/newsfirstlive-kannada/media/media_files/2025/08/11/kiran-raj-karna-2025-08-11-18-41-24.jpg)
ದಿನದಿಂದ ದಿನಕ್ಕೆ ಕರ್ಣನ ಹವಾ ಜೋರಾಗುತ್ತಲೇ ಇದೆ. ತೆರೆಗೆ ಬಂದ ದಿನವೇ ಕರ್ಣ ಸೀರಿಯಲ್ ಹೊಸ ದಾಖಲೆ ನಿರ್ಮಿಸಿತ್ತು. ಸೀರಿಯಲ್ ಶುರುವಾದ ದಿನದಿಂದ ಟಿಆರ್ಪಿಯಲ್ಲಿ ಟಾಪ್ ಒನ್ ಸ್ಥಾನವನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ.
ಇದನ್ನೂ ಓದಿ:‘ಗಜ’ನಿಗೆ ಕೋಪ ತರಿಸಿದ ಟೂರಿಸ್ಟ್.. ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋದವನ ಮೇಲೆ ಕಾಡಾನೆ ಅಟ್ಯಾಕ್
ಅದರಲ್ಲೂ ವೀಕ್ಷಕರು ಕರ್ಣ ಸೀರಿಯಲ್ ನೋಡಿ ಫಿದಾ ಆಗಿದ್ದಾರೆ. ಸದ್ಯ ವೀಕ್ಷಕರ ಫೇವರಿಟ್ ಲಿಸ್ಟ್ನಲ್ಲಿ ಕರ್ಣನಿಗೆ ವಿಶೇಷ ಸ್ಥಾನ ಸಿಕ್ಕಿದೆ. ಸ್ಟಾರ್ಗಳೇ ತುಂಬಿರೋ ಸೀರಿಯಲ್ ಬಗ್ಗೆ ಇದ್ದ ನಿರೀಕ್ಷೆ ಹುಸಿ ಆಗಲಿಲ್ಲ. ನಂಬರ್ ಒನ್ ಸ್ಥಾನದಲ್ಲಿ ಕರ್ಣನ ಮೆರಗು ಮೆರವಣಿಗೆ ಮುಂದುವರೆದಿದೆ. ಶೃತಿ ನಾಯ್ಡು ನಿರ್ಮಾಣ, ರಮೇಶ್ ಇಂದಿರಾ ಅವರ ನಿರ್ದೇಶನದ ಕೈಚಳಕ ಕ್ಲಿಕ್ ಆಗಿದ್ದು, ಕರ್ಣನ ಮೇಕಿಂಗ್ ಕ್ವಾಲಿಟಿ ಅಂತೂ ಅದ್ಭುತವಾಗಿ ಮೂಡಿ ಬಂದಿದೆ. ಫೈಟು.. ಹಾಡು.. ಡ್ಯಾನ್ಸು.. ಸ್ನೇಹ.. ಲವ್ವು.. ನೋವು.. ಅಬ್ಬಾ ಹೀಗೆ ಅರ್ಧ ಗಂಟೆ ಬ್ಲಾಕ್ ಬಾಸ್ಟರ್ ಸಿನಿಮಾ ನೋಡಿದ ಅನುಭವ ನೀಡ್ತಿದೆ ಕರ್ಣ ಸೀರಿಯಲ್.
ಯುವತಿಯ ಕಲೆಗೆ ಮನಸೋತ ಫ್ಯಾನ್ಸ್
ಕರ್ಣ ಪಾತ್ರದಲ್ಲಿ ನಟ ಕಿರಣ್ ರಾಜ್ ಅಭಿನಯಿಸುತ್ತಿದ್ದಾರೆ. ನಟ ಕಿರಣ್ ರಾಜ್ ಅವರ ಅಭಿಮಾನಿಗಳ ಬಗ್ಗೆ ಹೇಳಬೇಕಿಲ್ಲ. ಕಿರಣ್ ರಾಜ್ ಅವರು ಯಾವುದೇ ಕೆಲಸಕ್ಕೆ ಕೈ ಹಾಕಿದ್ರೂ ಅಲ್ಲಿ ಅಭಿಮಾನಿಗಳು ಹಾರೈಸುತ್ತಾರೆ. ಆದ್ರೆ ಇಲ್ಲೊಬ್ಬ ಅಭಿಮಾನಿ ನೀರಿನ ಮೇಲೆ ರಂಗೋಲಿಯಲ್ಲಿ ಕಿರಣ್ ರಾಜ್ ಅವರ ಭಾವಚಿತ್ರವನ್ನು ಬಿಡಿಸಿದ್ದಾರೆ. ಇದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಯುವತಿಯ ಕಲೆಗೆ ಮನಸೋತಿದ್ದಾರೆ.
ಇನ್ನೂ, ಕಲಾವಿದರ ಬಗ್ಗೆ ಹೆಚ್ಚಿಗೆ ಮಾತಿಲ್ಲ. ಪ್ರತಿಯೊಬ್ಬರ ಅಭಿನಯಕ್ಕೂ ಒಂದಂಕ ಜಾಸ್ತಿನೇ ಕೊಡಬಹುದು. ಅದರಲ್ಲೂ ಮುಖ್ಯವಾಗಿ ಆಶಾ ಅಮ್ಮ ಹಾಗೂ ಗಾಯತ್ರಿ ಅಮ್ಮನ ಸ್ನೇಹದ ಮಾತು. ಹಿರಿ ವಯಸ್ಸಲ್ಲೂ ಮಗುವಿನ ರೀತಿ ಆಡೋ ಅವರ ನಡೆ, ನುಡಿಗೆ ವೀಕ್ಷಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟೆಲ್ಲಾ ಮಸಾಲೆದಾರ್ ದೃಶ್ಯಗಳು ಇದ್ಮೇಲೆ ಕರ್ಣನಿಗೆ ಮನಸೋಲದೇ ಇರ್ತಾರಾ ವೀಕ್ಷಕರು? ಕರ್ಣ ಟಿಆರ್ಪಿನಲ್ಲಿ ನಂಬರ್ ಒನ್. ಈ ಖುಷಿಯನ್ನು ಮೊನ್ನೆಯಷ್ಟೇ ಸೇಲೆಬ್ರೇಟ್ ಮಾಡಿತ್ತು ಸೀರಿಯಲ್ ತಂಡ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ