/newsfirstlive-kannada/media/media_files/2025/11/08/dhanush-gowda-2025-11-08-22-21-38.jpg)
ಬಿಗ್​ಬಾಸ್​ನಲ್ಲಿ ಕಿಚ್ಚನ ಚಪ್ಪಾಳೆಗಾಗಿ ಸ್ಪರ್ಧಿಗಳು ಕಾಯ್ತಿರುತ್ತಾರೆ. ಈ ವಾರ ಧನುಷ್​​ ಅವರು ಕಿಚ್ಚನ ಚಪ್ಪಾಳೆ ಪಡೆದುಕೊಂಡಿದ್ದಾರೆ.
ಚಪ್ಪಾಳೆ ಕೊಟ್ಟು ಸುದೀಪ್ ಹೇಳಿದ್ದೇನು..?
ಇಲ್ಲಿ ತ್ಯಾಗ ಮಾಡಿದ ತಕ್ಷಣ ಎಲ್ಲವೂ ಸತ್ಯ ಅಂತಲ್ಲ. ತ್ಯಾಗ ಮಾಡಿದ ತಕ್ಷಣ ಅವರು ತಪ್ಪು ಅಂತಲ್ಲ. ಅಭಿಷೇಕ್​​ಗೆ ಲೆಟರ್ ಬಿಟ್ಟುಕೊಟ್ಟ ವಿಚಾರದ ಬಗ್ಗೆ ಪ್ರಸ್ತಾಪಿಸಿ.. ಈ ಮನೆಯಲ್ಲಿ ಈ ವಾರ ನಾನು ನೋಡಿದ್ದು, ನಿಮ್ಮ ಸ್ಪರ್ಧಿಗೆ ಬಿಟ್ಟು ಕೊಟ್ಟಿರುವುದಾಗಿರಬಹುದು. ನೀವೊಬ್ಬ ಕ್ಯಾಪ್ಟನ್ ಆಗಿದ್ರಿ. ಕ್ಯಾಪ್ಟನ್ ಈ ಮನೆಯಲ್ಲಿ ಇರುವ ಇಮ್ಯುನಿಟಿ ರೈಟ್ಸ್​. ಅದನ್ನು ಸಾಮಾನ್ಯವಾಗಿ ಬಿಟ್ಟುಕೊಡೋದು ತುಂಬಾ ಕಷ್ಟ.
ಅದನ್ನು ಬಿಟ್ಟುಕೊಟ್ಟು ನಂತರ ತುಂಬಾ ಸ್ಪರ್ಧಿಗಳು ಪದೇ ಪದೆ ಹೇಳಿಕೊಳ್ಳುತ್ತ ಇರುತ್ತಾರೆ. ಆದರೆ ನೀವು ಹಾಗೆ ಮಾಡಲಿಲ್ಲ. ನನಗೆ ತುಂಬಾ ಇಷ್ಟವಾಯಿತು. ಯಾವುದಾದರೂ ಒಂದು ತ್ಯಾಗ ಮಾಡಿದ ಮೇಲೆ ತುಂಬಾ ಹೇಳಿಕೊಂಡು ತಿರುಗಾಡುತ್ತಾರೆ. ಆದರೆ ನೀವು ಹಾಗೆ ಮಾಡಲಿಲ್ಲ. ಈ ಕೈಯಲ್ಲಿ ಕೊಟ್ಟಿದ್ದು, ಮತ್ತೊಂದು ಕೈಗೆ ಗೊತ್ತಾಗದ ರೀತಿಯಲ್ಲಿ ನಡೆದುಕೊಂಡ್ರಿ. ಇದು ಇಷ್ಟವಾಯಿತು ಅಂತಾ ಕಿಚ್ಚನ ಚಪ್ಪಾಳೆ ನೀಡಿದರು. ತ್ಯಾಗ ಅನ್ನೋದು ನನ್ನ ಪ್ರಕಾರ ಸೈಲೆನ್ಸ್​ ಎಂದರು.
ಇದನ್ನೂ ಓದಿ: ‘ಯುದ್ಧ ಭುಗಿಲೆದ್ದರೆ..’ ಪಾಕಿಸ್ತಾನಕ್ಕೆ ತಾಲಿಬಾನ್ ನೇರ ಎಚ್ಚರಿಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us