‘ಕಿಂಗ್’ ಮೇನಿಯಾ ಮುಂದೆ ‘ಪ್ರಿನ್ಸ್​​​’ ಕ್ರೇಜ್​ ಠುಸ್.. ಗಿಲ್​​ಗೆ ಬಿಗ್ ಶಾಕ್ ಕೊಟ್ಟ ​ಫಾಲೋವರ್ಸ್..!

ಕ್ರಿಕೆಟ್​ ಲೋಕದ ಕಿಂಗ್​ ಕೊಹ್ಲಿ ಪ್ರೈಮ್​ ಫಾರ್ಮ್​ನಲ್ಲಿ ಅಬ್ಬರಿಸ್ತಿದ್ದಾರೆ. ರಾಜನ ಅಬ್ಬರದ ಮುಂದೆ ಯುವರಾಜ​​ ಶುಭ್​ಮನ್​ ಗಿಲ್​ ಮೇನಿಯಾ ಕೊಚ್ಚಿ ಹೋಗಿದೆ. ನಾಯಕನಾದ ಬಳಿಕ ಹೊಸ ಹವಾ ಸೃಷ್ಟಿಸಿದ್ದ ಶುಭ್​​ಮನ್​ ಗಿಲ್​ ಈಗ ಫುಲ್​ ಡಲ್​ ಆಗಿದ್ದಾರೆ. ಗಿಲ್​ ಕ್ರೇಜ್​ ದಿನದಿಂದ ದಿನಕ್ಕೆ ಕಡಿಮೆಯಾಗ್ತಿದೆ.

author-image
Ganesh Kerekuli
Shubman Gill
Advertisment
  • ವಿರಾಟ್​​ ಕೊಹ್ಲಿ ವೀರಾವೇಷ.. ಶುಭ್​ಮನ್​​ ಡಲ್
  • ದಿನದಿಂದ ದಿನಕ್ಕೆ ಕಡಿಮೆಯಾಗ್ತಿದೆ ಗಿಲ್​ ಕ್ರೇಜ್​
  • ಶುಭ್​ಮನ್​​ ಬ್ರ್ಯಾಂಡ್​​ವ್ಯಾಲ್ಯೂ ಬಿದ್ದೋಗುತ್ತಾ..?

ಪಂಜಾಬ್​ ಪುತ್ತರ್ ಶುಭ್​​ಮನ್​ ಗಿಲ್ ಟೀಮ್​ ಇಂಡಿಯಾದ​ ನಾಯಕನ ಪಟ್ಟವೇರಿದ ಬೆನ್ನಲ್ಲೇ ಹೊಸ ಟ್ರೆಂಡ್​ ಸೃಷ್ಟಿಸಿದ್ರು. ಕೊಹ್ಲಿ, ಕೊಹ್ಲಿ ಅಂತಿದ್ದ ಫ್ಯಾನ್ಸ್​ ಇದೀಗ ಯುವರಾಜನ ಕಡೆಗೆ ಮುಖ ಮಾಡಿದ್ರು. ನಾಯಕನಾದ ಮೊದಲ ಸರಣಿಯಲ್ಲೇ ಸೆನ್ಸೇಷನ್​ ಕ್ರಿಯೇಟ್​ ಮಾಡಿದ್ದ ಪ್ರಿನ್ಸ್ ಶುಭ್​​ಮನ್​ ಗಿಲ್​, ಕಿಂಗ್​ ಕೊಹ್ಲಿ ಪಟ್ಟವನ್ನ ಆಕ್ರಮಿಸಿಕೊಳ್ತಾರೆ ಎಂದೇ ಕ್ರಿಕೆಟ್​ ಲೋಕ ಊಹಿಸಿತ್ತು. 

ಇನ್ಸ್​​ಸ್ಟಾದಲ್ಲಿ ಧೂಳ್.​.!

ಶುಭ್​ಮನ್​ ಗಿಲ್​ ಕೊಹ್ಲಿ ಪಟ್ಟವನ್ನ ಅಕ್ರಮಿಸಿಕೊಳ್ತಾರೆ ಎಂದು ಕ್ರಿಕೆಟ್​ ಪಂಡಿತರು ಅಭಿಪ್ರಾಯ ಪಟ್ಟಿದ್ದು ಈ ಕಾರಣಕ್ಕೇ ನೋಡಿ. ಅಕ್ಟೋಬರ್​ 4.. ಶುಭ್​ಮನ್​ ಗಿಲ್​ ಜೀವನದ ಅವಿಸ್ಮರಣೀಯ ದಿನ. ಟೀಮ್​ ಇಂಡಿಯಾ ಪರ ಒಂದು ಮ್ಯಾಚ್​ ಆಡಬೇಕು ಎಂದುಕೊಂಡಿದ್ದ ಕನಸು ಕಂಡಿದ್ದ ಗಿಲ್​, ನಾಯಕತ್ವದ ಸಿಂಹಾಸನವೇರಿದ ದಿನ ಅದು. ಟೆಸ್ಟ್​ ಬಳಿಕ ಏಕದಿನ ತಂಡಕ್ಕೂ ಅಧಿಕೃತವಾಗಿ ನಾಯಕನಾಗಿ ಆಯ್ಕೆಯಾದ ಆ ದಿನವೇ ಅಭಿಮಾನಿಗಳು ತಮ್ಮ ಹೃದಯ ಸಿಂಹಾಸನದಲ್ಲಿ ಗಿಲ್​ಗೆ ವಿಶೇಷ ಸ್ಥಾನ ನೀಡಿದ್ರು. ಆ ಒಂದು ರಾತ್ರಿಯಲ್ಲೇ ಇನ್ಸ್​​ಸ್ಟಾಗ್ರಾನಲ್ಲಿ ಗಿಲ್​ ಫಾಲೋವರ್ಸ್​ ಸಂಖ್ಯೆ ಒಂದು ಲಕ್ಷದಷ್ಟು ಏರಿಕೆ ಕಂಡಿತ್ತು.

ಏಕದಿನ ನಾಯಕನಾಗಿ ಗಿಲ್​ ಫೇಲ್

ಏಕದಿನ ತಂಡದ ಸಾರಥ್ಯವನ್ನ ಶುಭ್​ಮನ್​ ಗಿಲ್​ ವಹಿಸಿಕೊಂಡಾಗ ಸಾಕಷ್ಟು ನಿರೀಕ್ಷೆಯಿತ್ತು.  ನಾಯಕನ ಪಟ್ಟವೇರಿದ ಬಳಿಕ ಗಿಲ್​ ನಿರೀಕ್ಷೆಯನ್ನ ಹುಸಿಯಾಗಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ, ಇದೀಗ ನ್ಯೂಜಿಲೆಂಡ್​​ ಸರಣಿಯಲ್ಲಿ ಗಿಲ್​ ನಾಯಕನಾಗಿ ಫೇಲ್​ ಆಗಿದ್ದಾರೆ. ಆಟಗಾರನಾಗಿಯೂ ಫ್ಲಾಪ್​ ಆಗಿದ್ದಾರೆ. ಗಿಲ್​ ವೈಫಲ್ಯದಿಂದ ಅಭಿಮಾನಿಗಳೂ ಬೇಸರಗೊಂಡಿದ್ದಾರೆ. 

ಇದನ್ನೂ ಓದಿ: ಸದ್ಯದಲ್ಲೇ ಭಾರತ- ಯೂರೋಪಿಯನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ : ಭಾರತದಲ್ಲಿ ಲಕ್ಷುರಿ ಕಾರ್ ಬೆಲೆ ಕಡಿತ

Gill

ಅಕ್ಟೋಬರ್​​ನಲ್ಲಿ ಗಿಲ್​ ಕ್ರೇಜ್​ ಪೀಕ್​​ನಲ್ಲಿತ್ತು. ಅದಾಗಿ 3 ತಿಂಗಳ ಬಳಿಕ ನೋಡಿದ್ರೆ ಗಿಲ್​ ಕ್ರೇಜ್​ ಕಡಿಮೆಯಾಗ್ತಿದ್ಯಾ ಎಂಬ ಪ್ರಶ್ನೆ ಹುಟ್ಟಿದೆ. ಸೋಷಿಯಲ್​ ಮೀಡಿಯಾಗಳಲ್ಲಿ ಈ ಚರ್ಚೆ ಸದ್ಯ ಜೋರಾಗಿ ನಡೀತಾಯಿದೆ. ಗಿಲ್​ ಎಲ್ಲರ ಫೇವರಿಟ್​ ಆಗಿ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಫ್ಯಾನ್ಸ್​ ಹೆಚ್ಚಾದಾಗ ಹೇಗೆ ಎಲ್ಲರೂ ಅಚ್ಚರಿಯಿಂದ ನೋಡಿದ್ರೋ ಹಾಗೇ ಈಗ ಕ್ರೇಜ್​ ಕಡಿಮೆಯಾಗ್ತಿರೋದನ್ನೂ ನೋಡ್ತಿದ್ದಾರೆ. 

3 ಲಕ್ಷ ಫಾಲೋವರ್ಸ್​​ ಕಡಿತ!

ಅಂದು ಒಂದು ದಿನದಲ್ಲಿ ಗಿಲ್​ಗೆ 1 ಲಕ್ಷ ಇನ್ಸ್​​​ಸ್ಟಾ ಫಾಲೋವರ್ಸ್​ ಹೆಚ್ಚಾಗಿದ್ರು. ಈಗ ನೋಡಿದ್ರೆ 3 ಮಿಲಿಯನ್​ಗೂ ಅಧಿಕ ಫಾಲೋವರ್ಸ್​ ಕಡಿಮೆಯಾಗಿದ್ದಾರೆ. ಡಿಸೆಂಬರ್​ನಲ್ಲಿ 18.5 ಮಿಲಿಯನ್ ಇನ್ಸ್​​ಸ್ಟಾ ಫಾಲೋವರ್ಸ್​ ಹೊಂದಿದ್ದ ಗಿಲ್​ಗೆ ಈಗ ಇರೋದು 18.2 ಮಿಲಿಯನ್​ ಫಾಲೋವರ್ಸ್​​​! ಕೆಲವೇ ದಿನಗಳ ಅಂತರದಲ್ಲಿ 3 ಲಕ್ಷ​ ಫಾಲೋವರ್ಸ್​ ಕಡಿಮೆಯಾಗಿದ್ದಾರೆ. 

ನಾಯಕನ ಪಟ್ಟವೇರಿದ್ದ ಮೊದಲ ಸರಣಿಯಲ್ಲೇ ಬೊಂಬಾಟ್​ ಪ್ರದರ್ಶನ ನೀಡಿ ಗಿಲ್​ ಎಲ್ಲರ ಮನ ಗೆದ್ದಿದ್ರು. ಆ ಬಳಿಕ ಗಿಲ್​ ಡಲ್​ ಆಗಿದ್ದಾರೆ. ಕಳಪೆ ಪರ್ಫಾಮೆನ್ಸ್​ ಟಿ20 ವಿಶ್ವಕಪ್​ ತಂಡದಿಂದಲೇ ಹೊರಬಿದ್ದಾರೆ. ಜೊತೆಗೆ ಪ್ರಿನ್ಸ್ ಗಿಲ್​​​​ ಸೈಲೆಂಟಾದ್ರೆ ಕಿಂಗ್​ ವಿರಾಟ್​ ಕೊಹ್ಲಿ ಆರ್ಭಟಿಸಿದ್ದಾರೆ. ವಿರಾಟ್​ ಕೊಹ್ಲಿ ಮೇನಿಯಾ ಮುಂದೆ ಶುಭ್​ಮನ್​ ಗಿಲ್​ ಕ್ರೇಜ್​ ಬಿದ್ದೋಗಿದೆ. 

ಕೊಹ್ಲಿ ಕ್ರಿಕೆಟ್​ನಿಂದ ದೊರ ಸರೀತಾರೆ ಅನ್ನೋದು ಗೊತ್ತಾದ ಬೆನ್ನಲ್ಲೇ, ಕಾರ್ಪೋರೇಟ್​​ ಜಗತ್ತಿಗೆ ಪರ್ಯಾಯವಾಗಿ ಶುಭ್​ಮನ್​ ಗಿಲ್ ಕಂಡಿದ್ರು​. ಶುಭ್​ಮನ್​ ಗಿಲ್​ ನಾಯಕ ಪಟ್ಟವೇರಿದ ಬಳಿಕ ಸಹಜವಾಗೇ ಬ್ರ್ಯಾಂಡ್​ವ್ಯಾಲ್ಯೂ ಕೂಡ ಏರಿಕೆ ಕಂಡಿತ್ತು. ಆನ್​ಫೀಲ್ಡ್​ನಲ್ಲಿ ಗಿಲ್​ ಬ್ಯಾಟ್​ ಸೈಲೆಂಟ್​ ಆದಂತೆ ಬ್ರ್ಯಾಂಡ್​ವ್ಯಾಲ್ಯೂ ಕೂಡ ಸ್ವಲ್ಪ ಮಟ್ಟಿಗೆ ಕುಸಿತ ಕಂಡಿದೆ. ಕೆಲ ಬ್ರ್ಯಾಂಡ್​​ಗಳು ಒಪ್ಪಂದ ಮಾಡಿಕೊಳ್ಳೋಕೂ ಹಿಂದೇಟು ಹಾಕ್ತಿವೆ ಅನ್ನೋದು ಸದ್ಯದ ರಿಪೋರ್ಟ್​ ಆಗಿದೆ. 

ಇದನ್ನೂ ಓದಿ: RCBಗೆ ಮೋಸ ಮಾಡಿದ ಎಲೀಸ್ ಪೆರ್ರಿ! ಪೆರ್ರಿ, ಪೆರ್ರಿ ಬೇರೆಡೆಗೆ ಪೇರಿ..!

ಒಟ್ಟಿನಲ್ಲಿ ಕೊಹ್ಲಿ ಮೇನಿಯಾ, ಕಳಪೆ ಆಟ.. ಶುಭ್​ಮನ್​ ಗಿಲ್​ ಪಾಪ್ಯುಲಾರಿಟಿಗೆ ಹೊಡೆತ ಕೊಟ್ಟಿದೆ. ಮುಂದಿನ ದಿನಗಳಲ್ಲೂ ಶುಭ್​ಮನ್​ ಸೈಲೆಂಟಾಗೇ ಉಳಿದು ಬಿಟ್ರೆ, ಬ್ರ್ಯಾಂಡ್​​ ಬ್ಯಾಲ್ಯೂ ಮತ್ತಷ್ಟು ಬಿದ್ದೋಗೋದ್ರಲ್ಲಿ ಅನುಮಾನವೇ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Virat Kohli Shubman Gill
Advertisment