/newsfirstlive-kannada/media/media_files/2026/01/10/danush-gowda-2026-01-10-10-35-01.jpg)
ಬಿಗ್ ಬಾಸ್ ಯಾರು ಗೆಲ್ಲುತ್ತಾರೆ ಅನ್ನೋ ಚರ್ಚೆ ಜೋರಾಗಿ ನಡೆಯುತ್ತಿದೆ. ಫಿನಾಲೆಗೆ ಒಂದೇ ವಾರ ಬಾಕಿ ಇರುವ ಹಿನ್ನೆಲೆಯಲ್ಲಿ ಕುತೂಹಲ ಹೆಚ್ಚಾಗಿದೆ. ಇದೀಗ ಧನುಷ್ ಗೌಡ ಅವರು ಫಿನಾಲೆ ತಲುಪಿದ್ದು, ಅವರ ಫ್ಯಾನ್ಸ್​ ಸಖತ್ ಖುಷಿಪಟ್ಟಿದ್ದಾರೆ.
ಕಳೆದ ವಾರ ಧನುಷ್ ಬಿಗ್​ ಮನೆಗೆ ಮತ್ತೊಮ್ಮೆ ಕ್ಯಾಪ್ಟನ್ ಆದರು. ಈ ಸೀಸನ್​ನ ಕೊನೇ ಕ್ಯಾಪ್ಟನ್ ಆದ್ದರಿಂದ ಅವರಿಗೆ ಕೆಲವು ವಿಶೇಷ ಅಧಿಕಾರಗಳು ಸಿಕಿದ್ದವು. ಟಾಪ್ 6 ಆಟದಲ್ಲಿ ನೇರವಾಗಿ ಸ್ಪರ್ಧಿಸುವ ಅವಕಾಶ ಧನುಷ್​​ಗೆ ಸಿಕ್ಕಿತ್ತು. ಅದನ್ನು ಧನುಷ್ ಚೆನ್ನಾಗಿ ಬಳಸಿಕೊಂಡು, ಕೊನೆಯ ಟಾಸ್ಕ್​​ನಲ್ಲಿ ಗೆದ್ದು ಫಿನಾಲೆಗೆ ತಲುಪಿದ್ದಾರೆ.
ಈ ಟಾಸ್ಕ್​​ನಲ್ಲಿ ಧನುಷ್, ಅಶ್ವಿನಿ ಗೌಡ, ಕಾವ್ಯಾ ಶೈವ, ಮ್ಯೂಟೆಂಟ್ ರಘು ಭಾಗಿಯಾಗಿದ್ದರು. ಅತಿ ಕಡಿಮೆ ಸಮಯದಲ್ಲಿ ಟಾಸ್ಕ್ ಪೂರ್ಣಗೊಳಿಸಿದ ಧನುಷ್ ಫಿನಾಲೆಗೆ ಟಿಕೆಟ್ ಪಡೆದರು. ಇನ್ನು, ಧನುಷ್ ಫಿನಾಲೆ ತಲುಪಿದ್ದಕ್ಕೆ ರಾಶಿಕಾ ಶೆಟ್ಟಿ ಹೆಚ್ಚು ಖುಷಿಪಟ್ಟರು. ಬಿಗ್​ ಬಾಸ್​​ನಲ್ಲಿ ಗಿಲ್ಲಿ ನಟ ಗೆಲ್ಲುವ ರೇಸ್​ನಲ್ಲಿದ್ದಾರೆ. ಆದರೆ ಗಿಲ್ಲಿಗೂ ಮೊದಲೇ ಧನುಷ್ ಫಿನಾಲೆ ತಲುಪಿ ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ನಂತರ ಮುಂದೇನು..? ಕಲರ್ಸ್‌ನಿಂದ ವೀಕ್ಷಕರಿಗೆ ಭರ್ಜರಿ ನ್ಯೂಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us