/newsfirstlive-kannada/media/media_files/2026/01/26/ellyse-perry-2026-01-26-10-53-19.jpg)
ತನ್ನ ಆಟ, ಮೈಮಾಟದಿಂದ ವುಮೆನ್ಸ್ ಪ್ರೀಮಿಯರ್​ ಲೀಗ್​ನ ಬ್ಯೂಟಿ ಕ್ವೀನ್ ಎನಿಸಿಕೊಂಡಿದ್ದ ಎಲೀಸ್ ಪೆರ್ರಿ ವಿರುದ್ಧ, ಇದೀಗ ಕ್ರಿಕೆಟ್ ಅಭಿಮಾನಿಗಳು ತೀವ್ರ ಆಕ್ರೋಶಗೊಂಡಿದ್ದಾರೆ. WPLನಲ್ಲಿ ಆಲ್​ರೌಂಡರ್ ಪೆರ್ರಿ ಆಟವನ್ನ ಕಣ್ತುಂಬಿಸಿಕೊಳ್ಳಲು ಫ್ಯಾನ್ಸ್ ಕಾತರದಿಂದ ಕಾಯ್ತಿದ್ರು. ಪೆರ್ರಿ, ಫ್ಯಾನ್ಸ್​ಗೆ ಭಾರೀ ನಿರಾಸೆ ಮೂಡಿಸಿ ಹಾರ್ಟ್ ಬ್ರೇಕ್ ಮಾಡಿದ್ದಾಳೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಆಲ್​ರೌಂಡರ್ ಎಲೀಸ್ ಪೆರ್ರಿ ಹೇಳಿದ ಒಂದೇ ಒಂದು ಸುಳ್ಳಿನಿಂದ ಕ್ರಿಕೆಟ್ ಅಭಿಮಾನಿಗಳ ಹೃದಯ ಛಿದ್ರ ಛಿದ್ರವಾಗಿದೆ. ಪ್ರಸಕ್ತ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಪೆರ್ರಿ, ಆರ್​ಸಿಬಿ ಪರ ಆಡಬೇಕಿತ್ತು. ಆದ್ರೆ ಡಬ್ಲ್ಯೂ.ಪಿ.ಎಲ್ ಮೇಲೆ ಭಾರೀ ನಿರಾಸಕ್ತಿ ತೋರಿದ ಆಸಿಸ್ ಆಲ್​ರೌಂಡರ್, ಭಾರತಕ್ಕೆ ಬರಲು ಹಿಂದೇಟು ಹಾಕಿದ್ದಾರೆ.
RCBಗೆ ಮಹಾ ಮೋಸ ಮಾಡಿದ್ರಾ ಪೆರ್ರಿ?
ಆಸಿಸ್ ಆಲ್​ರೌಂಡರ್ ಎಲೀಸ್ ಪೆರ್ರಿ ಮೇಲೆ, ಆರ್​ಸಿಬಿ ಫ್ರಾಂಚೈಸಿ ಭಾರೀ ನಂಬಿಕೆ ಇಟ್ಟುಕೊಂಡಿದೆ. ಹರಾಜಿಗೂ ಮುನ್ನ ಪೆರ್ರಿ, ಡಬ್ಲ್ಯೂ.ಪಿ.ಎಲ್.ಆಡೇ ಆಡ್ತಾರೆ ಅಂತ ವಿಶ್ವಾಸವನ್ನೂ ವ್ಯಕ್ತಪಡಿಸಿತ್ತು. ಹೀಗಾಗಿ ಪೆರ್ರಿಯನ್ನ ಆಕ್ಷನ್​​ಗೆ ಬಿಡದ ಫ್ರಾಂಚೈಸಿ ರೀಟೇನ್ ಮಾಡಿಕೊಂಡು ತನ್ನಲ್ಲೇ ಉಳಿಸಿಕೊಂಡಿತ್ತು. ಆದ್ರೀಗ ಪೆರ್ರಿ, ಆರ್​ಸಿಬಿ ಫ್ರಾಂಚೈಸಿಗೆ ಮಹಾ ಮೋಸ ಮಾಡಿರೋದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಸದ್ಯದಲ್ಲೇ ಭಾರತ- ಯೂರೋಪಿಯನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ : ಭಾರತದಲ್ಲಿ ಲಕ್ಷುರಿ ಕಾರ್ ಬೆಲೆ ಕಡಿತ
ಎಲೀಸ್ ಪೆರ್ರಿ, ಡಬ್ಲ್ಯೂ.ಪಿ.ಎಲ್ ಸೀಸನ್-4 ಆಡೋದಿಲ್ಲ ಅಂತ, ಯಾರೂ ಅಂದುಕೊಂಡಿರಲಿಲ್ಲ. ಬದಲಿಗೆ ಪೆರ್ರಿ ಆಟವನ್ನ ನೋಡಲು, ಲಕ್ಷಾಂತರ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ರು. ಆದ್ರೆ ಪೆರ್ರಿ, ಡಬ್ಲ್ಯೂ.ಪಿ.ಎಲ್ ಟೂರ್ನಿಗೂ ಮುನ್ನ, ಫ್ರಾಂಚೈಸಿ ಮತ್ತು ಅಭಿಮಾನಿಗಳಿಗೆ ಭಾರೀ ಶಾಕ್ ನೀಡಿದ್ರು. ವೈಯಕ್ತಿಕ ಕಾರಣದಿಂದ ನಾನು ಡಬ್ಲ್ಯೂಪಿಎಲ್ ಆಡಲು ಸಾಧ್ಯವಿಲ್ಲ ಅಂತ ಕಾರಣ ನೀಡಿದ್ರು.
ಪೆರ್ರಿ, ಡಬ್ಲ್ಯೂಪಿಎಲ್ ಬಿಟ್ಟು, ಆಸಿಸ್​ನ ಬಿಗ್​ಬ್ಯಾಷ್ ಟಿ-20 ಲೀಗ್, ನ್ಯೂಜಿಲೆಂಡ್​​ನ ವುಮೆನ್ಸ್​ ಸೂಪರ್ ಸ್ಮ್ಯಾಷ್ ಟಿ-20 ಲೀಗ್ ಮತ್ತು ವುಮೆನ್ಸ್ ನ್ಯಾಷನಲ್ ಕ್ರಿಕೆಟ್ ಲೀಗ್ ಆಡೋ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಆ ಮೂಲಕ ಆರ್​ಸಿಬಿ ಆಲ್​ರೌಂಡರ್ ಮುಖವಾಡ ಬಯಲಾದಂತಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಭಾರತೀಯರು ಮತ್ತು ಭಾರತೀಯ ಆಟಗಾರರನ್ನ ನಂಬೋದಿಲ್ಲ. ಆದ್ರೆ ವಿದೇಶಿ ಅಟಗಾರರನ್ನ ಆರ್​ಸಿಬಿ ಫ್ರಾಂಚೈಸಿ ಕಣ್ಣು ಮುಚ್ಚಿ ನಂಬುತ್ತದೆ. ಎಲೀಸ್ ಪೆರ್ರಿ ವಿಚಾರದಲ್ಲೂ ಆಗಿದ್ದು ಅದೇ ನೋಡಿ. ಹರಾಜಿಗೂ ಮುನ್ನ ಪೆರ್ರಿ, ಡಬ್ಲ್ಯೂಪಿಎಲ್​ ಸೀಸನ್​-4ಗೆ ಲಭ್ಯವಿರೋದಿಲ್ಲ ಅಂತ ಹೇಳಿದ್ರೂ, ಆರ್​ಸಿಬಿ ಫ್ರಾಂಚೈಸಿ ಪೆರ್ರಿಯನ್ನ ರೀಟೇನ್ ಮಾಡಿಕೊಂಡಿತ್ತು. 2 ಕೋಟಿ ಹಣವನ್ನೂ ಪೆರ್ರಿ ಅಕೌಂಟ್​​ಗೆ ಡೆಬಿಟ್ ಮಾಡಿತ್ತು. ಎಂತಹ ವಿಪರ್ಯಾಸ ಅಲ್ವಾ..?
ಇದನ್ನು ಓದಿ:PF ಖಾತೆ ಇರೋರಿಗೆ ಗುಡ್​ನ್ಯೂಸ್..? ಬಜೆಟ್​ನಲ್ಲಿ ಪ್ರಮುಖ ಘೋಷಣೆ ನಿರೀಕ್ಷೆ..!
ಆಲ್​ರೌಂಡರ್ ಎಲೀಸ್ ಪೆರ್ರಿ ಆಸ್ಟ್ರೇಲಿಯಾ ತಂಡದ ಪರ ಆಡುವಾಗ, ತನ್ನ ಆಟದಿಂದ ಮಾತ್ರ ಗಮನ ಸೆಳೆದಿದ್ರು. ಆದ್ರೆ ಪೆರ್ರಿ ಯಾವಾಗ ವುಮೆನ್ಸ್ ಪ್ರೀಮಿಯರ್ ಲೀಗ್​​ಗೆ ಕಾಲಿಟ್ರೋ, ಆಕೆಯ ನಸೀಬೇ ಬದಲಾಗಿಬಿಡ್ತು. ಅದ್ರಲ್ಲೂ ಆರ್​ಸಿಬಿ ಫ್ರಾಂಚೈಸಿ ಪರ ಆಡಿದ್ದು, ಪೆರ್ರಿಗೆ ಮತ್ತಷ್ಟು ನೇಮು, ಫೇಮು ತಂದುಕೊಟ್ಟಿತ್ತು. ಒಂದೇ ಮಾತಲ್ಲಿ ಹೇಳೋದಾದ್ರೆ, ಆರ್​ಸಿಬಿ ಮತ್ತು ಆರ್​ಸಿಬಿ ಅಭಿಮಾನಿಗಳಿಂದಲೇ ಪೆರ್ರಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು. ಆದ್ರೀಗ ಪೆರ್ರಿ, ತನ್ನನ್ನ ಬೆಳೆಸಿದ ಅಭಿಮಾನಿಗಳಿಗೇ ದ್ರೋಹ ಬಗೆದ್ರೆ ಹೇಗೆ.?
ಮುಂದಿನ ವರ್ಷ ಆಡ್ತಾರಾ?
ಸ್ಟಾರ್ ಆಲ್​ರೌಂಡರ್ ಎಲೀಸ್ ಪೆರ್ರಿ, ಡಬ್ಲ್ಯೂ.ಪಿ.ಎಲ್ ಸೀಸನ್-5 ಆಡ್ತಾರಾ ಆಡಲ್ವಾ ಅನ್ನೋದು, ಸದ್ಯ ಅಭಿಮಾನಿಗಳನ್ನ ಕಾಡ್ತಿರೋ ಪ್ರಶ್ನೆ. ಈಗಾಗಲೇ ಪೆರ್ರಿ ಬದಲಿಗೆ ಭಾರತದ ವೇಗಿ ಸಯಾಲಿ ಸತ್ಘೆರೆ ರೀಪ್ಲೇಸ್ ಮಾಡಿದ್ದಾಳೆ. ಸಯಾಲಿ ಅದ್ಭುತ ಪ್ರದರ್ಶನ ಕೂಡ ನೀಡುತ್ತಿದ್ದಾಳೆ. ಪೆರ್ರಿ ಮುಂದಿನ ವರ್ಷಕ್ಕೆ 36 ವರ್ಷಕ್ಕೆ ಕಾಲಿಡಲಿದ್ದಾರೆ. ಹಾಗಾಗಿ ಆರ್​ಸಿಬಿ ಮುಂದಿನ ಸೀಸನ್​ ಕೂಡ 25 ವರ್ಷದ ಸಯಾಲಿ ಸತ್ಘೆರೆಯನ್ನೇ ತಂಡದಲ್ಲಿ ಮುಂದುವರೆಸುವ ಸಾಧ್ಯತೆ ಇದೆ. ಇಂಜುರಿ, ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಪೆರ್ರಿ ಮುಂದಿನ ವರ್ಷ ಡಬ್ಲ್ಯೂ.ಪಿ.ಎಲ್​ಗೆ ಗುಡ್​ಬೈ ಹೇಳಿದ್ರೂ ಅಚ್ಚರಿ ಇಲ್ಲ.
ಎಲೀಸ್ ಪೆರ್ರಿ ಆರ್​ಸಿಬಿ ಪರ ಆಡದೇ ಇರೋದು ವೈಯಕ್ತಿಕ ವಿಚಾರನೇ. ಆದ್ರೆ ಆರ್​ಸಿಬಿ ಫ್ರಾಂಚೈಸಿಯಿಂದ ಕೋಟಿ ಕೋಟಿ ಹಣ ಪಡೆದು ಡಬ್ಲ್ಯೂ.ಪಿ.ಎಲ್ ಸ್ಕಿಪ್ ಮಾಡಿ, ಬೇರೆ ಲೀಗ್ ಆಡ್ತಿರೋದು ಎಷ್ಟು ಸರಿ..?
ಇದನ್ನು ಓದಿ: ನಾಳೆಯೂ ಬ್ಯಾಂಕ್ ಓಪನ್ ಇರಲ್ಲ.. ಸತತ 4 ದಿನಗಳ ಕಾಲ ಸೇವೆ ಸ್ಥಗಿತ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us