/newsfirstlive-kannada/media/media_files/2025/08/17/ritvvikk-mathad1-2025-08-17-13-23-05.jpg)
ಗಿಣಿರಾಮ, ನಿನಗಾಗಿ ಖ್ಯಾತಿಯ ನಟ ರಿತ್ವಿಕ್​ ಮಠದ್, ಸುಮನ್​ ದಂಪತಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಟ ರಿತ್ವಿಕ್​ ಮಠದ್ ಸುಮನ್ ದಂಪತಿ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಈ ಬಾರಿಯ ಬಿಗ್​ಬಾಸ್​​ಗೆ ಅನಯಾ ಬಂಗಾರ್ ಎಂಟ್ರಿ..?
​ರಿತ್ವಿಕ್​ ತಂದೆಯಾಗಿ ಬಡ್ತಿ ಹೊಂದಿರೋ ಖುಷಿಯಲ್ಲಿದ್ದಾರೆ. ಈ ಸಂತೋಷದ ವಿಚಾರವನ್ನು ನಟ ರಿತ್ವಿಕ್​ ಮಠದ್ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಮಗುವಿನ ಕೈ ಇರೋ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
/filters:format(webp)/newsfirstlive-kannada/media/media_files/2025/08/17/ritvvikk-mathad2-2025-08-17-13-31-23.jpg)
ಇನ್ನೂ, ನಟ ರಿತ್ವಿಕ್​ ಮಠದ್ ಪತ್ನಿ ಸುಮನ್ 15ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಏನೆಂದರೆ 79ನೇ ಸ್ವಾತಂತ್ರ್ಯ ದಿನಾಚರಣೆಯಂದೇ ರಿತ್ವಿಕ್​ ಮಠದ್ ಮನೆಗೆ ಹೊಸ ಅತಿಥಿ ಆಗಮನವಾಗಿದೆ.
/filters:format(webp)/newsfirstlive-kannada/media/media_files/2025/08/03/ritvvikk-mathad-2025-08-03-12-59-43.jpg)
ಇತ್ತೀಚೆಗಷ್ಟೇ ನಟ ತಮ್ಮ ಪತ್ನಿ ಸುಮನ್​ ಅವರಿಗೆ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದರು. ಸೀಮಂತ ಕಾರ್ಯಕ್ರಮದಲ್ಲಿ ನಿನಗಾಗಿ ಕಲಾವಿದರಾದ ದಿವ್ಯ ಉರುಡುಗ, ಮಗಳ ಪಾತ್ರ ಮಾಡ್ತಿರೋ ಬಾಲ ನಟಿ ಸಿರಿ ಸಿಂಚನ ಕುಟುಂಬ, ರಚನಾ ತಂಗಿ ಪಾತ್ರ ಮಾಡ್ತಿರೋ ಸುಮೋಕ್ಷ ರಾಯನ್​, ರೋಹಿ ಕ್ರಿಶ್​, ಬಾಲ ಪಾತ್ರ ಮಾಡ್ತಿರೋ ನಟ, ಹಾಗೂ ಚಿಕ್ಕಪ್ಪ ಪಾತ್ರ ಮಾಡ್ತಿರೋ ಪುನೀತ್​ ಸೇರಿದಂತೆ ಆತ್ಮಿಯರು ಭಾಗಿಯಾಗಿ ಶುಭ ಕೋರಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us