/newsfirstlive-kannada/media/media_files/2025/10/07/ahwini-vs-ashwini-sn-2025-10-07-08-35-30.jpg)
ಬಿಗ್​ಬಾಸ್​ ಮನೆಯಲ್ಲಿ ಅಶ್ವಿನಿ ಗೌಡ ಕೆಲವು ಸ್ಪರ್ಧಿಗಳಿಗೆ ದೊಡ್ಡ ವಿಲನ್ ಆಗಿ ಕಾಣ್ತಿದ್ದಾರೆ. ಮೊದಲ ದಿನದಿಂದ ಗತ್ತಿನಲ್ಲಿರುವ ಅಶ್ವಿನಿ ಗೌಡ ವಿರುದ್ಧ ಸೇಡು ತೀರಿಸಿಕೊಳ್ಳಲು ಇತರೆ ಸ್ಪರ್ಧಿಗಳು ಕಾಯ್ತಿದ್ದಾರೆ. ಈ ಮಧ್ಯೆ ನಿನ್ನೆಯ ಸಂಚಿಕೆಯಲ್ಲಿ ಬರೀ ಗಲಾಟೆಯೇ ಆಗಿದೆ. ಅದು ಇವತ್ತೂ ಕೂಡ ಮುಂದುವರಿಯುವ ಲಕ್ಷಣ ಕಾಣ್ತಿದೆ.
ಅಶ್ವಿನಿ ಗೌಡ vs ಅಶ್ವಿನಿ ಎಸ್​​.ಎನ್
ಅಶ್ವಿನಿ ಗೌಡ ಮತ್ತು ಅಶ್ವಿನಿ ಎಸ್​.ಎನ್​. ಮಧ್ಯೆ ಫೈಟ್ ನಡೆದಿದೆ. ಕಲರ್ಸ್ ಕನ್ನಡ ಇಂದು ಬೆಳಗ್ಗೆ ಪ್ರೊಮೋ ಶೇರ್ ಮಾಡಿದೆ. ಅದರಲ್ಲಿ ನೀರಿನ ಬಾಟಲಿ ವಿಚಾರಕ್ಕೆ ಎಳೆದಾಡಿಕೊಳ್ತಿರೋದನ್ನು ನೋಡಬಹುದು. ಟಚ್ ಮಾಡಿ ನೋಡೋಣ. ತಾಕತ್ತಿದ್ದರೆ ಟಚ್ ಮಾಡಿ ನೋಡೋಣ ಎಂದು ಅಶ್ವಿನಿ ಗೌಡ ಉದ್ರೇಕದ ಮಾತುಗಳನ್ನ ಆಡಿದ್ದಾರೆ. ನಂತರದ ವಿಡಿಯೋ ಕ್ಲಿಪ್​ನಲ್ಲಿ ಅಶ್ವಿನಿ ಗೌಡ ಮತ್ತು ಅಶ್ವಿನಿ ಎಸ್​​.ಎನ್ ಕಿತ್ತಾಡಿಕೊಂಡಿದ್ದಾರೆ.
ಇದನ್ನೂ ಓದಿ: ಕಾಂತಾರ ಭರ್ಜರಿ ಕಲೆಕ್ಷನ್.. 4 ದಿನದಲ್ಲಿ ಎಷ್ಟು ಕೋಟಿ ಬಾಚಿದೆ ಗೊತ್ತಾ..?
ಇದನ್ನು ನೋಡುತ್ತ ನಿಂತಿದ್ದ ಜಾಹ್ನವಿ ದೈಹಿಕ ಹಲ್ಲೆ ಎಂದು ಜೋರಾಗಿ ಕೂಗಿದ್ದಾರೆ. ಇಬ್ಬರ ಗಲಾಟೆಯನ್ನು ನೋಡಿದ ಅಸೂರ ಕಾಕ್ರೋಚ್​ ಸುಮ್ಮನೆ ಗುರಾಯಿಸುತ್ತ ಕೂತಿದ್ದಾರೆ. ಆಗ ಅಶ್ವಿನಿ ಮತ್ತು ಅಶ್ವಿನಿ ಎಸ್​.ಎನ್ ಮಧ್ಯೆ ವಾಗ್ಯುದ್ಧ ನಡೆದಿದೆ. ಇದನ್ನು ಇತರೆ ಸ್ಪರ್ಧಿಗಳು ಕಂಗಾಲಾಗಿ ನೋಡುತ್ತ ನಿಂತಿದ್ದಾರೆ.
ಅಶ್ವಿನಿ ಗೌಡ vs ಅಶ್ವಿನಿ ಎಸ್.ಎನ್; ಮೂಕವಿಸ್ಮಿತರಾದ ಮನೆಮಂದಿ
— Colors Kannada (@ColorsKannada) October 7, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/tuAsFCpAQ6
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ