/newsfirstlive-kannada/media/media_files/2025/08/22/deepika-das2-2025-08-22-23-35-00.jpg)
ನಾನು ಯಾವ ದೊಡ್ಡ ನಟಿ ಅಲ್ಲದಿದ್ದರು ಏನು ಸಾಧನೆ ಮಾಡದಿದ್ದರೂ, ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ ಎಂದು ಯಶ್ ತಾಯಿ ವಿರುದ್ಧ ನಟಿ ದೀಪಿಕಾ ದಾಸ್ ಅವರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಸುಜಾತ ಭಟ್ ಬಗ್ಗೆ ಸೋದರನ ಶಾಕಿಂಗ್ ಹೇಳಿಕೆ, ಮಗಳು ಇರಲು ಸಾಧ್ಯವೇ ಇಲ್ಲ!
ಕೊತ್ತಲವಾಡಿ ಸಿನಿಮಾ ಪ್ರಮೋಷನ್ ವೇಳೆ ಯಶ್ ಅವರ ತಾಯಿ ಪುಷ್ಟ ಅವರು ದೀಪಿಕಾ ದಾಸ್ ಬಗ್ಗೆ ಮಾತಾಡಿದ್ದಾರೆ. ‘‘ಅವರಿಗೂ ನಮಗೂ ಆಗೋದೇ ಇಲ್ಲ. ಯಾವ ದೊಡ್ಡ ಹೀರೋಯಿನ್ ಅವಳು, ಯಾವ ಸಿನಿಮಾದಲ್ಲಿ ಸಾಧನೆ ಮಾಡಿದ್ದಾಳೆ ಅಂತ ಅವಳನ್ನು ಹಾಕಿಕೊಂಡು ಸಿನಿಮಾ ಮಾಡ್ತಾರೆ. ಸಂಬಂಧ ಆದ್ರೂ ಅವರನ್ನ ದೂರದಲ್ಲೇ ಇಟ್ಟಿದ್ದೀವಿ. ದೀಪಿಕಾ ದಾಸ್ ದೊಡ್ಡ ಹೀರೋಯಿನ್ ಅಲ್ಲ’’ ಅಂತ ಹೇಳಿದ್ದರು. ಇದೇ ವಿಚಾರಕ್ಕೆ ನಟಿ ದೀಪಿಕಾ ದಾಸ್ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಆಕ್ರೋಶ ಭರಿತವಾಗಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.
‘‘ಹೊಸ ಕಲಾವಿದರನ್ನ ಬೆಳಿಸೋ ಜನರು ಕಲಾವಿದರಿಗೆ ಬೆಲೆ ಕೊಡೋದನ್ನ ಕಲಿತಿರಬೇಕು. ಇಲ್ಲಿವರೆಗೂ ಯಾರ ಹೆಸರನ್ನು ಹೇಳಿಕೊಂಡು ಬಂದಿಲ್ಲ. ಮುಂದೇನು ಬರಲ್ಲ. ಕೆಲವರಿಗೆ ಬೆಲೆಕೊಟ್ಟ ಮಾತ್ರಕ್ಕೆ ಯಾರನ್ನು ಕಂಡು ಭಯ ಯಾರಿಗೂ ಇಲ್ಲ. ಅದು ಅಮ್ಮ ಆದರೂ ಸರಿ ದೊಡ್ಡಮ್ಮ ಆದರೂ ಸರಿ ಅಥವಾ ಪುಷ್ಪಮ್ಮ ಆದರೂ ಸರಿ. ವಿಥ್ ಡ್ಯೂರೆಸ್ಪೆಕ್ ಟು ಸ್ಟಾರ್ ಆಫ್ ಅವರ್ ಇಂಡಸ್ಟ್ರಿ. ನಾನು ಯಾವ ದೊಡ್ಡ ನಟಿ ಅಲ್ಲದಿದ್ದರು ಏನು ಸಾಧನೆ ಮಾಡದಿದ್ದರೂ, ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ’’ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ