Advertisment

ಸುದೀಪ್ ಎದುರಲ್ಲೇ ಕಿತ್ತಾಡಿಕೊಂಡ ಧ್ರುವಂತ್, ರಜತ್..! ಕಿಚ್ಚನ ರಿಯಾಕ್ಷನ್ ಹೇಗಿತ್ತು..?

ಬಿಗ್​ ಬಾಸ್ ಶೋನಲ್ಲಿ ಇವತ್ತು ‘ವಾರದ ಕತೆ ಕಿಚ್ಚನ ಜೊತೆ’ ಸಂಚಿಕೆ ಪ್ರಸಾರವಾಗಲಿದೆ. ಕುತೂಹಲಕಾರಿ ವಿಚಾರ ಏನೆಂದರೆ ಸುದೀಪ್ ಎದುರಲ್ಲೇ ಧ್ರುವಂತ್ ಹಾಗೂ ರಜತ್ ಕಿತ್ತಾಡಿಕೊಂಡಿದ್ದಾರೆ. ಪ್ರೊಮೋ ವಿಡಿಯೋ ಇಲ್ಲಿದೆ.

author-image
Ganesh Kerekuli
Dhruvant (4)
Advertisment

ಬಿಗ್​ ಬಾಸ್ ಶೋನಲ್ಲಿ ಇವತ್ತು ‘ವಾರದ ಕತೆ ಕಿಚ್ಚನ ಜೊತೆ’ ಸಂಚಿಕೆ ಪ್ರಸಾರವಾಗಲಿದೆ. ಸ್ಪರ್ಧಿಗಳ ಜೊತೆ ಸುದೀಪ್ ಯಾವೆಲ್ಲ ವಿಚಾರಗಳ ಚರ್ಚೆ ಮಾಡಲಿದ್ದಾರೆ ಅಂತಾ ತಿಳಿದುಕೊಳ್ಳಲು ವೀಕ್ಷಕರು ಎಕ್ಸೈಟ್ ಆಗಿದ್ದಾರೆ. ಈ ಮಧ್ಯೆ ಬಿಗ್​ ಬಾಸ್ ಪ್ರೊಮೋ ರಿಲೀಸ್ ಮಾಡಿ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ. 

Advertisment

ರಜತ್ vs ಕಿಶನ್

ವೀಕ್ಷಕರು ಧ್ರುವಂತ್​​ಗೆ ಪತ್ರ ಬರೆದಿದ್ದರು. ಒಂದು ಪತ್ರದಲ್ಲಿ ಧ್ರುವಂತ್ ಅವರೇ ಮನೆಬಿಟ್ಟು ಹೋಗುವಂತದ್ದು ಏನಾಗಿತ್ತು ಎಂದು ಕೇಳಲಾಗಿದೆ. ಅದಕ್ಕೆ ಉತ್ತರಿಸಿದ ಧ್ರುವಂತ್, ಅಲ್ಲದೇ ಇರುವ ಆರೋಪಗಳನ್ನು ನಿರಂತರವಾಗಿ ತೆಗೆದುಕೊಳ್ಳಬೇಕಾಯಿತು. ಅದರಲ್ಲಿ ಆಗುವ ಡ್ಯಾಮೇಜ್​ ಬೇಕಾ ಅನ್ನೋ ಯೋಚನೆ ಬಂತು.. ಎಂದಿದ್ದಾರೆ. 

ಇದನ್ನೂ ಓದಿ:ಜೈಲಿನಲ್ಲಿರೋ ನಟ ದರ್ಶನ್ ಮತ್ತೊಂದು ನಾಟಕ ಬಯಲು..!?

ಈ ವೇಳೆ ಮಧ್ಯ ಪ್ರವೇಶ ಮಾಡುವ ರಜತ್.. ಸರ್. ಡ್ಯಾಮೇಜ್ ಇವರೇ ಮಾಡಿಕೊಂಡಿರೋದು. ಅಸಭ್ಯವಾಗಿ ಮಾತನ್ನಾಡೋದು, ಅಸಭ್ಯವಾಗಿ ನಡೆದುಕೊಳ್ಳುವುದು.. ಎಂದಿದ್ದಾರೆ. ಆಗ ಕೋಪಗೊಳ್ಳುವ ಧ್ರುವಂತ್, ಇದು ವೆರಿ ವೆರಿ ರಾಂಗ್​ ಸ್ಟೇಟ್​ಮೆಂಟ್ ಅಂತಾ ಮಾತನ್ನಾಡಲು ಹೋಗಿದ್ದಾರೆ. 

ಆದರೆ ರಜತ್ ಸುಮ್ಮನೆ ಆಗೋದಿಲ್ಲ. ಸರ್, ನಾನು ನೇರವಾಗಿ ಮಾತನ್ನಾಡ್ತೀನಿ, ತಡ್ಕೋ ಈಗ ಎಂದಿದ್ದಾರೆ. ಅದಕ್ಕೆ ರೊಚ್ಚಿಗೇಳುವ ಧ್ರುವಂತ್, ನೀನು ತಡ್ಕೋ. ಇದನ್ನೆಲ್ಲ ನೀನು ನನ್ನ ಹತ್ತಿರ ಮಾತನ್ನಾಡಲು ಬರಬೇಡ. ಬೇರೆ ಫಲಾಹಾರ ಅಲ್ಲ. ಎಷ್ಟರಲ್ಲಿ ಇರಬೇಕೋ, ಅಷ್ಟರಲ್ಲೇ ಇರು ಎಂದು ವಾರ್ನ್ ಮಾಡಿದ್ದಾರೆ. ಇದನ್ನು ನೋಡಿಕೊಂಡು ಸುದೀಪ್ ನಗುತ್ತ ನಿಂತಿದ್ದರು. ಸುದೀಪ್ ಉತ್ತರ ಏನು ಅನ್ನೋದು ಇಂದು ರಾತ್ರಿ ಗೊತ್ತಾಗಲಿದೆ. 

Advertisment

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


 
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rajat Patidar Bigg Boss Kannada 12 Bigg boss bigg boss dhruvanth
Advertisment
Advertisment
Advertisment