/newsfirstlive-kannada/media/post_attachments/wp-content/uploads/2025/02/JADEJA.jpg)
ರವಿಂದ್ರ ಜಡೇಜಾ ವಿಶ್ವ ಕ್ರಿಕೆಟ್​ನ ಫೈನೆಸ್ಟ್​​ ಆಲ್​​ರೌಂಡರ್​! ಟೀಮ್​ ಇಂಡಿಯಾದ ಲೆಜೆಂಡ್​.. ಇದ್ರಲ್ಲಿ ಯಾವುದೇ ಡೌಟೇ ಬೇಡ. ಈ ಲೆಜೆಂಡರಿ ಕ್ರಿಕೆಟಿಗನ ಒನ್​ ಡೇ ಕರಿಯರ್​ ಈಗ ಸಂಕಷ್ಟಕ್ಕೆ ಸಿಲುಕಿದೆ. ನಿಮಗೆ ಗೊತ್ತಾ? ಇಂದೋರ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಆಡಿದ 3ನೇ ಏಕದಿನ ಪಂದ್ಯವೇ ಜಡೇಜಾ ಒನ್​ ಡೇ ಕರಿಯರ್​ನ ಕೊನೆ ಪಂದ್ಯವಂತೆ. ಜಡೇಜಾ ವೈಟ್​ಬಾಲ್​ ಕರಿಯರ್​ ಖತಂ ಆಯ್ತಾ?
ಮುಂದಿನ 20 ತಿಂಗಳ ಅಂತರದಲ್ಲಿ ನಡೆಯೋ ಮಹತ್ವದ ಟೂರ್ನಿಗೆ ಈಗಿನಿಂದಲೇ ಟೀಮ್​ ಇಂಡಿಯಾ ಸಿದ್ಧತೆ ನಡೀತಿದೆ. ಸರಣಿಯಿಂದ ಸರಣಿಗೆ ಟೀಮ್​ ಮ್ಯಾನೇಜ್​ಮೆಂಟ್​, ಸೆಲೆಕ್ಟರ್ಸ್​ ವಿಶ್ವ ಸಮರಕ್ಕೆ ಭಾರತದ ಕೋರ್​ ಟೀಮ್​ನ ಫೈನಲ್​ ಲಿಸ್ಟ್​ ರೆಡಿ ಮಾಡ್ತಿದ್ದಾರೆ. ನ್ಯೂಜಿಲೆಂಡ್​ ಸರಣಿ ಬಳಿಕ ಈ ಕೋರ್​ ಟೀಮ್​ನ ಫೈನಲ್​ ಲಿಸ್ಟ್​ನಲ್ಲಿ ಮಹತ್ವದ ಬದಲಾವಣೆಯಾಗಿದೆ. ಆಲ್​​ರೌಂಡರ್​​ ರವೀಂದ್ರ ಜಡೇಜಾ ಒನ್​ ಡೇ ಕರಿಯರ್​​ಗೆ​ ಕೊನೆ ಮೊಳೆ ಬಿದ್ದಂತೆ ಕಾಣ್ತಿದೆ.
ಇದನ್ನೂ ಓದಿ:ಒತ್ತಾಯ ಮಾಡಿ ಕೊಹ್ಲಿಯಿಂದ ರಾಜೀನಾಮೆ ಪಡೆದ್ರು -ಮಾಜಿ ಕ್ರಿಕೆಟಿಗ ಆಕ್ರೋಶ..!
/filters:format(webp)/newsfirstlive-kannada/media/post_attachments/wp-content/uploads/2023/09/Jadeja-4.jpg)
ರವೀಂದ್ರ ಜಡೇಜಾ ಫ್ಲಾಪ್​
ರವಿಂದ್ರ ಜಡೇಜಾ ಟೀಮ್​ ಇಂಡಿಯಾದ ಏಕದಿನ ಸೆಟಪ್​ನಿಂದ ಹೊರ ಬೀಳೋ ಭೀತಿಗೆ ಸಿಲುಕಿದ್ದಾರೆ. ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿ ಜಡೇಜಾ ಕರಿಯರ್​ನ ಮಹತ್ವದ ಸರಣಿಯಾಗಿತ್ತು. ಕರಿಯರ್​​ನ ಸೇವ್​ ಮಾಡಿಕೊಳ್ಳೋಕ್ಕೆ ಸಿಕ್ಕಿದ್ದ ಗೋಲ್ಡನ್​ ಆಪರ್ಚುನಿಟಿಯಾಗಿತ್ತು. ಆದ್ರೆ, ಸಿಕ್ಕ ಅವಕಾಶವನ್ನ ಜಡೇಜಾ ಕೈಚೆಲ್ಲಿದ್ರು. ಫ್ಲಾಪ್​ ಶೋ ನೀಡಿ ಜಡ್ಡು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಂದೋರ್​ನಲ್ಲಿ ನಡೆದ ನ್ಯೂಜಿಲೆಂಡ್​ ವಿರುದ್ಧದ ಕೊನೆಯ ಏಕದಿನ ಪಂದ್ಯವೇ ಜಡೇಜಾ ಕರಿಯರ್​ನ ಕೊನೆಯ ಒನ್​ ಡೇ ಮ್ಯಾಚ್​ ಅನ್ನೋ ಟಾಕ್​ ಕ್ರಿಕೆಟ್​ ವಲಯದಲ್ಲಿ ಶುರುವಾಗಿದೆ. ಯಾಕಂದ್ರೆ, ಕಿವೀಸ್​ ವಿರುದ್ಧದ ಸರಣಿಯಲ್ಲಿ ಜಡೇಜಾ ನೀಡಿದ ಹೀನಾಯ ಹಂಗಿದೆ. ಸರಣಿಯಲ್ಲಿ ಆಡಿದ 3 ಪಂದ್ಯಗಳಿಂದ ಒಂದೇ ಒಂದು ವಿಕೆಟ್​ ಕಬಳಿಸುವಲ್ಲಿ ವಿಫಲರಾದ ಜಡೇಜಾ, ಬ್ಯಾಟಿಂಗ್​ನಲ್ಲಿ ಗಳಿಸಿದ್ದು ಕೇವಲ 43 ರನ್​ ಮಾತ್ರ.! ಈ ವೈಫಲ್ಯ ಜಡ್ಡು ವಿಶ್ವಕಪ್​ ಕನಸಿಗೆ ಕೊಳ್ಳಿ ಇಟ್ಟಿದೆ.
2020ರ ಬಳಿಕ ಒಂದೇ ಒಂದು ಅರ್ಧಶತಕ ಬಂದಿಲ್ಲ
ಜಡೇಜಾ 2027ರ ಏಕದಿನ ವಿಶ್ವಕಪ್​ ಆಡಬೇಕು ಅನ್ನೋ ಮಹದಾಸೆಯನ್ನ ಹೊಂದಿದ್ದಾರೆ. ಅದಕ್ಕೆ ಮೊದಲನೇ ವಿಲನ್​ ವಯಸ್ಸು. 37 ವರ್ಷ ಗಡಿ ದಾಟಿರೋ ಜಡೇಜಾ ತಂಡಕ್ಕೆ ಬೇಕಾ ಅನ್ನೋ ಪ್ರಶ್ನೆ ಈಗಾಗಲೇ ಇದೆ. ಇದ್ರ ನಡುವೆ ಜಡೇಜಾ ಸತತ ವೈಫಲ್ಯ ಅನುಭವಿಸ್ತಿದ್ದಾರೆ. ನೀವು ನಂಬ್ತಿರೋ ಇಲ್ವೋ.. ಜಡೇಕಾ ಕೊನೆಯದಾಗಿ ಏಕದಿನ ಮಾದರಿಯಲ್ಲಿ ಅರ್ಧಶತಕದ ಗಡಿ ದಾಟಿದ್ದು 2020ರಲ್ಲಿ. ಆ ಬಳಿಕ ಆಡಿದ 29 ಇನ್ನಿಂಗ್ಸ್​ನಲ್ಲಿ ಒಂದು ಬಾರಿ ಕೂಡ ಅರ್ಧಶತಕದ ಗಡಿ ತಲುಪಿಯೂ ಇಲ್ಲ. ಇಷ್ಟೊಂದು ಹೀನಾಯ ಪ್ರದರ್ಶನ ನೀಡಿದ ಜಡೇಜಾ ತಂಡಕ್ಕೆ ನಿಜಕ್ಕೂ ಬೇಕಾ.? ಎಂಬ ಪ್ರಶ್ನೆ ಹುಟ್ಟದೆ ಇರುತ್ತಾ.?
ಇದನ್ನೂ ಓದಿ: ‘ಅಕ್ಷರ ಯೋಗಿ’ ಅಂಕೇಗೌಡ ಯಾರು..? KSRTC ನೌಕರನ ಅಕ್ಷರ ಪ್ರೇಮ ‘ಪದ್ಮಶ್ರೀ’ ಮಟ್ಟಕ್ಕೆ ಬೆಳೆದ ಅಪರೂಪದ ಕಥೆ..!
/filters:format(webp)/newsfirstlive-kannada/media/post_attachments/wp-content/uploads/2024/06/jadeja.jpg)
ಜಡೇಜಾ ಆಟ ಫುಲ್​ ಡಲ್​
2025ರಿಂದ ರವೀಂದ್ರ ಜಡೇಜಾ ಆಟವೇ ಬದಲಾಗಿದೆ. ಬ್ಯಾಟಿಂಗ್​ ಬೌಲಿಂಗ್​ ಎರಡರಲ್ಲೂ ಜಡೇಜಾ ರಿಧಮ್​ ಕಳೆದುಕೊಂಡಂತೆ ಕಾಣ್ತಿದ್ದಾರೆ. 2025ರ ಬಳಿಕ ಏಕದಿನ ಕ್ರಿಕೆಟ್​ನಲ್ಲಿ 9 ಇನ್ನಿಂಗ್ಸ್​ಗಳನ್ನಾಡಿರೋ ರವಿಂದ್ರ ಜಡೇಜಾ ಕೇವಲ 137 ರನ್​ಗಳಿಸಿದ್ದಾರೆ. 34.25ರ ಸರಾಸರಿಯಲ್ಲಿ ರನ್​ಗಳಿಸಿದ್ದು, ಒಂದೇ ಒಂದು ಅರ್ಧಶತಕವನ್ನೂ ಸಿಡಿಸಿಲ್ಲ. ಬೌಲಿಂಗ್​ನಲ್ಲಿ 12 ಇನ್ನಿಂಗ್ಸ್​ಗಳಿಂದ 103 ಓವರ್​ ಬೌಲಿಂಗ್​ ಮಾಡಿರೋ ಜಡೇಜಾ 501 ರನ್​ ಬಿಟ್ಟು ಕೊಟ್ಟಿದ್ದಾರೆ. ಕೇವಲ 12 ವಿಕೆಟ್​​ ಕಬಳಿಸಿದ್ದಾರಷ್ಟೇ.
ಅಕ್ಷರ್​ ಪಟೇಲ್​ಗೆ ಅದೃಷ್ಟ..!
ಕಳೆದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಜಡೇಜಾನ ಏಕದಿನ ತಂಡದಿಂದ ಡ್ರಾಪ್​ ಮಾಡಲಾಗಿತ್ತು. ಜಡ್ಡು ಬದಲು ಅಕ್ಷರ್​ ಪಟೇಲ್​ಗೆ ಸ್ಥಾನ ನೀಡಲಾಗಿತ್ತು. ಆದ್ರೆ, ಫೆಬ್ರವರಿಯಲ್ಲಿ ಆರಂಭವಾಗೋ ಟಿ20 ವಿಶ್ವಕಪ್​ ದೃಷ್ಟಿಯಿಂದ ಅಕ್ಷರ್​ಗೆ ರೆಸ್ಟ್​ ನೀಡಿ ಜಡೇಜಾಗೆ ಸೌತ್​ ಆಫ್ರಿಕಾ ಹಾಗೂ ನ್ಯೂಜಿಲೆಂಡ್​ ಸರಣಿಯಲ್ಲಿ ಸ್ಥಾನ ನೀಡಲಾಗಿದೆ. ಆದ್ರೆ, ಸಿಕ್ಕ ಅವಕಾಶದಲ್ಲಿ ಸೆಲೆಕ್ಟರ್ಸ್ & ಟೀಮ್​ ಮ್ಯಾನೇಜ್​ಮೆಂಟ್​ನ ಇಂಪ್ರೆಸ್​ ಮಾಡುವಲ್ಲಿ​​​ ಜಡೇಜಾ ಫೇಲ್​ ಆಗಿದ್ದಾರೆ. ಮುಂದಿನ ಏಕದಿನ ಸರಣಿ ನಡೆಯೋದು ಜುಲೈನಲ್ಲಿ. ಈ ವೇಳೆಗೆ ಜಡೇಜಾ ಸ್ಥಾನದಲ್ಲಿ ಅಕ್ಷರ್​ ಪಟೇಲ್​ ಕಾಣಿಸಿಕೊಂಡರೆ ಆಶ್ಚರ್ಯ ಪಡಬೇಕಿಲ್ಲ.
ಇದನ್ನೂ ಓದಿ:‘ಅಕ್ಷರ ಯೋಗಿ’ ಅಂಕೇಗೌಡ ಯಾರು..? KSRTC ನೌಕರನ ಅಕ್ಷರ ಪ್ರೇಮ ‘ಪದ್ಮಶ್ರೀ’ ಮಟ್ಟಕ್ಕೆ ಬೆಳೆದ ಅಪರೂಪದ ಕಥೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us