/newsfirstlive-kannada/media/media_files/2025/10/24/divya_suresh_car-2025-10-24-11-21-46.jpg)
ಬೆಂಗಳೂರು: ಬಿಗ್​ಬಾಸ್​ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್​ ಹಿಟ್ ಅಂಡ್ ರನ್ ಮಾಡಿ ಪರಾರಿಯಾಗಿದ್ದಾರೆ ಎನ್ನುವ ಆರೋಪ ತಡವಾಗಿ ಬೆಳಕಿಗೆ ಬಂದಿದೆ. ಬ್ಯಾಟರಾಯನಪುರದ ಎಂ.ಎಂ.ರಸ್ತೆಯಲ್ಲಿ ದಿವ್ಯಾ ಸುರೇಶ್ ಅವರು ಕಾರನ್ನು​ ವೇಗವಾಗಿ ನಿರ್ಲಕ್ಷ್ಯದ ಚಾಲನೆ ಮಾಡಿ ಬೈಕ್​ಗೆ ಡಿಕ್ಕಿ ಹೊಡೆದು ಹಾಗೇ ಹೋಗಿದ್ದರು.
ನಟಿ ದಿವ್ಯಾ ಸುರೇಶ್​ ಬ್ಯಾಟರಾಯನಪುರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಕಾರ ಅಲ್ಲಿ ವೇಗವಾಗಿ ಬಂದು ಬೈಕ್​ಗೆ ಡಿಕ್ಕಿ ಹೊಡೆದಿದ್ದರು. ಇದರ ಪರಿಣಾಮ ಬೈಕ್​ನಲ್ಲಿದ್ದ ಮೂವರು ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಅಶ್ವಿನಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಬಳಿಕ ದಿನಾಂಕ 7ರಂದು ಬ್ಯಾಟರಾಯನಪುರ ಠಾಣೆಗೆ ಗಾಯಾಳುಗಳ ಸಂಬಂಧಿ ಕಿರಣ್ ದೂರು ನೀಡಿದ್ದರು.
ಇದನ್ನೂ ಓದಿ:BBK12; ಸೆಡೆ, ನಾಲಿಗೆ ಸೀಳಿ ಬಿಡ್ತೀನಿ.. ಅಯ್ಯೋ ಕಾಕ್ರೂಚ್ ಸುಧಿ ಮಾತುಗಳಿಗೆ ಸ್ಪರ್ಧಿಗಳು ಫುಲ್ ಶಾಕ್!
/filters:format(webp)/newsfirstlive-kannada/media/media_files/2025/10/24/divya_suresh_car_1-2025-10-24-11-22-53.jpg)
ಆಗಿದ್ದೇನು..?
ದೂರುದಾರ ಕಿರಣ್ ಅವರ ಸಂಬಂಧಿ ಅನುಷಾಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಬೈಕ್​ನಲ್ಲಿ ಅನುಷಾ, ಅನಿತಾ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ಬ್ಯಾಟರಾನಪುರದ ಎಂ.ಎಂ ರಸ್ತೆ ಬಳಿ ನಾಯಿಗಳು ಬೊಗಳಿವೆ. ಭಯದಿಂದ ಕಿರಣ್ ಬೈಕ್​ನಲ್ಲಿ ಸ್ವಲ್ಪ ಬಲ ಬದಿಗೆ ಹೋಗಿದ್ದಾರೆ. ಈ ವೇಳೆ ವೇಗವಾಗಿ ಕಾರನ್ನು ಚಾಲನೆ ಮಾಡಿಕೊಂಡು ಬಂದ ದಿವ್ಯಾ, ಬೈಕ್​ಗೆ ಡಿಕ್ಕಿ ಹೊಡೆದು ಹಾಗೇ ಪರಾರಿಯಾಗಿದ್ದಾರೆ.
ಅಶ್ವಿನಿ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು, ಅನಿತಾ ಕಾಲಿನ ಮಂಡಿ ಚಿಪ್ಪು ಮುರಿದಿದೆ ಎಂದು ಹೇಳಿದ್ದಾರೆ. ಬಳಿಕ ಅಕ್ಟೋಬರ್​ 7 ರಂದು ಬ್ಯಾಟರಾಯನಪುರ ಠಾಣೆಯಲ್ಲಿ ಕಿರಣ್ ದೂರು ನೀಡಿದ್ದು ಸಂಚಾರಿ ಪೊಲೀಸರು ಸಿಸಿಟಿವಿ ಮೂಲಕ ಕಾರು ನಂಬರ್ ಟ್ರೇಸ್ ಮಾಡಿದ್ದಾಗ ದಿವ್ಯಾ ಸುರೇಶ್ ಮಾಡಿರುವ ಆಕ್ಸಿಡೆಂಟ್​ ಗೊತ್ತಾಗಿದೆ. ದಿವ್ಯಾ ಸುರೇಶ್ ಕಾರು ಪತ್ತೆ ಮಾಡಿ ಪೊಲೀಸರು ಸೀಜ್ ಮಾಡಿದ್ದರು. ಬಳಿಕ ಕಾರನ್ನು ಬಿಡಿಸಿಕೊಂಡು ಹೋಗಿದ್ದು ಪ್ರಕರಣದ ತನಿಖೆ ಈಗಲೂ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us