ಡರ್​ನಲ್ಲಿ ಕಿಶನ್, ಸೂರ್ಯ ಶೈನಿಂಗ್

ವಿಶಾಖಪಟ್ಟಣಂ T20 ಪಂದ್ಯಕ್ಕೆ ಕೌಂಟ್​ಡೌನ್ ಶುರುವಾಗಿದೆ. ಈಗಾಗಲೇ 5 ಪಂದ್ಯಗಳ ಸರಣಿಯಲ್ಲಿ 3-0 ಅಂತರದಿಂದ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ, ವೈಝಾಗ್​ನಲ್ಲೂ ಗೆಲುವಿನ ಲೀಡ್ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಸೂರ್ಯಕುಮಾರ್ ಯಾದವ್ ಪಡೆಯಲ್ಲಿ ಇನ್​ಫಾರ್ಮ್ ಪ್ಲೇಯರ್​ಗಳು ಆರ್ಭಟಿಸುತ್ತಿದ್ದಾರೆ. ಕಿವೀಸ್ ತಂಡಕ್ಕೆ ತ್ರಿಮೂರ್ತಿ T20 ಸ್ಪೆಷಲಿಸ್ಟ್​​ಗಳ ಎಂಟ್ರಿ ಆತ್ಮವಿಶ್ವಾಸ ಹೆಚ್ಚಿಸಿದೆ.

ಇದನ್ನೂ ಓದಿ: ಭಾರತದಲ್ಲಿ ಒಂದು ಸಾವಿರ ಕೋಟಿ ಗಳಿಸಿದ ಧುರಂಧರ್ ಹಿಂದಿ ಸಿನಿಮಾ: KGF ದಾಖಲೆ ಮುರಿದ ಧುರಂಧರ್‌

Suryakumar Yadav

ನಾಗ್ಪುರ, ರಾಯ್ಪುರ, ಗುವಾಹಟಿಯಲ್ಲಿ ಸೂಪರ್ ಡೂಪರ್ ಪರ್ಫಾಮೆನ್ಸ್ ನೀಡಿರುವ ಟೀಮ್ ಇಂಡಿಯಾ, ವೈಝಾಗ್​ನಲ್ಲೂ ವಿಜಯೋತ್ಸವ ಆಚರಿಸುವ ವಿಶ್ವಾಸದಲ್ಲಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್. ಮೂರೂ ಡಿಪಾರ್ಟ್​ಮೆಂಟ್​​ಗಳಲ್ಲಿ ಸ್ಟ್ರಾಂಗ್ ಆಗಿರುವ ಸೂರ್ಯಕುಮಾರ್ ಯಾದವ್ ಪಡೆ, T20 ಕ್ರಿಕೆಟ್​​​ನಲ್ಲಿ ಡಾಮಿನೇಟ್ ಮಾಡುವ ಲೆಕ್ಕಾಚಾರದಲ್ಲಿದೆ.  

ಅಭಿಷೇಕ್ ಆರ್ಭಟ ಮುಂದುವರೆಯುತ್ತಾ?

ಮೊದಲ ಮತ್ತು ಮೂರನೇ T20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ, ಎಕ್ಸ್ಟ್ರಾರ್ಡಿನರಿ ಬ್ಯಾಟಿಂಗ್ ನಡೆಸಿದ್ರು. ಎದುರಾಳಿಗಳನ್ನ ಮನಬಂದಂತೆ ದಂಡಿಸಿದ ಅಭಿಷೇಕ್, 2 ಅರ್ಧಶತಕ ಸಿಡಿಸಿ ಮಿಂಚಿದ್ರು. ವಿಶಾಖಪಟ್ಟಣಂನಲ್ಲೂ ಅಭಿಷೇಕ್, ಸ್ಪೋಟಿಸಲು ತುದಿಗಾಲಲ್ಲಿ ನಿಂತಿದ್ದಾರೆ. 

ಇದನ್ನೂ ಓದಿ: ‘ಕಿಂಗ್’ ಮೇನಿಯಾ ಮುಂದೆ ‘ಪ್ರಿನ್ಸ್​​​’ ಕ್ರೇಜ್​ ಠುಸ್.. ಗಿಲ್​​ಗೆ ಬಿಗ್ ಶಾಕ್ ಕೊಟ್ಟ ​ಫಾಲೋವರ್ಸ್..!

Abhishek Sharma
ಅಭಿಷೇಕ್ ಶರ್ಮಾ Photograph: (ಬಿಸಿಸಿಐ)

10, 6, 0.. ಇದು ಸರಣಿಯಲ್ಲಿ ಸಂಜು ಸ್ಯಾಮ್ಸನ್ ಸ್ಕೋರ್. ರನ್​​ಗಳಿಸಲು ಪರದಾಡ್ತಿರುವ ಸಂಜು, ಬ್ಯಾಡ್​​ ಫಾರ್ಮ್​​ಗೆ ಸಿಲುಕಿದ್ದಾರೆ. ಸದ್ಯ ರನ್​ಗಳಿಸೋಕೆ ಪರದಾಡ್ತಿರುವ ಸಂಜು, ಇಂದಿನ ಪಂದ್ಯದಲ್ಲಿ ಸ್ಥಾನ ಪಡೆಯೋದು ಅನುಮಾನ.! ಟೀಮ್ ಮ್ಯಾನೇಜ್ಮೆಂಟ್ ಸಹ, ಸಂಜು ಸ್ಲಾಟ್​ ಬಗ್ಗೆ ಡಿಸ್ಕಸ್ ನಡೆಸ್ತಿದೆ.

ಇಶಾನ್ ಕಿಶನ್, ಸೂರ್ಯ ಶೈನಿಂಗ್

ಇಶಾನ್ ಕಿಶನ್ ಮತ್ತು ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್, ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದೆ. ಇಬ್ಬರೂ ನಿರ್ಭೀತಿಯ ಬ್ಯಾಟಿಂಗ್ ನಡೆಸ್ತಿರೋದು, ಕಿವೀಸ್ ಕ್ಯಾಂಪ್​​ನಲ್ಲಿ ಆತಂಕ ಸೃಷ್ಠಿಸಿದೆ. ಇದೇ ಟೀಮ್ ಇಂಡಿಯಾ ಶಕ್ತಿ ಕೂಡ ಹೆಚ್ಚಿಸಿರೋದು.

ಕ್ಯಾಪ್ಟನ್ ರಿಲ್ಯಾಕ್ಸ್

ವರ್ಷದ ಬಳಿಕ T20 ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದ ಲೆಗ್​ಸ್ಪಿನ್ನರ್ ರವಿ ಬಿಷ್ನೊಯ್, ಗುವಾಹಟಿ ಪಂದ್ಯದಲ್ಲಿ ಸೂಪರ್ ಸ್ಪೆಲ್ ಮಾಡಿದ್ರು. 4 ಓವರ್ ಬೌಲರ್ ಮಾಡಿದ್ದ ಬಿಷ್ನೊಯ್, ಕೇವಲ 18 ರನ್​ ನೀಡಿ 2 ವಿಕೆಟ್ ಕಬಳಿಸಿದ್ರು. ಇದೇ ಸ್ಪೆಲ್, ಇಂದಿನ ಪಂದ್ಯದಲ್ಲೂ ನಿರೀಕ್ಷಿಸಲಾಗ್ತಿದೆ.

ಇದನ್ನೂ ಓದಿ:RCBಗೆ ಮೋಸ ಮಾಡಿದ ಎಲೀಸ್ ಪೆರ್ರಿ! ಪೆರ್ರಿ, ಪೆರ್ರಿ ಬೇರೆಡೆಗೆ ಪೇರಿ..!

team india

ಈಗಾಗಲೇ T20 ಸರಣಿ ಗೆದ್ದಿರುವ ಟೀಮ್ ಇಂಡಿಯಾ, ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದೆರೆಡು ಬದಲಾವಣೆ ಮಾಡೋ ಸಾಧ್ಯತೆ ಇದೆ. ಎಡಗೈ ಪೇಸರ್ ಆರ್ಷ್​ದೀಪ್ ಆಡೋ ಹನ್ನೊಂದಕ್ಕೆ ಡೈರೆಕ್ಟ್ ಎಂಟ್ರಿ ಕೊಟ್ರೆ, ಬೂಮ್ರಾ, ಕುಲ್​ದೀಪ್ ಅಥವಾ ಶಿವಂ ದುಬೆ ಮೂವರಲ್ಲಿ ಒಬ್ಬರು ತಂಡದಿಂದ ಹೊರ ಹೋಗಲಿದ್ದಾರೆ. 

ಸತತ ಮೂರು T20 ಪಂದ್ಯಗಳನ್ನ ಸೋತು ಸರಣಿ ಕೈಚೆಲ್ಲಿರುವ ನ್ಯೂಜಿಲೆಂಡ್ ತಂಡಕ್ಕೆ ಬಲ ತುಂಬಲು ತ್ರಿಮೂರ್ತಿ ಆಟಗಾರರು ಎಂಟ್ರಿ ಕೊಡ್ತಿದ್ದಾರೆ. ಫಿನ್ ಌಲೆನ್, ಜೇಮ್ಸ್ ನೀಶಮ್ ಮತ್ತು ಲಾಕಿ ಫರ್ಗುಸನ್, ವೈಝಾಗ್​ನಲ್ಲಿ ಕಿವೀಸ್ ತಂಡವನ್ನ ಸೇರಿಕೊಳ್ಳಲಿದ್ದಾರೆ. ಇವರ ಎಂಟ್ರಿ, ಕಿವೀಸ್ ಗೆಲುವಿನ ವಿಶ್ವಾಸ ಹೆಚ್ಚಿಸಿದೆ.

ಸರಣಿ ಗೆದ್ದರೂ ಟೀಮ್ ಇಂಡಿಯಾ ಈ ಪಂದ್ಯವನ್ನ ಲಘುವಾಗಿ ಪರಿಗಣಿಸೋದಿಲ್ಲ. T20 ವಿಶ್ವಕಪ್​​ಗೆ ಕೆಲವೇ ಕೆಲವು ದಿನಗಳು ಬಾಕಿ ಇರೋದ್ರಿಂದ, ಸೂರ್ಯಕುಮಾರ್ ಯಾದವ್ ಪಡೆಗೆ, ಪ್ರತಿ ಪಂದ್ಯವೂ ಅತಿ ಮುಖ್ಯವೇ.

ಇದನ್ನೂ ಓದಿ:ಸಂಕಷ್ಟಕ್ಕೆ ಸಿಲುಕಿದ ಜಡೇಜಾ ಕರಿಯರ್.. ಮತ್ತೊಬ್ಬ ಸ್ಟಾರ್​ಗೆ ಒಲಿದ ಅದೃಷ್ಟ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Cricket news in Kannada India vs NewZealand IND vs NZ
Advertisment