/newsfirstlive-kannada/media/post_attachments/wp-content/uploads/2025/03/Rohit-sharma-11.jpg)
ರಾಂಚಿ​​, ರಾಯ್​ಪುರ ಆಯ್ತು.. ಇಂದು ವಿಶಾಖ್​ ಪಟ್ಟಣದ ವೈಜಾಗ್​ ಸ್ಟೇಡಿಯಂ ಕೂಡ ಜಾಮ್​​ಪ್ಯಾಕ್ಡ್​ ಆಗೋದ್ರಲ್ಲಿ ಡೌಟೇ ಬೇಡ. ರನ್​ಮಷೀನ್​ ವಿರಾಟ್​ ಕೊಹ್ಲಿ ನೋಡೋಕೆ ಮಾತ್ರವಲ್ಲ. ಹಿಟ್​​ಮ್ಯಾನ್​ ರೋಹಿತ್​ ಶರ್ಮಾನ ಕಣ್ತುಂಬಿಕೊಳ್ಳೋಕೂ ಅಭಿಮಾನಿಗಳ ದಂಡೇ ಇವತ್ತು ಹರಿದು ಬರಲಿದೆ. ಮೈದಾನದಲ್ಲಿ ರೋಹಿತ್​, ರೋಹಿತ್​ ಅನ್ನೋ ರಣಕಹಳೆಯೇ ಮೊಳಗಲಿದೆ. ಮುಂಬೈಕರ್​ ರೋಹಿತ್​ ಪಾಲಿಗೆ ಈ ವೈಜಾಗ್​ ತಾಯ್ನಾಡು.
ರೋಹಿತ್​ ಶರ್ಮಾ ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಮುಂಬೈನಲ್ಲೇ. ಆದ್ರೂ ಈ ವೈಜಾಗ್​ ಅಂದ್ರೆ ವಿಶೇಷವಾದ ಪ್ರೀತಿಯಿದೆ. ಇಲ್ಲಿನ ಜನಕ್ಕೂ ರೋಹಿತ್​ ಅಂದ್ರೆ ಅಚ್ಚು ಮೆಚ್ಚು. ಯಾಕಂದ್ರೆ ಇದು ರೋಹಿತ್​ ಶರ್ಮಾ ತಾಯಿಯ ಊರು. ಹೀಗಾಗಿ ರೋಹಿತ್​ಗೆ ವೈಜಾಗ್​ ಹಾಗೂ ವೈಜಾಗ್​ನ ಜನರೊಂದಿಗೆ ಸ್ಪೆಷಲ್​ ನಂಟಿದೆ. ತಾಯಿಯ ನಾಡಿಗೆ ಮರಳಿರೋ ರೋಹಿತ್​ಗೆ ಅದ್ಧೂರಿ ಸ್ವಾಗತ ನೀಡೋಕೆ ಫ್ಯಾನ್ಸ್​ ರೆಡಿಯಾಗಿದ್ದಾರೆ.
/filters:format(webp)/newsfirstlive-kannada/media/media_files/2025/10/28/abhishek-nayar-and-rohit-sharma-2025-10-28-19-29-33.jpg)
ವೈಜಾಗ್​ಗೆ ಮರಳಿರೋ ರೋಹಿತ್​ ಶರ್ಮಾ ಮೇಲೆ ಅಭಿಮಾನಿಗಳ ದುಪ್ಪಟ್ಟು ನಿರೀಕ್ಷೆಯಿದೆ. ಹಿಟ್​ಮ್ಯಾನ್​ ಶರ್ಮಾ ಸೂಪರ್​ ಹಿಟ್​ ಪರ್ಫಾಮೆನ್ಸ್​ ನೀಡ್ತಾರೆ ಎಂದು ಫ್ಯಾನ್ಸ್​ ಕಾಯ್ತಿದ್ದಾರೆ. ಈ ನಿರೀಕ್ಷೆಗೆಲ್ಲಾ ಕಾರಣ ಏನ್​ ಗೊತ್ತಾ? ಈ ಹಿಂದಿನ ಟ್ರ್ಯಾಕ್​ ರೆಕಾರ್ಡ್​. ವೈ.ಎಸ್​ ರಾಜಶೇಖರ್​ ರೆಡ್ಡಿ ಸ್ಟೇಡಿಯಂನಲ್ಲಿ ಮುಂಬೈಕರ್​ ಜಬರ್ದಸ್ತ್​ ಬ್ಯಾಟಿಂಗ್​ ನಡೆಸಿದ್ದಾರೆ. ಈ ಸ್ಟೇಡಿಯಂನಲ್ಲಿ ಕಣಕ್ಕಿಳಿದಾಗೆಲ್ಲಾ ಎದುರಾಳಿಗಳ ಮೇಲೆ ದಂಡೆತ್ತಿ ಹೋಗಿ ರನ್​ ಶಿಕಾರಿ ನಡೆಸಿದ್ದಾರೆ.
ವೈಜಾಗ್​ನಲ್ಲಿ ರೋ‘ಹಿಟ್​’
ವೈಜಾಗ್​ನಲ್ಲಿ ಈವರೆಗೆ ರೋಹಿತ್​ ಶರ್ಮಾ 7 ಏಕದಿನ ಪಂದ್ಯ ಆಡಿದ್ದಾರೆ. 7 ಇನ್ನಿಂಗ್ಸ್​ಗಳಿಂದ ಬರೋಬ್ಬರಿ 59.16ರ ಸರಾಸರಿಯಲ್ಲಿ 355 ರನ್​ಗಳಿಸಿದ್ದಾರೆ. 2 ಹಾಫ್​ ಸೆಂಚುರಿ, 1 ಶತಕ ಸಿಡಿಸಿ ರೋ ಹಿಟ್​ ಆಗಿದ್ದಾರೆ. ಇಂದಿನ ಪಂದ್ಯದಲ್ಲಿ ರೋಹಿತ್​ ಶರ್ಮಾ ಕಣ್ಣು ಅವಿಸ್ಮರಣೀಯ ದಾಖಲೆಯೊಂದರ ಮೇಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 20 ಸಾವಿರ ರನ್​ ಪೂರೈಸಲು ರೋಹಿತ್​ ಶರ್ಮಾ ಕೇವಲ 27 ರನ್​ಗಳು ಬೇಕಿವೆ. ಇಂದಿನ ಪಂದ್ಯದಲ್ಲಿ 27 ರನ್​ಗಳಿಸಿದ ಕೂಡಲೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 20 ಸಾವಿರ ರನ್​ ಪೂರೈಸಿದ ಭಾರತದ 4ನೇ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ರೋಹಿತ್​ ಪಾತ್ರರಾಗಲಿದ್ದಾರೆ. ಸಚಿನ್​, ದ್ರಾವಿಡ್​, ಕೊಹ್ಲಿ ಬಳಿಕ ರೋಹಿತ್​ ಶರ್ಮಾ ಅವಿಸ್ಮರಣೀಯ ಸಾಧನೆ ಮಾಡಲಿದ್ದಾರೆ.
ಇದನ್ನೂ ಓದಿ: ‘ಟಾರ್ಗೆಟ್-16’ ಬೆನ್ನು ಬಿದ್ದ ಸೆಂಚುರಿ ಸ್ಟಾರ್​ ಕೊಹ್ಲಿ..! ಏನಿದು..?
/filters:format(webp)/newsfirstlive-kannada/media/media_files/2025/10/28/abhishek-nayar-and-rohit-sharma-1-2025-10-28-19-31-31.jpg)
ರೋಹಿತ್​ಗೆ​ ರಿಯಲ್​ ಟೆಸ್ಟ್
ಈ ಹಿಂದಿನ ಸಾಲಿಡ್​ ಟ್ರ್ಯಾಕ್​ ರೆಕಾರ್ಡ್​ನ ಹೊರತಾಗಿ ರೋಹಿತ್​ ಶರ್ಮಾ ಪಾಲಿಗೆ ಇಂದಿನ ಪಂದ್ಯದಲ್ಲಿ ರಿಯಲ್​ ಟೆಸ್ಟ್​ ಕಾದಿದೆ. ಹಾಫ್​ ಸೆಂಚುರಿ ಸಿಡಿಸಿ ಸರಣಿಯನ್ನ ಕಿಕ್​ ಸ್ಟಾರ್ಟ್​ ಮಾಡಿದ ರೋಹಿತ್​ 2ನೇ ಏಕದಿನದಲ್ಲಿ ಅಲ್ಪಮೊತ್ತಕ್ಕೆ ನಿರ್ಗಮಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ 2027ರ ವಿಶ್ವಕಪ್​ ಆಡೋ ಮಹದಾಸೆ ಹೊಂದಿರೋ ರೋಹಿತ್​ ಪಾಲಿಗೆ ಪ್ರತಿ ಪಂದ್ಯದಲ್ಲೂ ಪರ್ಫಾರ್ಮ್​ ಮಾಡಬೇಕಾದ ಒತ್ತಡವಿದೆ. ಕಳೆದ ಪಂದ್ಯದಲ್ಲಿ ಕೇವಲ 14 ರನ್​ಗಳಿಸಿರೋದ್ರಿಂದ ಇಂದಿನ ಪಂದ್ಯದಲ್ಲಿ ಬಿಗ್ ಸ್ಕೋರ್​ಗಳಿಸಬೇಕಾದ ಸವಾಲು ಹಿಟ್​ಮ್ಯಾನ್​ಗಿದೆ.
ಅಭಿಮಾನಿಗಳ ವಲಯದಲ್ಲೂ ಹಿಟ್​​ಮ್ಯಾನ್​​ ಬ್ಯಾಟ್​ನಿಂದ ಬಿಗ್​ ಇನ್ನಿಂಗ್ಸ್​ನ ನಿರೀಕ್ಷೆಯಿದೆ. ತಾಯಿಯ ನಾಡಲ್ಲಿ ಸೂಪರ್​ ಹಿಟ್ ಆಟವಾಡಿ ಫ್ಯಾನ್ಸ್​ಗೆ ರೋಹಿತ್​ ಭರ್ಜರಿ ಟ್ರೀಟ್​ ನೀಡ್ತಾರಾ? ಕಾದು ನೋಡೋಣ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us