Advertisment

‘ಟಾರ್ಗೆಟ್-16’ ಬೆನ್ನು ಬಿದ್ದ ಸೆಂಚುರಿ ಸ್ಟಾರ್​ ಕೊಹ್ಲಿ..! ಏನಿದು..?

ಸೌತ್​ ಆಫ್ರಿಕಾ ಎದುರು ಸತತ 2 ಶತಕ ಸಿಡಿಸಿದ ವಿರಾಟ್ ಕೊಹ್ಲಿ ಮುಂದೆ ಟಫ್ ಟಾಸ್ಕ್ ಒಂದಿದೆ. ಆ ಟಾಸ್ಕ್ ಅನ್ನ ವಿರಾಟ್ ಸಕ್ಸಸ್​​ಫುಲ್ ಆಗಿ ಚೇಸ್ ಮಾಡಿದ್ರೆ ಆತನ ಹಿಡಿಯೋರೇ ಇಲ್ಲ. ಅಷ್ಟಕ್ಕೂ ಆ ಟಾಸ್ಕ್ ಏನು? ಕೊಹ್ಲಿ ಟಾರ್ಗೆಟ್ 16 ಅಂತಿರೋದ್ಯಾಕೆ? ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

author-image
Ganesh Kerekuli
Kohli
Advertisment
  • ವಿಶ್ವಕಪ್​ಗೂ ಮುನ್ನ ಕೊಹ್ಲಿ ಟಾರ್ಗೆಟ್​​​​ ರೀಚ್ ಆಗ್ತಾರಾ..?
  • ತೆಂಡುಲ್ಕರ್ ದಾಖಲೆ ಬ್ರೇಕ್ ಮಾಡೋಕೆ ಬೆಸ್ಟ್ ಚಾನ್ಸ್​..!
  • ಅಸಾಧ್ಯವಾದದ್ದನ್ನ ಕೊಹ್ಲಿ ಸಾಧಿಸಿ ತೋರಿಸ್ತಾರಾ..?

ಸೌತ್​ ಆಫ್ರಿಕಾ ಎದುರು ಸತತ 2 ಶತಕ ಸಿಡಿಸಿದ ವಿರಾಟ್ ಕೊಹ್ಲಿ ಮುಂದೆ  ಟಫ್ ಟಾಸ್ಕ್ ಒಂದಿದೆ. ಆ ಟಾಸ್ಕ್ ಅನ್ನ ವಿರಾಟ್ ಸಕ್ಸಸ್​​ಫುಲ್ ಆಗಿ ಚೇಸ್ ಮಾಡಿದ್ರೆ ಆತನ ಹಿಡಿಯೋರೇ ಇಲ್ಲ.  ಅಷ್ಟಕ್ಕೂ ಆ ಟಾಸ್ಕ್ ಏನು? ಕೊಹ್ಲಿ ಟಾರ್ಗೆಟ್ 16 ಅಂತಿರೋದ್ಯಾಕೆ?  ಅನ್ನೋ ವಿವರ ಈ ಸ್ಟೋರಿಯಲ್ಲಿದೆ. 

Advertisment

17 ವರ್ಷಗಳ ಕ್ರಿಕೆಟ್ ಕರಿಯರ್. ಬೆಟ್ಟದಷ್ಟು ಸವಾಲುಗಳು. ಟೀಕೆಗಳು, ಅವಮಾನಗಳು, ನೋವು, ಕಲ್ಲು ಮುಳ್ಳಿನ ಹಾದಿ, ಕರಿಯರ್​​ ಮುಗಿದೇ ಹೋಯ್ತು ಅನ್ನೋ ಸಂದರ್ಭಗಳು. ಇವೆಲ್ಲವನ್ನ ವಿರಾಟ್ ಕೊಹ್ಲಿ ತನ್ನ ಜರ್ನಿಯಲ್ಲಿ ದಾಟಿ ಬಂದಿದ್ದಾರೆ. ಇದೀಗ ಅದೆಲ್ಲದಕ್ಕಿಂತ ಕಠಿಣ ಪರಿಸ್ಥಿತಿ ಕಿಂಗ್ ಕೊಹ್ಲಿಗೆ ಎದುರಾಗಿದೆ. ಅದೇ ಟಾರ್ಗೆಟ್ 16.

ವಿರಾಟ್ ಕೊಹ್ಲಿ ಮುಂದಿದೆ ಟಾರ್ಗೆಟ್ 16

ಸೌತ್​ ಆಫ್ರಿಕಾ ಎದುರು ಬ್ಯಾಕ್​ ಟು ಬ್ಯಾಕ್​ ಶತಕ ಸಿಡಿಸಿದ ಕೊಹ್ಲಿ ಇದೀಗ ಟಾರ್ಗೆಟ್ 16 ಅಂತಿದ್ದಾರೆ. ಶತಕಗಳ ಶತಕದ ದಾಖಲೆಯ ಮೇಲೆ ಕೊಹ್ಲಿ ಕಣ್ಣು ಬಿದ್ದಿದೆ. ಈಗಾಗಲೇ ಟೆಸ್ಟ್, ಏಕದಿನ ಮತ್ತು ಟಿ-20 ಕ್ರಿಕೆಟ್​ನಲ್ಲಿ ಕೊಹ್ಲಿ,  84 ಶತಕಗಳನ್ನ ಸಿಡಿಸಿದ್ದಾರೆ. 100 ಶತಕಗಳ ದಾಖಲೆಗೆ ವಿರಾಟ್​​ಗೆ ಇನ್ನು 16 ಶತಕಗಳು ಬೇಕಾಗಿದೆ. ಹೀಗಾಗಿ ಈಗ ಕೊಹ್ಲಿ ಟಾರ್ಗೆಟ್ 16ರ ಬೆನ್ನೇರಿದ್ದಾರೆ.

ಇದನ್ನೂ ಓದಿ: ದಾಖಲೆಗಳ ಗೊಂಚಲು.. ಶತಕಗಳ ವೈಭವ.. ಕ್ರಿಕೆಟ್ ಲೋಕಕ್ಕೆ ಹೊಸ ಆಯಾಮ ಕೊಟ್ಟ ಸೂರ್ಯವಂಶಿ..!

Advertisment

Virat kohli (1)

ವಿಶ್ವಕಪ್​ಗೂ ಮುನ್ನ ಟಾರ್ಗೆಟ್​​​​ ರೀಚ್ ಆಗ್ತಾರಾ?

ಟೆಸ್ಟ್, ಟಿ-20 ಕ್ರಿಕೆಟ್​​​ಗೆ ವಿರಾಟ್ ಗುಡ್​ಬೈ ಹೇಳಿದ್ದಾರೆ. ಸದ್ಯ ಕೊಹ್ಲಿ ODI ಫಾರ್ಮೆಟ್ ಮಾತ್ರ ಆಡ್ತಿದ್ದಾರೆ. ಕೊಹ್ಲಿ, ಒಂದೇ ಒಂದು ಫಾರ್ಮೆಟ್​​​ನಲ್ಲಿ, ಟಾರ್ಗೆಟ್ 16 ರೀಚ್ ಆಗಬೇಕಿದೆ. ಅಬ್ಬಬ್ಬಾ ಅಂದ್ರೆ ಕೊಹ್ಲಿ, 2027ರ ಏಕದಿನ ವಿಶ್ವಕಪ್​​ವರೆಗೂ ಟೀಮ್ ಇಂಡಿಯಾ ಪರ ಆಡಬಹುದು. ಅಷ್ಟರೊಳಗೆ ಕೊಹ್ಲಿ ಅಂದುಕೊಂಡಿದ್ದನ್ನ ಸಾಧಿಸಬೇಕು.  

40 ಪಂದ್ಯಗಳು, ಕೊಹ್ಲಿ ಕನಸು ನನಸಾಗುತ್ತಾ?

2027 ವಿಶ್ವಕಪ್​​ಗೆ ಇರೋದು ಕೇವಲ ಎರಡೂವರೆ ವರ್ಷ ಮಾತ್ರ. ಆ ಅವಧಿಯಲ್ಲಿ ಕೊಹ್ಲಿ, ವಿಶ್ವಕಪ್ ಸೇರಿದಂತೆ ಏನಿಲ್ಲಾ ಅಂದ್ರು 40 ಏಕದಿನ ಪಂದ್ಯಗಳನ್ನ ಆಡಬಹುದು. ಒಂದು ವೇಳೆ ಕೊಹ್ಲಿ ಫಿಟ್ ಆಗಿ ಎಲ್ಲಾ ಪಂದ್ಯಗಳನ್ನೂ ಆಡಿದ್ರೆ, ಟಾರ್ಗೆಟ್ 16 ಕನಸು ನನಸಾಗಬಹುದು. ಆದ್ರೆ ಅದು ಅಷ್ಟು ಸುಲಭವಲ್ಲ. ಆ ಸಾಧನೆ ಮಾಡಬೇಕಾದ್ರೆ ಕೊಹ್ಲಿ, ಬ್ಯಾಟಿಂಗ್ ಪರ್ಫಾಮೆನ್ಸ್ ಚೆನ್ನಾಗಿರಬೇಕು. 
ಕೊಹ್ಲಿಯಲ್ಲಿ ಒಂದು ವಿಶೇಷ ಕ್ಯಾರೆಕ್ಟರ್ ಇದೆ. ಆ ಕ್ಯಾರೆಕ್ಟರ್​ನಿಂದಲೇ ಕೊಹ್ಲಿ ಇವತ್ತು, ವಿಶ್ವ ಕ್ರಿಕೆಟ್​​ನ ಗ್ರೇಟೆಸ್ಟ್ ಪ್ಲೇಯರ್ ಎನಿಸಿಕೊಂಡಿರೋದು. ಕಠಿಣ ಪರಿಸ್ಥಿತಿಯಲ್ಲಿ ಪರ್ಫಾಮ್ ಮಾಡಿ ಸೈ ಎನಿಸಿಕೊಂಡಿರೋ ಕೊಹ್ಲಿ, ಅಸಾಧ್ಯವಾದದ್ದನ್ನ ಸಾಧಿಸಿ ತೋರಿಸಿದ್ದಾರೆ. ಇದೀಗ ಕೊಹ್ಲಿಗೆ ಅಂತಹದ್ದೇ ಒಂದು ಕಠಿಣ ಪರಿಸ್ಥಿತಿ ಎದುರಾಗಿದೆ. 37 ವರ್ಷದ ಕೊಹ್ಲಿಗೆ, ಇದು ಸಾಧ್ಯನಾ ಅನ್ನೋ ಪ್ರಶ್ನೆಯೂ ಎದುರಾಗಿದೆ.

ಇದನ್ನೂ ಓದಿ: ಇವತ್ತು ODI ಫೈನಲ್.. ಟೀಂ ಇಂಡಿಯಾ ಪ್ಲೇಯಿಂಗ್​-11ನಲ್ಲಿ ಭಾರೀ ಬದಲಾವಣೆ..!

Advertisment

Virat kohli

ದಾಖಲೆ ಬ್ರೇಕ್ ಮಾಡೋಕೆ ಬೆಸ್ಟ್ ಚಾನ್ಸ್​

ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡುಲ್ಕರ್​​​​​​ 100 ಶತಕಗಳನ್ನ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ. ತೆಂಡುಲ್ಕರ್​​ರ ದಾಖಲೆ ಮುರಿಯೋಕೆ, ಬೇರೆ ಯಾರಿಂದಲೂ ಸಾಧ್ಯವಿಲ್ಲ ಬಿಡಿ. ಆದ್ರೆ ಕೊಹ್ಲಿ ಮನಸು ಮಾಡಿದ್ರೆ ತೆಂಡುಲ್ಕರ್​​ರ ಹಂಡ್ರೆಡ್ ಸೆಂಚೂರಿಸ್ ಕ್ಲಬ್ ಸೇರಬಹುದು. ಕೊಹ್ಲಿ ಇನ್ನು ಒಂದೆಜ್ಜೆ ಮುಂದೆ ಹೋದ್ರೆ, ಕ್ರಿಕೆಟ್ ದೇವರ ದಾಖಲೆಯನ್ನೇ ಮುರಿಯಬಹುದು.​ 

ವಿರಾಟ್ ಕೊಹ್ಲಿ ಟಾರ್ಗೆಟ್ 16 ರೀಚ್ ಆಗ್ತಾರೋ ಇಲ್ವೋ ಗೊತ್ತಿಲ್ಲ. 2027ರ ವಿಶ್ವಕಪ್​​​​ವರೆಗೂ ತಂಡದಲ್ಲಿದ್ರೆ ಅವಕಾಶವಂತೂ ಇದೆ. ವಿರಾಟ್​​ ಪಾಲಿಗಂತೂ ಅಸಾಧ್ಯವಾದದ್ದು ಯಾವುದು ಅಲ್ಲ. ಹೀಗಾಗಿ ಏನು ಬೇಕಾದ್ರೂ ಆಗಬಹುದು. 

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Virat Kohli Virat Kohli beard Kohli
Advertisment
Advertisment
Advertisment