ಬಿಗ್​ಬಾಸ್​ ಸೀಸನ್ 12.. ಕರುನಾಡು ಜನ್ರಿಗೆ ಎಂಟರ್​ಟೈನ್ಮೆಂಟ್ ಕೊಡ್ತಿರೋ ಟ್ರೆಂಡಿಂಗ್ ಶೋ.. ಆದ್ರೆ, ಶೋ ಆರಂಭವಾದಾಗಿನಿಂದ ಒಂದಿಲ್ಲೊಂದು ವಿಚಾರಗಳಿಗೆ ಸದ್ದು ಮಾಡ್ತಿದೆ. ಮೊದಲು ಬಿಗ್​ಬಾಸ್ ಸೆಟ್​ ಇರೋ ಜಾಲಿವುಡ್ ಮಾಡಿದ ಯಡವಟ್ಟಿನಿಂದ ಬಿಗ್​ ಮನೆಗೆ ಬೀಗ ಬಿತ್ತು.. ಇದು ಮಾಸೋ ಮುನ್ನವೇ ಸ್ಪರ್ಧಿ ಅಶ್ವಿನಿ ಗೌಡ ಆಡಿದ ಅವಹೇಳನ ಮಾತಿನ ಆರೋಪ.. ಈ ಬೆನ್ನಲ್ಲೆ ಮತ್ತೊಂದು..
ಕರಾವಳಿ ಬೆಡಗಿ ರಕ್ಷಿತಾಗೆ ಶುರುವಾಗುತ್ತಾ ಕಾನೂನು ಸಂಕಷ್ಟ?
ಬಿಗ್ ಮನೆಯ ಮೊದಲನೇ ದಿನವೇ ಔಟ್ ಆಗಿ ಕಮ್​ಬ್ಯಾಕ್ ಮಾಡಿದ ರಕ್ಷಿತ ಸಖತ್ ಟ್ರೆಂಡಿಂಗ್​ನಲ್ಲಿದ್ದಾರೆ. ಕಾರಣ ಅವ್ರ ಮಾತಿನ ಶೈಲಿ. ಆದ್ರೆ, ಇದೇ ರಕ್ಷಿತಾಗೆ ಈಗ ಕಾನೂನಿನ ಸಂಕಷ್ಟ ಎದುರಾಗಿದೆ.. ಕಾರಣ ಇಷ್ಟೇ.. ಬಿಗ್ ಮನೆಯಲ್ಲಿ ಜಗಳ ಕಾಮನ್.. ಈ ವೇಳೆ ಸಹಸ್ಪರ್ಧಿ ಅಶ್ವಿನಿ ವಿರುದ್ಧ ಆಡಿರುವ ಅದೊಂದು ಮಾತು ಇದೀಗ ಚರ್ಚೆಗೆ ಗ್ರಾಸವಾಗಿದೆ. ಜಗಳ ಆಡೋ ಸಂದರ್ಭದಲ್ಲಿ ಅಶ್ವಿನಿ ಅವ್ರಿಗೆ ನಿಮ್ಮ ಧಾರಾವಾಹಿ ಹೊರಗೆ ಇಟ್ಕೊಳ್ಳಿ ಎಂದು ರಕ್ಷಿತಾ ಹೇಳಿದ್ರು. ಇನ್ನು, ರಕ್ಷಿತಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕುಶಲ ಕಲಾ ವೃಂದ ನಗರ ಪೊಲೀಸ್ ಕಮಿಷನರ್​ಗೆ ಪತ್ರ ಬರೆದಿದ್ದಾರೆ. ಅಷ್ಟಲ್ಲದೇ, ಈ ಬಗ್ಗೆ ರಂಗ ಭೂಮಿ ಕಲಾವಿದೆ ಕುಶಲಾ ನಗರ ಪೊಲೀಸ್ ಕಮಿಷನರ್​ಗೆ ದೂರು ಕೊಡಲು ಮುಂದಾಗಿದ್ದಾರೆ.
ಇಂದು ರಕ್ಷಿತಾ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸೋದಾಗಿ ಕುಶಲ ಕಲಾ ವೃಂದ ಹೇಳ್ತಿದೆ.. ಹಾಗಾದ್ರೆ, ಈ ಪ್ರಕರಣದಲ್ಲಿ ಮತ್ತೇನು ಬೆಳವಣಿಗೆ ಆಗಲಿದೆ.. ಕಾದು ನೋಡ್ಬೇಕಿದೆ.
ಇದನ್ನೂ ಓದಿ: ನಭಕ್ಕೆ ಹಾರಿದ ‘ಬಾಹುಬಲಿ’ ರಾಕೆಟ್​.. ಇಸ್ರೋ ಮತ್ತೊಂದು ಮೈಲಿಗಲ್ಲು..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us