/newsfirstlive-kannada/media/media_files/2025/10/03/darshan-2025-10-03-08-43-31.jpg)
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ (Actor Darshan) ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಬೆನ್ನುನೋವಿನ ಸಮಸ್ಯೆ ಇದೆ ಎಂದು ಹೇಳಿಕೊಂಡಿರುವ ದರ್ಶನ್ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್, ದರ್ಶನ್ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿತ್ತು.
ಅದರಂತೆ ಸಿವಿ ರಾಮನ್ ವೈದ್ಯರ ತಂಡ ಜೈಲಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿದೆ. ತಪಾಷಣೆ ನಡೆಸಿದ ವೈದ್ಯರ ತಂಡ ಬೆನ್ನು ನೋವಿನ ಸಮಸ್ಯೆ ಇಲ್ಲ ಎಂದು ವರದಿ ನೀಡಿದೆಯಂತೆ. ವಾರಕ್ಕೆ ಎರಡು ಅಥವಾ ಮೂರು ಬಾರಿ ಫಿಜಿಯೋಥೆರಫಿ ಮಾಡುತ್ತಿದ್ದರು. ಆದರೆ ಮೊದಲ ವಾರದ ಚಿಕಿತ್ಸೆ ವೇಳೆ ದರ್ಶನ್​ಗೆ ಫಿಜಿಯೋಥೆರಫಿ ಅವಶ್ಯಕತೆಯಿಲ್ಲ. ಅವರಿಗೆ ಬೆನ್ನು ನೋವು ಇಲ್ಲ ಎಂದು ಜೈಲು ಅಧಿಕಾರಿಗಳಿಗೆ ಸಿವಿ ರಾಮನ್ ವೈದ್ಯರ ತಂಡ ನೀಡಿದೆ ಎನ್ನಲಾಗಿದೆ.
ಬೆನ್ನುನೋವು ಜಾಸ್ತಿ ಇದೆ, ನಿಲ್ಲೋಕು ಆಗ್ತಿಲ್ಲ, ಕೂರೋಕು ಆಗ್ತಿಲ್ಲ. ಚಿಕಿತ್ಸೆಗೆ ಅವಕಾಶ ಕೊಡಿ ಎಂದು ದರ್ಶನ್ ಕೋರ್ಟ್​ಗೆ ಹೋಗಿದ್ದರು. ಕೋರ್ಟ್ ಕೂಡ ಸೂಕ್ತ ಚಿಕಿತ್ಸೆಗೆ ಜೈಲಾಧಿಕಾರಿಗಳಿಗೆ ಸೂಚನೆ ನೀಡಿತ್ತು. ಅದ್ರಂತೆ ಸಿವಿ ರಾಮನ್ ಆಸ್ಪತ್ರೆಯ ನಾಲ್ವರು ವೈದ್ಯರ ತಂಡ ಚಿಕಿತ್ಸೆ ಆಗಮಿಸಿತ್ತು.
ಈ ಹಿಂದೆ ವಾರಕ್ಕೆ ಎರಡು ಅಥವಾ ಮೂರು ಬಾರಿ ಫಿಜಿಯೋಥೆರಫಿ ಮಾಡಲಾಗುತ್ತಿತ್ತು. ಇದೀಗ ಬೆನ್ನುನೋವು ಇಲ್ಲದ ಹಿನ್ನೆಲೆಯಲ್ಲಿ ಫಿಜಿಯೋಥೆರಫಿ ಮಾಡೋದನ್ನ ವೈದ್ಯರು ನಿಲ್ಲಿಸಿದ್ದಾರೆ. ದರ್ಶನ್​ಗೆ ಫಿಜಿಯೋ ಅವಶ್ಯಕತೆ ಇಲ್ಲ ಎಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ನಿರ್ಮಲಾನಂದನಾಥ ಸ್ವಾಮೀಜಿಗೆ ಬಹಿರಂಗ ಕ್ಷಮೆ ಕೇಳಿದ ಕೇಂದ್ರ ಸಚಿವ ಕುಮಾರಸ್ವಾಮಿ : ಮಂಡ್ಯದಲ್ಲಿ ಎಚ್‌ಡಿಕೆ ಕ್ಷಮೆಯಾಚನೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us