/newsfirstlive-kannada/media/media_files/2025/12/06/yash-2025-12-06-11-25-47.jpg)
ಬೆಂಗಳೂರು: ಆದಾಯ ತೆರಿಗೆ ಪ್ರಕರಣದಲ್ಲಿ ನಟ ಯಶ್​ಗೆ (Rocking Star Yash) ಹೈಕೋರ್ಟ್​ ಬಿಗ್ ರಿಲೀಫ್ ನೀಡಿದೆ. 2013-14 ರಿಂದ 2018-19 ಅವಧಿಗೆ ಆದಾಯ ತೆರಿಗೆ ಇಲಾಖೆ ಯಶ್​ಗೆ ನೀಡಿದ್ದ ನೋಟಿಸ್ ರದ್ದು ಮಾಡಿ ನ್ಯಾ.ಎಸ್ ಆರ್ ಕೃಷ್ಣಕುಮಾರ್ ಅವರಿದ್ದ ಪೀಠ ಆದೇಶ ಹೊರಡಿಸಿದೆ.
ಹೊಂಬಾಳೆ ಕನ್ಸ್​ಟ್ರಕ್ಷನ್ಸ್​​ಗೆ (Hombale construction) ಸಂಬಂಧಿಸಿ ಐಟಿ ಇಲಾಖೆ ತನಿಖೆ ನಡೆಸಿತ್ತು. ಈ ಪ್ರಕರಣದಲ್ಲಿ ನಟ ಯಶ್ ವಾಸಿಸಿದ್ದ ಹೊಸಕೆರೆಹಳ್ಳಿ ಮನೆ, ಅವರು ಬಾಡಿಗೆ ಪಡೆದು ಉಳಿದುಕೊಂಡಿದ್ದ ತಾಜ್ ವೆಸ್ಟ್ ಎಂಡ್​ ರೂಮ್ ಶೋಧಿಸಿತ್ತು. ಅದಾದ ಬಳಿಕ ಅಂದರೆ 2021ರಲ್ಲಿ 6 ವರ್ಷಗಳಿಗೆ ಸಂಬಂಧಿಸಿ ಯಶ್ ಅವರಿಗೆ ನೋಟಿಸ್ ಜಾರಿಗೊಳಿಸಿತ್ತು.
ಇದನ್ನೂ ಓದಿ:‘ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನು ಇದ್ದೇನೆ’ ರಿಷಬ್ ಶೆಟ್ಟಿಗೆ ಪಂಜುರ್ಲಿ ದೈವ ಅಭಯ..!
/filters:format(webp)/newsfirstlive-kannada/media/post_attachments/wp-content/uploads/2025/03/YASH-2.jpg)
ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 153 ಸಿ ಅಡಿ ನೋಟಿಸ್ ನೀಡಲಾಗಿತ್ತು. ಡಿಸೆಂಬರ್ 12, 2019 ರ ನೋಟಿಸ್ ಪ್ರಶ್ನಿಸಿ, 2021ರಲ್ಲಿ ಯಶ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ನಮ್ಮ ಮನೆಯನ್ನು ಶೋಧಿಸಿದ ಬಳಿಕವೂ ‘ಶೋಧನೆ ನಡೆಸದ ವ್ಯಕ್ತಿ’ ಎಂದು ಪರಿಗಣಿಸಿ ಐಟಿ ಇಲಾಖೆ ನೋಟಿಸ್ ನೀಡಿದ್ದು ಏಕೆ ಅನ್ನೋದು ಯಶ್ ವಾದವಾಗಿತ್ತು.
ತಮ್ಮ ನಿವಾಸ ಶೋಧಿಸಿದ್ದರೂ 153 ಸಿ ಅಡಿ ನೋಟಿಸ್ ಕಾನೂನು ಬಾಹಿರವೆಂದು ಯಶ್ ಪರ ವಕೀಲರ ವಾದ ಮಂಡಿಸಿದ್ದರು. ಹೊಂಬಾಳೆ ಕನ್ಷ್​ಟ್ರಕ್ಷನ್ ವಿಜಯ್ ಕುಮಾರ್ ವಿರುದ್ಧವೂ ವಾರೆಂಟ್ ಪಡೆಯಲಾಗಿತ್ತು. ಹೊಂಬಾಳೆಗೆ ಸಂಬಂಧಪಟ್ಟಂತೆ ಮಾತ್ರ ಯಶ್ ನಿವಾಸದಲ್ಲಿ ಶೋಧಕಾರ್ಯ ನಡೆದಿತ್ತು. ಹೀಗಾಗಿ ಯಶ್ ಶೋಧನೆಗೆ ಒಳಗಾದ ವ್ಯಕ್ತಿಯಲ್ಲ ಎಂದು ಐಟಿ ವಾದ ಮಾಡಿತ್ತು.
ಶೋಧಕಾರ್ಯ ನಡೆಸಿದ್ದರೂ 153 ಸಿ ಅಡಿ ನೋಟಿಸ್ ಕಾನೂನು ಬಾಹಿರ. ಶೋಧನೆ ವೇಳೆ ದಾಖಲೆ ಸಂಗ್ರಹಿಸಿ ಮಹಜರ್ ಮಾಡಲಾಗಿದೆ. ಹೀಗಿದ್ದೂ ಸೆ.153 ಸಿ ಅಡಿ ಶೋಧನೆಗೊಳಗಾಗದ ವ್ಯಕ್ತಿಯೆಂದು ನೋಟಿಸ್ ನೀಡಿರೋದು ಸರಿಯಲ್ಲ ಎಂದು ಯಶ್ ಪರ ವಾರ ಮಂಡನೆಯಾಗಿತ್ತು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಪೀಠವು ಐಟಿ ಇಲಾಖೆ ನೀಡಿದ್ದ ನೋಟಿಸ್ ಅನ್ನು ರದ್ದು ಮಾಡಿದೆ.
ಇದನ್ನೂ ಓದಿ: ದರ್ಶನ್ ಅಭಿನಯದ ಡೆವಿಲ್ ಟ್ರೈಲರ್​ ಔಟ್​; ಗಿಲ್ಲಿ ಖಡಕ್ ಡೈಲಾಗ್..! VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us