/newsfirstlive-kannada/media/media_files/2025/10/04/darshan-1-2025-10-04-12-11-43.jpg)
ನಿನ್ನೆ ಜೈಲಿನಲ್ಲಿ ದರ್ಶನ್​ನ ವಿಜಯಲಕ್ಷ್ಮೀ ಭೇಟಿಯಾಗಿದ್ದಾರೆ. ಪತಿ ಜೈಲಿನಲ್ಲಿ ಅನುಭವಿಸ್ತಿರುವ ಕಷ್ಟಗಳನ್ನು ನೋಡಿ ಪತ್ನಿ ವಿಜಯಲಕ್ಷ್ಮೀ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.
ಈ ವೇಳೆ ದೇಹಕ್ಕೆ ಯಾವುದೇ ಆಕ್ಟಿವಿಟಿ ಇಲ್ಲದೆ ತುಂಬಾ ಕಷ್ಟವಾಗುತ್ತಿದೆ ಎಂದು ದರ್ಶನ್ ಹೇಳಿಕೊಂಡಿದ್ದಾರೆ. ಪತ್ನಿಯ ಕಣ್ಣೀರು ನೋಡಿ, ನೀನು ಜೈಲಿಗೆ ಬರೋಕೆ ಹೋಗಬೇಡ. ನನ್ನ ಹಣೆ ಬರಹ ಇದ್ದಂಗೆ ಆಗುತ್ತೆ. ಸಾಮಾನ್ಯ ಎಂಟ್ರಿ ಮಾಡಿಸಿ ಬರಲು ಗಂಟೆಗಟ್ಟಲೇ ವೈಯ್ಟ್ ಮಾಡಬೇಕಾಗುತ್ತದೆ. ಅದಕ್ಕೆ ನೀನು ಬರಬೇಡ ಎಂದಿದ್ದಾರಂತೆ.
ಇದನ್ನೂ ಓದಿ: ಕಾಂತಾರ ಫಸ್ಟ್​ ಡೇ ಗಳಿಸಿದ್ದು ಕೋಟಿ ಕೋಟಿ.. ಕನ್ನಡದಲ್ಲಿ ಗಳಿಸಿದ್ದು ಎಷ್ಟು ಕೋಟಿ..?
ಇನ್ನು ಜೈಲಲ್ಲಿ ಸಹ ಆರೋಪಿಗಳಿಗೆ ಎತ್ತಿಕಟ್ಟಿದ ಆರೋಪ ಕೇಳಿಬಂದಿದೆ. ಅದೇ ಕಾರಣಕ್ಕೆ ಜೈಲಲ್ಲಿ ಕೈದಿಗಳ ಜೊತೆ ದರ್ಶನ್ ಸ್ನೇಹ ಅಷ್ಟಕ್ಕಷ್ಟೇ ಇದೆ. ದರ್ಶನ್ ಏನೂ ಉಪಯೋಗಕ್ಕೆ ಬರ್ತಿಲ್ಲ ಎಂದು ಸಹ ಆರೋಪಿಗಳು ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಎರಡನೇ ಬಾರಿಗೆ ಜೈಲು ಸೇರಿರುವ ದರ್ಶನ್ ಸಂಕಷ್ಟದ ಮೇಲೆ ಸಂಕಷ್ಟ ಅನುಭವಿಸ್ತಿದ್ದಾರೆ. ಜೈಲಲ್ಲಿ ಸೌಲಭ್ಯ ವಂಚಿತರಾಗಿ ಪರಿತಪಿಸುತ್ತಿರೋ ದರ್ಶನ್, ಹಾಸಿಗೆ ದಿಂಬು ನೀಡುವಂತೆ ಅಂಗಲಾಚಿದ್ರೂ ಜೈಲಾಧಿಕಾರಿಗಳು ಡೋಂಟ್ ಕೇರ್ ಎಂದಿದ್ದಾರೆ. ಹೀಗಾಗಿ ಮಲಗಲು ಹಾಸಿಗೆಯಿಲ್ಲದೆ, ಕೂರಲು ಖುರ್ಚಿಯಿಲ್ಲದೇ ಒದ್ದಾಡ್ತಿದ್ದಾರೆ.
ಇದನ್ನೂ ಓದಿ: ಕೆಮ್ಮಿನ ಸಿರಫ್ ಗಳಲ್ಲಿ ವಿಷಕಾರಿ ಅಂಶ ಇಲ್ಲ ಎಂದ ಕೇಂದ್ರ ಸರ್ಕಾರ: ಆದರೂ ಮಕ್ಕಳಿಗೆ ಸಿರಫ್ ನೀಡಬೇಡಿ ಎಂದ ಕೇಂದ್ರ ಸರ್ಕಾರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ