Advertisment

ಇವತ್ತಿನ ಮ್ಯಾಚ್​​​ನ ಟಿಕೆಟ್​ಗೆ ಫುಲ್​ ಡಿಮ್ಯಾಂಡ್​.. ಅದಕ್ಕೆ ಕಾರಣ ಒಬ್ಬನೇ ಒಬ್ಬ ಸ್ಟಾರ್​..!

IND vs SA ಏಕದಿನ ಸರಣಿಯ ಫೈನಲ್​ ಫೈಟ್​ಗೆ ಕೌಂಟ್​ಡೌನ್​ ಆರಂಭವಾಗಿದೆ. ವಿಶಾಖಪಟ್ಟಣದ ಸ್ಟೇಡಿಯಂ 3ನೇ ಏಕದಿನ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಕೆಲವೇ ಗಂಟೆಗಳಲ್ಲಿ ಕದನ ಆರಂಭವಾಗಲಿದ್ದು, ರೆಡ್​​ ಹಾಟ್​ ಫಾರ್ಮ್​ನಲ್ಲಿರೋ ಕೊಹ್ಲಿ, ಒನ್ಸ್​ ಅಗೇನ್​ ಸೆಂಟರ್​ ಆಫ್​ ಅಟ್ರಾಕ್ಷನ್​ ಆಗಿದ್ದಾರೆ.

author-image
Ganesh Kerekuli
Virat kohli (2)
Advertisment
  • ರಾಂಚಿಯಲ್ಲಿ ಕಿಂಗ್​ ವಿರಾಟ್​ ಕೊಹ್ಲಿ ರಣಾರ್ಭಟ
  • ರಾಯ್​ಪುರದಲ್ಲಿ ರನ್​ಮಷೀನ್​ ರಾಯಲ್​ ಶತಕ
  • ವೈಜಾಗ್​ನಲ್ಲಿ ವಿರಾಟರೂಪ ದರ್ಶನವಾಗುತ್ತಾ.?

ಇಂಡೋ-ಆಫ್ರಿಕಾ ಏಕದಿನ ಸರಣಿಯ ಆರಂಭದಲ್ಲಿ ವೈಜಾಗ್​​ ಮ್ಯಾಚ್​ನ ಟಿಕೆಟ್​ಗೆ ಡಿಮ್ಯಾಂಡೇ ಇರಲಿಲ್ಲ. ಈಗ ನೋಡಿದ್ರೆ ಬ್ಲ್ಯಾಕ್​ನಲ್ಲಿ ಡಬಲ್, ತ್ರಿಬಲ್​ ಅಮೌಂಟ್​ ಕೊಟ್ಟು ಫ್ಯಾನ್ಸ್​ ಟಿಕೆಟ್​ ಖರೀದಿಸಿದ್ದಾರೆ. ಈ ಕ್ರೇಜ್​ಗೆ ಕಾರಣ ಕಿಂಗ್​ ಕೊಹ್ಲಿ. ಬ್ಯಾಕ್​ ಟು ಬ್ಯಾಕ್​ ಶತಕ ಸಿಡಿಸಿರೋ ಕೊಹ್ಲಿಯ ಬ್ಯಾಟ್​ನಿಂದ ಹ್ಯಾಟ್ರಿಕ್​ ಸೆಂಚುರಿ ನೋಡೋಕೆ ಫ್ಯಾನ್ಸ್​ ಕಾತರರಾಗಿದ್ದಾರೆ.

Advertisment

ರಾಂಚಿಯಲ್ಲಿ ರಣಾರ್ಭಟ

ಮೊದಲ ಏಕದಿನದಲ್ಲೇ ವಿರಾಟ್​ ಕೊಹ್ಲಿ ಸೌತ್​ ಆಫ್ರಿಕಾ ಬೌಲರ್​ಗಳನ್ನ ಬೆಂಡಿತ್ತಿದ್ರು. ರಾಂಚಿಯಲ್ಲಿ ರಣಾರ್ಭಟ ನಡೆಸಿದ ವಿರಾಟ್​ ಕೊಹ್ಲಿ ಮೊದಲ ಏಕದಿನದಲ್ಲೇ ಬೊಂಬಾಟ್​ ಸೆಂಚುರಿ ಸಿಡಿಸಿದ್ರು. ಅದೇ ಆಟ 2ನೇ ಏಕದಿನ ಪಂದ್ಯದಲ್ಲೂ ಮುಂದುವರೆಯಿತು. ರಾಯ್​ಪುರದಲ್ಲೂ ರಗಢ್​ ಆಟವಾಡಿದ ವಿರಾಟ್ ರಾಯಲ್​ ಶತಕ ಸಿಡಿಸಿದ್ರು. ಬ್ಯಾಕ್​ ಟು ಬ್ಯಾಕ್​ ಸೆಂಚುರಿ ಸಿಡಿಸಿ ಸಾಲಿಡ್​ ಫಾರ್ಮ್​ನಲ್ಲಿರೋ ವಿರಾಟ್​, ಇದೀಗ 3ನೇ ಏಕದಿನದಕ್ಕೆ ಭರ್ಜರಿಯಾಗಿ ಸಜ್ಜಾಗಿದ್ದಾರೆ. ವೈಜಾಗ್​ನಲ್ಲಿ ವಿರಾಟರೂಪ ದರ್ಶನವಾಗುತ್ತೆ ಅನ್ನೋ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.  

ಇದನ್ನೂ ಓದಿ: ಇವತ್ತು ODI ಫೈನಲ್.. ಟೀಂ ಇಂಡಿಯಾ ಪ್ಲೇಯಿಂಗ್​-11ನಲ್ಲಿ ಭಾರೀ ಬದಲಾವಣೆ..!

Kohli

ಹ್ಯಾಟ್ರಿಕ್​​ ಶತಕದ ಮೇಲೆ ಕಿಂಗ್ ಕೊಹ್ಲಿ ಕಣ್ಣು

ವಿರಾಟ್​ ಕೊಹ್ಲಿ ಸದ್ಯ ಹಳೆ ಖದರ್​ ಮರಳಿದಂತಿದೆ. ಸೌತ್​ ಆಫ್ರಿಕಾ ವಿರುದ್ಧದ ಸರಣಿಯ ಆಟ ಪ್ರೈಮ್​ ಫಾರ್ಮ್​ನಲ್ಲಿದ್ದ ಕೊಹ್ಲಿಯನ್ನ ನೆನಪಿಸ್ತಾ ಇದೆ. ಲೀಲಾಜಾಲವಾಗಿ ರನ್​ಗಳಿಸ್ತಾ ಇರೋ ಕಿಂಗ್​ ಕೊಹ್ಲಿ ನೀರು ಕುಡಿದಷ್ಟು ಈಸೀ ಅನ್ನಿಸುವಂತೆ ಶತಕ ಸಿಡಿಸ್ತಾ ಇದ್ದಾರೆ. ಬ್ಯಾಕ್​ ಟು ಬ್ಯಾಕ್ ಶತಕ ಸಿಡಿಸಿರೋ ಕೊಹ್ಲಿಯ ಕಣ್ಣು ಇದೀಗ ಹ್ಯಾಟ್ರಿಕ್​ ಶತಕದ ಮೇಲಿದೆ. ಕರಿಯರ್​​ನಲ್ಲಿ 2ನೇ ಬಾರಿ ಹ್ಯಾಟ್ರಿಕ್​ ಶತಕ ಬಾರಿಸಿದ ಅವಿಸ್ಮರಣೀಯ ಸಾಧನೆಯನ್ನ ಮಾಡೋಕೆ ಕೊಹ್ಲಿ ತುದಿಗಾಲಲ್ಲಿ ನಿಂತಿದ್ದಾರೆ. 

Advertisment

ವೈಜಾಗ್​ನಲ್ಲಿ ವಿರಾಟ್​ ವಿಶ್ವರೂಪ

ಒಂದು ಕಡೆ ಕೊಹ್ಲಿ ಅದ್ಭುತ ಟಚ್​​ನಲ್ಲಿದ್ದಾರೆ. ಇನ್ನೊಂದೆಡೆ ಇಂದಿನ ಪಂದ್ಯ ನಡೆಯೋ ವೈಜಾಗ್​ ಮೈದಾನ ಇದ್ಯಲ್ಲ.. ಇದು ಕೊಹ್ಲಿಯ ಲಕ್ಕಿ & ಫೇವರಿಟ್​ ಮೈದಾನ. ಈ ಮೈದಾನದಲ್ಲಿ ಪ್ಯಾಡ್​ ಕಟ್ಟಿ ಕಣಕ್ಕಿಳಿದಾಗೆಲ್ಲಾ ಕೊಹ್ಲಿ ಸಿಂಹದಂತೆ ಘರ್ಜಿಸಿದ್ದಾರೆ. ನಿರ್ಧಯವಾಗಿ ಬೌಲರ್​ಗಳನ್ನ ಬೆಂಡೆತ್ತಿ ಬಿಸಾಕಿದ್ದಾರೆ. ನೀವು ನಂಬ್ತಿರೋ ಇಲ್ವೋ? ಈ ಮೈದಾನದಲ್ಲಿ ಕೊಹ್ಲಿಯ ಒನ್​​ ಡೇ ಸರಾಸರಿ ಎಷ್ಟಿದೆ ಗೊತ್ತಾ? ಬರೋಬ್ಬರಿ 97.83! ಈ ಸರಾಸರಿಯನ್ನ ಕೇಳಿದ್ರೆ ಬೌಲರ್​ಗಳು ಬೆಚ್ಚಿ ಬೀಳಬೇಕು. 

ಇದನ್ನೂ ಓದಿ:‘ಟಾರ್ಗೆಟ್-16’ ಬೆನ್ನು ಬಿದ್ದ ಸೆಂಚುರಿ ಸ್ಟಾರ್​ ಕೊಹ್ಲಿ..! ಏನಿದು..?

Rohit Kohli

ವೈಜಾಗ್​ನಲ್ಲಿ ವಿರಾಟ್​ ಕೊಹ್ಲಿ 

ವೈಜಾಗ್​ ಮೈದಾನದಲ್ಲಿ ಈವರೆಗೆ 7 ಏಕದಿನ ಪಂದ್ಯಗಳನ್ನಾಡಿರೋ ವಿರಾಟ್​ ಕೊಹ್ಲಿ, 587 ರನ್​ಗಳಿಸಿದ್ದಾರೆ. ಬರೋಬ್ಬರಿ 97.83ರ ಸರಾಸರಿಯಲ್ಲಿ ರನ್​ ಕೊಳ್ಳೆ ಹೊಡೆದಿರೋ ಕೊಹ್ಲಿ, 2 ಹಾಫ್​ ಸೆಂಚುರಿ, 3 ಸೆಂಚುರಿ ಸಿಡಿಸಿದ್ದಾರೆ. 

Advertisment

ಕನ್ಸಿಸ್ಟೆಂಟ್​ ಆಟಕ್ಕೆ ಕೊಹ್ಲಿಯೇ ಕಿಂಗ್​

ಕಿಂಗ್​ ಕೊಹ್ಲಿ ಅಂದ್ರೆ ಕನ್ಸಿಸ್ಟೆನ್ಸಿ.. ಕನ್ಸಿಸ್ಟೆನ್ಸಿ ಅಂದ್ರೆ ಕೊಹ್ಲಿ.. ಎದುರಾಳಿ ದೇಶದ ಆಟಗಾರರು, ಫ್ಯಾನ್ಸ್​ ಕೂಡ ಈ ಮಾತನ್ನ ಒಪ್ತಾರೆ. ಕೊಹ್ಲಿಯ ಖದರ್​ ಅಂತದ್ದು. ನಂಬರ್​ 3 ಪೊಸಿಶನ್​ನಲ್ಲಿ ಕೊಹ್ಲಿ ಮಾಡಿರೋ ಅಸಾಧ್ಯವಾದ ಸಾಧನೆಯೇ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​. 2009ರ ಬಳಿಕ ಕೊಹ್ಲಿ 3 ಕ್ರಮಾಂಕದಲ್ಲಿ ಸಿಂಗಲ್​ ಆಗಿ 46 ಶತಕ ಸಿಡಿಸಿದ್ದಾರೆ. ಕೊಹ್ಲಿಯ ಈ ಸಾಧನೆಯನ್ನ ಯಾರೋ ಒಬ್ಬ ಆಟಗಾರನಲ್ಲ.. ಯಾವ ತಂಡಕ್ಕೂ ಕೂಡ ಮಾಡೋಕೆ ಸಾಧ್ಯ ಆಗಿಲ್ಲ. ಕೊಹ್ಲಿಯನ್ನ ಕಿಂಗ್​ ಅನ್ನೋದು ಸುಮ್ಮನೆ ಅಲ್ಲ. 

ಇದನ್ನೂ ಓದಿ: ವೈಜಾಗ್ ಜನರರೊಂದಿಗೆ ರೋಹಿತ್​ಗೆ ಭಾವನಾತ್ಮಕ ನಂಟು.. ಇವತ್ತಿನ ಪಂದ್ಯದಲ್ಲಿ ರೋಹಿತ್ ಮೇಲೆ ಎಲ್ಲರ ಕಣ್ಣು..!

KOHLI_ROHIT_AUS

2009ರ ಬಳಿಕ 3ನೇ ಕ್ರಮಾಂಕದಲ್ಲಿ ಶತಕ

2009ರ ಬಳಿಕ ಏಕದಿನ ಕ್ರಿಕೆಟ್​ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್​​ ಬೀಸಿ ಕೊಹ್ಲಿ ಒಬ್ಬರೇ 46 ಸೆಂಚುರಿ ಸಿಡಿಸಿದ್ದಾರೆ. ಈ ಸುದೀರ್ಘ ವರ್ಷಗಳಲ್ಲಿ ಪಾಕಿಸ್ತಾನ ಪರ 3ನೇ ಕ್ರಮಾಂಕದಲ್ಲಿ ಆಡಿದ ಎಲ್ಲಾ ಬ್ಯಾಟರ್ಸ್​ನ ಸೇರಿಸಿ 32 ಶತಕ ಬಂದಿವೆ. ಇನ್ನು ಶ್ರೀಲಂಕಾ ತಂಡದಿಂದ 26 ಶತಕ ಬಂದಿದ್ರೆ, ಆಸ್ಟ್ರೇಲಿಯಾ ತಂಡದಲ್ಲಿ 24 ಶತಕ ದಾಖಲಾಗಿವೆ. 

Advertisment

ಇದೊಂದು ಎಕ್ಸಾಂಪಲ್​ ಅಷ್ಟೇ.. ಕೊಹ್ಲಿಯನ್ನ ಕನ್ಸಿಸ್ಟೆನ್ಸಿ ಕಿಂಗ್​ ಅಂತಾ ನಿರೂಪಿಸೋದಕ್ಕೆ ಹಲವಾರು ಸಾಧನೆಗಳಿವೆ. ಸದ್ಯ ಬ್ಯಾಕ್​ ಟು ಬ್ಯಾಕ್​ ಸೆಂಚುರಿ ಬಾರಿಸಿರೋ ಕೊಹ್ಲಿ ಹ್ಯಾಟ್ರಿಕ್​ ಸಾಧನೆ ಮಾಡ್ತಾರೆ ಅನ್ನೋ ನಿರೀಕ್ಷೆ ದುಪ್ಪಟ್ಟಾಗಿರೋದಕ್ಕೂ ಇವೆಲ್ಲಾ ಕಾರಣವಾಗಿವೆ. ಮೊದಲ 2 ಪಂದ್ಯಗಳಲ್ಲಿ ಕೊಹ್ಲಿ ಆಡಿದ ಆಟವನ್ನ ನೋಡಿದ್ರೆ, ಕೊಹ್ಲಿ ಪಾಲಿಗೆ ಅದೇನು ಅಸಾಧ್ಯವಾದ ಸಾಧನೆಯೂ ಏನಲ್ಲ.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

Virat Kohli Kohli
Advertisment
Advertisment
Advertisment